Advertisement

Kinnimulki ಶ್ರೀಕೃಷ್ಣ ಗ್ರೂಪ್‌ ಆಫ್‌ ಡ್ಯಾನ್ಸ್‌: ಸಾಂಸ್ಕೃತಿಕ ಕಲಾ ಸಂಜೆ ವೈಭವ

11:59 PM Jan 17, 2024 | Team Udayavani |

ಉಡುಪಿ: ಪುತ್ತಿಗೆ ಪರ್ಯಾಯ ಮಹೋತ್ಸವ ಪ್ರಯುಕ್ತ ಕಿನ್ನಿಮೂಲ್ಕಿ ಶ್ರೀಕೃಷ್ಣ ಗ್ರೂಪ್‌ ಆಫ್‌ ಡ್ಯಾನ್ಸ್‌ ವತಿಯಿಂದ ಬುಧವಾರ ಕಿನ್ನಿಮೂಲ್ಕಿ ಜಂಕ್ಷನ್‌ ಬಳಿಯಲ್ಲಿ ರಸಮಂಜರಿ, ನೃತ್ಯ ಜರಗಿತು.

Advertisement

ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ ಉದ್ಘಾಟಿಸಿ, ಪರ್ಯಾಯಕ್ಕೆ ಮೆರುಗು ನೀಡಲು ಸಾಂಸ್ಕೃತಿಕ ರಸಮಂಜರಿ ಆಯೋಜನೆಯೊಂದಿಗೆ ಸಮಾಜಮುಖಿ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಶ್ರೀಕೃಷ್ಣ ಗ್ರೂಪ್‌ ಆಫ್‌ ಡ್ಯಾನ್ಸ್‌ ಸಂಸ್ಥೆ ಮಾದರಿಯಾಗಿದೆ. ಪರರಿಗಾಗಿ ತನ್ನ ಬದುಕು ಎಂಬಂತೆ ಸಮಾಜಮುಖೀಯಾಗಿ ಚಿಂತಿಸಿ ಕಾರ್ಯಪ್ರವೃತ್ತರಾದರೆ ಜನಮನ್ನಣೆ ಗಳಿಸಬಹುದು ಎಂಬುದಕ್ಕೆ ಕೃಷ್ಣ ಮೂರ್ತಿ ಆಚಾರ್ಯ, ಅಮೃತಾ ಕೃಷ್ಣಮೂರ್ತಿಯವರ ಬದುಕು ಸಾಕ್ಷಿ ಎಂದರು.

ಪ್ರಸಾದ್‌ ನೇತ್ರಾಲಯ ಸೂಪರ್‌ ಸ್ಪೆಶಾಲಿಟಿ ಕಣ್ಣಿನ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ| ಕೃಷ್ಣಪ್ರಸಾದ್‌ ಕೂಡ್ಲು ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು.

ವಿಧಾನ ಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ ರಿಕ್ಷಾ ಚಾಲಕರಿಗೆ ಸಮವಸ್ತ್ರ ವಿತರಿಸಿದರು. ಜಿಲ್ಲಾ ಸಹಕಾರ ಯೂನಿಯನ್‌ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ಅಂಗನವಾಡಿ ಮಕ್ಕಳಿಗೆ ಆಟೋಟ ಸಾಮಗ್ರಿ ವಿತರಿಸಿದರು. ಶಿಕ್ಷಣ ತಜ್ಞೆ ಡಾ| ಉಮಾ ರಾಜಶೇಖರ್‌ ಯುವ ಸಮುದಾಯಕ್ಕೆ ದಿಕ್ಸೂಚಿ ಭಾಷಣ ಮಾಡಿದರು.

ಕೆಪಿಸಿಸಿ ಕಾರ್ಯದರ್ಶಿ ಎಂ.ಎ. ಗಫೂರ್‌, ಆದರ್ಶ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ| ಜಿ.ಎಸ್‌. ಚಂದ್ರಶೇಖರ್‌, ಜಿ.ಪಂ. ಮಾಜಿ ಅಧ್ಯಕ್ಷ ಭುಜಂಗ ಶೆಟ್ಟಿ, ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ಪ್ರಖ್ಯಾತ್‌ ಶೆಟ್ಟಿ, ಕಿದಿಯೂರು ಉದಯ ಕುಮಾರ್‌ ಶೆಟ್ಟಿ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಕೆ. ಉದಯ ಕುಮಾರ್‌ ಶೆಟ್ಟಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರಮೇಶ್‌ ಕಾಂಚನ್‌, ರೂಪಾ ಗುರುರಾಜ್‌ ಬೆಂಗಳೂರು, ಕಡೆಕಾರು ಗ್ರಾ.ಪಂ. ಅಧ್ಯಕ್ಷ ಜಯಕರ ಶೇರಿಗಾರ್‌, ಪ್ರಮುಖರಾದ ಮುರಳೀಧರ ಬಲ್ಲಾಳ್‌, ನಿರುಪಮಾ ಪ್ರಸಾದ್‌, ನವೀನ್‌ ಶೆಟ್ಟಿ, ಸದಾಶಿವ ಅಮೀನ್‌ ಕಟ್ಟೆಗುಡ್ಡೆ, ಸೃಜನ್‌ ಶೆಟ್ಟಿ, ಸತೀಶ್‌ ಸಾಲ್ಯಾನ್‌ ಮಣಿಪಾಲ, ದರ್ಶಿತ್‌ ಶೆಟ್ಟಿ, ನಾಗರಾಜ ಸುವರ್ಣ, ರೋನಾಲ್ಡ್‌ ಪ್ರವೀಣ್‌ ಕುಮಾರ್‌, ಸಂಜೀವ ಎ., ಮಹಾಬಲ ಸಾಲ್ಯಾನ್‌, ರಾಜೇಶ್‌ ಹೆಗ್ಡೆ, ಚರಣ್‌ರಾಜ್‌ ಬಂಗೇರ, ಸಾಧಿಕ್‌ ಅಹಮ್ಮದ್‌, ಯು. ಗಣೇಶ್‌ ದೇವಾಡಿಗ ದೊಡ್ಡಣಗುಡ್ಡೆ, ನಗರಸಭೆ ಸದಸ್ಯೆ ಅಮೃತಾ ಕೃಷ್ಣಮೂರ್ತಿ ಮೊದಲಾದವರು ಉಪಸ್ಥಿತರಿದ್ದ‌ರು.

Advertisement

ಶ್ರೀ ಕೃಷ್ಣ ಗ್ರೂಪ್‌ ಆಫ್‌ ಡ್ಯಾನ್ಸ್‌ನ ಸಂಸ್ಥಾಪಕ ಅಧ್ಯಕ್ಷ ಕೆ. ಕೃಷ್ಣಮೂರ್ತಿ ಆಚಾರ್ಯ ಸ್ವಾಗತಿಸಿದರು. ಸತೀಶ್ಚಂದ್ರ ಶೆಟ್ಟಿ ಚಿತ್ರಪಾಡಿ ನಿರೂಪಿಸಿದರು.

ಸಾಧಕರಿಗೆ ಸಮ್ಮಾನ
ವಿವಿಧ ಶಾಲೆಗಳಿಗೆ ಫ್ಯಾನ್‌, ಶಾಲೆಗಳಿಗೆ ನ್ಪೋಟ್ಸ್‌ ಕಿಟ್‌, ಅನಾರೋಗ್ಯ ಪೀಡಿತರಿಗೆ ಧನಸಹಾಯ ವಿತರಿಸಲಾಯಿತು. ವಿವಿಧ ಕ್ಷೇತ್ರದ ಸಾಧಕರಾದ ಆರ್‌. ಮನೋಹರ್‌, ಯಶವಂತ್‌ ಪೂಜಾರಿ ನಿಟ್ಟೂರು, ಸೃಜನ್‌ ಪೂಜಾರಿ, ಅಭಿಲಾಶ್‌, ಆದಿತ್ಯ ಜಿ. ಕೋಟ್ಯಾನ್‌, ಡಾ| ಸೋನಿಯಾ, ಡಾ| ವಾಣಿಶ್ರೀ ಐತಾಳ್‌, ದಿನೇಶ್‌ ಕಾಂಚನ್‌, ವಿಯಾನ್‌ ಮಸ್ಕರೇನ್ಹಸ್‌, ಅರುಣಕಲಾ, ಬಾಲಪ್ರತಿಭೆಗಳಾದ ಜಶ್ವಿ‌ತ್‌ ಜೆ. ದೇವಾಡಿಗ ಕನ್ನರ್ಪಾಡಿ, ಅಭಿನವ್‌ ಆಚಾರ್ಯ ಕಿನ್ನಿಮೂಲ್ಕಿ, ಚಿತ್ರಾ ಅವರನ್ನು ಸಮ್ಮಾನಿಸಲಾಯಿತು.

ರಸಮಂಜರಿ, ನೃತ್ಯ
ಚಿಟಾ³ಡಿ ಶ್ರೀದೇವಿ ಚೆಂಡೆ ಬಳಗದವರಿಂದ ಚೆಂಡೆ ನಿನಾದ. ಪ್ರಖ್ಯಾತ ಗಿಟಾರ್‌ ವಾದಕ ರಾಜ್‌ಗೊàಪಾಲ್‌ ನೇತೃತ್ವದಲ್ಲಿ ಅಂತಾರಾಷ್ಟ್ರೀಯ ಕಲಾವಿದರನ್ನು ಒಳಗೊಂಡ ಝಿ ಟಿವಿ ಸರಿಗಮಪ ಹಾಗೂ ಕಲರ್ ಚಾನೆಲ್‌ನ ಎದೆ ತುಂಬಿ ಹಾಡುವೆನು ರಿಯಾಲಿಟಿ ಶೋ ಗಾಯಕರನ್ನು ಒಳಗೊಂಡ ಚಲನಚಿತ್ರ ತಾರೆಯರ ರಸಮಂಜರಿ ಹಾಗೂ ನೃತ್ಯ ಪ್ರಸ್ತುತಗೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next