Advertisement
200ನೇ ಕಿತ್ತೂರು ವಿಜಯೋತ್ಸವದ ಉತ್ಸವಕ್ಕೆ ಚನ್ನಮ್ಮನ ಕಿತ್ತೂರು ಕೋಟೆ ಆವರಣದಲ್ಲಿ ಥೀಮ್ ಪಾರ್ಕ್ ನಿರ್ಮಾಣ ಮಾಡಲು 35 ಕೋಟಿ ರೂ. ಹಾಗೂ ಉತ್ಸವಕ್ಕೆ ರೂ 5 ಕೋಟಿ ಸೇರಿದಂತೆ ಒಟ್ಟು 40 ಕೋಟಿ ರೂ. ಕಾಮಗಾರಿಗೆ ಅನುಮೋದನೆ ನೀಡಿ ಅನುದಾನವನ್ನು ಸಚಿವ ಕೃಷ್ಣ ಬೈರೇಗೌಡ ಬಿಡುಗಡೆಗೊಳಿಸಿದರು.
Related Articles
Advertisement
ರಾಜಗುರು ಸಂಸ್ಥಾನ ಕಲ್ಮಠದ ಶ್ರೀ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳು ಪ್ರತಿಕ್ರಿಯೆ ನೀಡಿ “ರಾಜ್ಯ ಕಂಡ ಅತ್ಯಂತ ಕ್ರಿಯಾಶೀಲ ಸಚಿವರಾದ ಸತೀಶ ಜಾರಕಿಹೊಳಿ ಹಾಗೂ ತೇಜಸ್ವಿ ಶಾಸಕರಾದ ಬಾಬಾಸಾಹೇಬ ಪಾಟೀಲ ಅವರ ಸತತ ಪ್ರಯತ್ನದಿಂದ 200ನೇ ವರ್ಷದ ಕಿತ್ತೂರು ವಿಜಯೋತ್ಸವಕ್ಕೆ ರೂ 5 ಕೋಟಿ ಹಾಗೂ ಥೀಮ್ ಪಾರ್ಕ ನಿರ್ಮಾಣ ಮಾಡಲು ರೂ 35 ಕೋಟಿ ಹಣ ಬಿಡುಗಡೆಗೊಳಿಸದ್ದಕ್ಕೆ ಅಭಿನಂದನೆಗಳು. ಈ ಹಿಂದೆ ಕಿತ್ತೂರು ಉತ್ಸವದ ಪೂರ್ವಭಾವಿ ಸಭೆಯಲ್ಲಿ ಹೇಳಿದಂತೆ ನುಡಿದಂತೆ ನಡೆಯುವಲ್ಲಿ ಸಚಿವರು ಹಾಗೂ ಶಾಸಕರು ಯಶಸ್ವಿಯಾಗಿದ್ದಾರೆ. ಕಿತ್ತೂರು ಕ್ಷೇತ್ರದ ಶಾಸಕರ ಕ್ರಿಯಾಶೀಲತೆಯಿಂದ ಇಂತಹ ಅಭಿವೃದ್ಧಿ ಕೆಲಸಗಳು ಅನುಷ್ಠಾನಗೊಳ್ಳುತ್ತಿದ್ದು ಕಿತ್ತೂರು ಪಟ್ಟಣದಲ್ಲಿ ಬೇಗನೆ ಕಿತ್ತೂರು ಉತ್ಸವದ ಪೂರ್ವಭಾವಿ ಸಭೆ ನಡೆದರೆ ಉತ್ಸವ ಯಶಸ್ವಿಯಾಗಲು ಸಹಕಾರಿಯಾಗುವುದರ ಜತೆಗೆ ಸಾಕಷ್ಟು ಸಮಯ ಸಿಕ್ಕಂತಾಗುತ್ತದೆ. ಕಿತ್ತೂರು ನಾಡು ಕಟ್ಟುವ ಜತೆ ಜತೆಗೆ 200ನೇ ವರ್ಷದ ಕಿತ್ತೂರು ಉತ್ಸವ ಇಡಿ ಜಗತ್ತಿಗೆ ಮಾದರಿಯಾಗಲಿ. ಕಿತ್ತೂರು ವೈಭವ ಮತ್ತೆ ಮರಳಲಿ ಎಂದರು.
ಪೂರ್ವಭಾವಿ ಸಭೆಯಲ್ಲಿ ಶಾಸಕ ಮಹಾಂತೇಶ ಕೌಜಲಗಿ, ಜಿಲ್ಲಾಧಿಕಾರಿ ಮೊಹಮ್ಮದ ರೋಷನ್, ಜಿ.ಪಂ. ಸಿಇಒ ರಾಹುಲ ಶಿಂಧೆ, ಉಪ ವಿಭಾಗ ಅಧಿಕಾರಿ ಪ್ರಭಾವತಿ ಪಕ್ಕಿರಪೂರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಕ್ಯೂರೇಟರ್ ರಾಘವೇಂದ್ರ, ಸಂತೋಷ ಹಾನಗಲ್ಲ, ಅಸ್ಪಾಕ ಹವಾಲ್ದಾರ, ಸೇರಿ ಇತರರಿದ್ದರು.