Advertisement

Kiwifruit: ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕಿವಿ ಹಣ್ಣಿನಲ್ಲಿ ಹಲವು ಆರೋಗ್ಯಕರ ಲಾಭಗಳು

06:25 PM Jul 13, 2023 | Team Udayavani |

ನಮ್ಮ ದೇಹ ಆರೋಗ್ಯವಾಗಿಡಲು ದೈನಂದಿನ ಆಹಾರದೊಂದಿಗೆ ಅನೇಕ ರೀತಿಯ ಪೋಷಕಾಂಶಗಳು, ವಿಟಮಿನ್‌ಗಳು, ಮಿನರಲ್‌ ಗಳು ಅಗತ್ಯವಾಗಿ ಬೇಕಾಗುತ್ತದೆ. ನಮ್ಮ ದೇಹಕ್ಕೆ ರೋಗನಿರೋಧಕ ಶಕ್ತಿ, ಜೀವಸತ್ವ ಹೆಚ್ಚಿಸಲು ಹಣ್ಣುಗಳು ಹಾಗೂ ತರಕಾರಿಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದರೆ ತಪ್ಪಲ್ಲ. ಅಂತಹ ಹಣ್ಣುಗಳಲ್ಲಿ ಕಿವಿ ಹಣ್ಣು ಕೂಡಾ ಒಂದು.

Advertisement

ಕಿವಿ ಹಣ್ಣು ವರ್ಷವಿಡೀ ದೊರೆಯುವ ಒಂದು ಹಣ್ಣಾಗಿದ್ದು, ಸೂಪರ್‌ಫುಡ್ ವಿಭಾಗದಲ್ಲಿ ಕಿವಿಹಣ್ಣು ಮೊದಲ ಸ್ಥಾನ ಪಡೆದುಕೊಂಡಿದೆ. ಕಿವಿ ಹಣ್ಣಿನಲ್ಲಿ ಆರೋಗ್ಯಕ್ಕೆ ಅಗತ್ಯವಾದ ಅನೇಕ ಪ್ರಮುಖ ಪೋಷಕಾಂಶಗಳಿವೆ.

ಹುಳಿ ಮತ್ತು ಸಿಹಿ ಅಂಶ ಹೊಂದಿರುವ ಕಿವಿ ಹಣ್ಣಿನ ರಸ ಕುಡಿಯುವುದರಿಂದ ಹಲವಾರು ಗಂಭೀರ ಕಾಯಿಲೆಗಳಿಂದ ದೇಹ ರಕ್ಷಿಸಬಹುದು. ಬೇಸಿಗೆಯಲ್ಲಿ  ಕಿವಿ ರಸ ಯಾವುದೇ ಔಷಧಿಗಿಂತ ಕಡಿಮೆಯಿಲ್ಲ ಎನ್ನಲಾಗುತ್ತದೆ.

ವಿಟಮಿನ್ ಸಿ, ವಿಟಮಿನ್ ಕೆ, ವಿಟಮಿನ್ ಇ, ಫೋಲೇಟ್, ಪೊಟ್ಯಾಸಿಯಮ್ ಅಂಶ ಈ ಹಣ್ಣಿನಲ್ಲಿದೆ. ಇದರಲ್ಲಿ( ಆ್ಯಂಟಿ ಆಕ್ಸಿಡೆಂಟ್‌) ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಇಷ್ಟು ಮಾತ್ರವಲ್ಲದೇ ಇನ್ನೂ ಅನೇಕ ಆರೋಗ್ಯ ಲಾಭಗಳು ಈ ಹಣ್ಣಿನಲ್ಲಿದೆ. ಅವು ಯಾವುದೆಂದು ತಿಳಿಯಲು ಮುಂದೆ ಓದಿ.

ರಕ್ತದೊತ್ತಡ ನಿಯಂತ್ರಣ:

Advertisement

ಕಿವಿ ಹಣ್ಣನ್ನು ನಿಯಮಿತವಾಗಿ ಸೇವಿಸುವುದರಿಂದ ರಕ್ತದೊತ್ತಡವನ್ನು ನಿಯಂತ್ರಿಸಬಹುದು. ಕಿವಿ ಹಣ್ಣಿನಲ್ಲಿರುವ ಪೊಟ್ಯಾಸಿಯಮ್ ಮತ್ತು ಫೈಬರ್ ಅಂಶ ಹೇರಳವಾಗಿರುವುದರಿಂದ ರಕ್ತದೊತ್ತಡ ಹತೋಟಿಯಲ್ಲಿರಲು ಸಹಾಯ ಮಾಡುತ್ತದೆ.

ಕೊಲೆಸ್ಟ್ರಾಲ್ ನಿಯಂತ್ರಣ:

ಕಿವಿ ಹಣ್ಣು ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಕಿವಿ ಹಣ್ಣಿನಲ್ಲಿ ಆಂಟಿ ಆಕ್ಸಿಡೆಂಟ್, ಆಂಟಿ-ಇನ್ಫ್ಲಮೇಟರಿ ಅಂಶ ಇರುವುದರಿಂದ ಬೊಜ್ಜಿನ ಸಮಸ್ಯೆಗೆ ಸಹಕರಿಯಾಗಿದೆ. ನಿಯಮಿತವಾಗಿ ಕಿವಿ ಹಣ್ಣು ತಿನ್ನುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗಿಸಿ ದೇಹದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಿಸುತ್ತದೆ. ಬೊಜ್ಜು ನಿಯಂತ್ರಿಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬಹುದು.

ಕಣ್ಣಿನ ದೃಷ್ಟಿ ಹೆಚ್ಚಿಸುತ್ತದೆ:

ಆಹಾರದಿಂದ ಹಿಡಿದು ಮಾಲಿನ್ಯದವರೆಗೆ ದೃಷ್ಟಿಯ ಮೇಲೆ ಪರಿಣಾಮ ಬೀರುತ್ತಿದೆ. ಅವುಗಳ ಪರಿಣಾಮದ ವಿರುದ್ಧ ಹೋರಾಡಲು ಕಿವಿ ಹಣ್ಣಿನ ರಸ ಬಹಳ ಪ್ರಯೋಜನಕಾರಿಯಾಗಿದೆ. ಕಿವಿ ಹಣ್ಣಿನಲ್ಲಿರುವ ಪೋಷಕಾಂಶಗಳು ದೃಷ್ಟಿಯನ್ನು ಚುರುಕುಗೊಳಿಸುವುದರೊಂದಿಗೆ ಅನೇಕ ರೀತಿಯ ಸೋಂಕುಗಳಿಂದ ಕಣ್ಣನ್ನು ರಕ್ಷಿಸುತ್ತದೆ .

ಮೂಳೆಗಳನ್ನು ಬಲಪಡಿಸಲು:

ಗರ್ಭಿಣಿಯರಿಗೆ ಇದು ಉಪಯುಕ್ತ ಹಣ್ಣುಗಳಲ್ಲಿ ಕಿವಿ ಕೂಡಾ ಒಂದು. ಇದು ಕೀಲು ನೋವನ್ನು ಕಡಿಮೆ ಮಾಡುತ್ತದೆ. ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿರುವವರು ಒತ್ತಡ ಕಡಿಮೆಗೊಳಿಸಲು ಇದನ್ನು ತಿನ್ನಬಹುದು. ಇದು ಅನೇಕ ರೋಗಗಳು ಮತ್ತು ಸೋಂಕುಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ಗರ್ಭಿಣಿಯರಿಗೆ ಪ್ರಯೋಜನಕಾರಿ:

ಕಿವಿ ಗರ್ಭಿಣಿಯರಿಗೆ ತುಂಬಾ ಪ್ರಯೋಜನಕಾರಿ ಹಣ್ಣು. ಕಿವಿಯಲ್ಲಿ ಸಾಕಷ್ಟು ಪ್ರಮಾಣದ ಫೋಲೇಟ್ ಇದೆ, ಇದು ಗರ್ಭಾಶಯದಲ್ಲಿ ಬೆಳೆಯುತ್ತಿರುವ ಮಗುವಿನ ಮೆದುಳಿನ ಬೆಳವಣಿಗೆಗೆ ಬಹಳ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಗರ್ಭಾವಸ್ಥೆಯಲ್ಲಿರುವ ಮಹಿಳೆ ಕಿವಿ ತಿನ್ನುವುದರಿಂದ ಶಿಶುಗಳಲ್ಲಿ ನರಗಳ ದೋಷಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಗರ್ಭಿಣಿಯರು ಹೆರಿಗೆಯ ನಂತರವೂ ಕಿವಿ ಹಣ್ಣನ್ನು ಸೇವಿಸಬೇಕು. ಇದರಿಂದ ಹೆರಿಗೆಯ ನಂತರ ದೌರ್ಬಲ್ಯ ಮತ್ತು ರಕ್ತಹೀನತೆ ನಿವಾರಿಸಲು ಸಹಾಯ ಮಾಡುತ್ತದೆ.

ಮಲಬದ್ಧತೆ ಸಮಸ್ಯೆ:

ಕಿವಿ ಹಣ್ಣಿನಲ್ಲಿರುವ ಪೋಷಕಾಂಶಗಳು ಜೀರ್ಣಾಂಗ ವ್ಯವಸ್ಥೆ ಸರಿಯಾಗಿಡುತ್ತದೆ. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಗುಣಪಡಿಸುತ್ತದೆ. ಕಿವಿ ರಸವನ್ನು ಕುಡಿಯುವುದರಿಂದ ಮಲಬದ್ಧತೆಯಿಂದ ಉಂಟಾಗುವ ಅನೇಕ ಗಂಭೀರ ಸಮಸ್ಯೆಗಳನ್ನು ಪರಿಹರಿಸಬಹುದು. ಇದರ ರಸ ನಿಯಮಿತವಾಗಿ ಸೇವಿಸುವುದರಿಂದ ಬೇಸಿಗೆಯಲ್ಲೂ ಹೊಟ್ಟೆ ತಂಪಾಗಿಡುತ್ತದೆ ಹಾಗೂ ಆರೋಗ್ಯಕರವಾಗಿರಿಸುತ್ತದೆ.

ಚರ್ಮದ ಆರೋಗ್ಯ:

ಕಿವಿ ಹಣ್ಣು ತಿನ್ನುವುದು ಚರ್ಮಕ್ಕೆ ತುಂಬಾ ಪ್ರಯೋಜನಕಾರಿ. ಕಿವಿಯಲ್ಲಿನ ಉರಿಯೂತ ನಿವಾರಕ ಗುಣಗಳು ಚರ್ಮದ ಮೇಲಿನ ದದ್ದುಗಳು, ಮೊಡವೆಗಳು ಮತ್ತು ಉರಿಯೂತವನ್ನು ಕಡಿಮೆ ಮಾಡಲು, ಚರ್ಮವನ್ನು ಸ್ವಚ್ಛವಾಗಿರಿಸಲು ಸಹಾಯ ಮಾಡುತ್ತದೆ.

*ಕಾವ್ಯಶ್ರೀ

Advertisement

Udayavani is now on Telegram. Click here to join our channel and stay updated with the latest news.

Next