Advertisement

ಕಿಂಗ್‌ಸರ್ಕಲ್‌ ಗಣೇಶೋತ್ಸವ ಸ್ನೇಹ ಸಮ್ಮಿಲನ 

04:57 PM Oct 08, 2018 | |

ಮುಂಬಯಿ: ನಗರದ ಶ್ರೀಮಂತ ಗಣಪತಿ ಖ್ಯಾತಿಯ ಜಿಎಸ್‌ಬಿ ಸೇವಾ ಮಂಡಲ ಕಿಂಗ್‌ಸರ್ಕಲ್‌ನ ಸುಕೃತೀಂದ್ರ ನಗರದಲ್ಲಿ 64 ನೇ ವಾರ್ಷಿಕ ಗಣೇಶೋತ್ಸವವು ಇತ್ತೀಚೆಗೆ ಐದು ದಿನಗಳ ಕಾಲ ಜರಗಿದ್ದು, ಇದರ ಸ್ನೇಹ ಮಿಲನ ಕಾರ್ಯಕ್ರಮವು ಸೆ. 22 ರಂದು ಸಂಜೆ ಗಣೇಶೋತ್ಸವ ಪೆಂಡಾಲ್‌ನಲ್ಲಿ ಜರಗಿತು.

Advertisement

ಸಭೆಯಲ್ಲಿ ಧನ ಸಂಗ್ರಹದ ವಿವರ, ಉತ್ಸವದಲ್ಲಿ ಸಹಕರಿಸಿದವರಿಗೆ ಅಭಿನಂದನೆ, ಸಭಿಕರಿಂದ ಸಲಹೆ-ಸೂಚನೆ, ಮುಂದಿನ ವರ್ಷದ ಗಣೇಶೋತ್ಸವದಲ್ಲಿ ನಡೆಯ ಬೇಕಾಗದ ಸುಧಾರಣೆ ಇನ್ನಿತರ ವಿಚಾರಗಳ ಬಗ್ಗೆ ಚರ್ಚಿಸಲಾಯಿತು. ಪ್ರಾರಂಭದಲ್ಲಿ ವೇದಮೂರ್ತಿ ಬಂಟ್ವಾಳ ಕೃಷ್ಣ ಭಟ್‌ ಪ್ರಾರ್ಥನೆ ಗೈದರು. ಗಣೇಶೋತ್ಸವ ಆಯೋಜನಾ ಸಮಿತಿಯ ಸಹ ಸಂಚಾಲಕ ಜಿ. ಡಿ. ರಾವ್‌ ಅವರು ಅಧ್ಯಕ್ಷತೆ ವಹಿಸಿ ಸ್ವಾಗತಿಸಿ ಮಾತ ನಾಡಿ, ಗಣೇಶೋತ್ಸವವು ಶ್ರೀ ಕಾಶೀ ಮಠಾಧೀಶ ಶ್ರೀಮದ್‌ ಸುಧೀಂದ್ರ ತೀರ್ಥ ಸ್ವಾಮೀಜಿ ಯವರ ಆಶೀರ್ವಾದ ದಿಂದ ವಿಜೃಂಭಣೆ ಯಿಂದ ಜರಗಿದೆ. ಈ ವರ್ಷ ಗಣೇ ಶೋತ್ಸವದಲ್ಲಿ ಪೂಜೆ, ದೇಣಿಗೆ, ಹುಂಡಿ ಇನ್ನಿತರ ಮೂಲಕ ಒಟ್ಟು 9 ಕೋ. ರೂ. ಧನಸಂಗ್ರಹಗೊಂಡಿದೆ. ಕಳೆದ ವರ್ಷ ಗಣೇಶೋತ್ಸವದಲ್ಲಿ ಒಟ್ಟು 8 ಕೋ. 49 ಲಕ್ಷ ರೂ. ಧನ ಸಂಗ್ರಹವಾಗಿತ್ತು. ಈ ವರ್ಷ 63 ಸಾವಿರ ಪೂಜೆಗಳು ಜರಗಿದ್ದು, ಕಳೆದ ವರ್ಷ ಒಟ್ಟು 62,880 ಪೂಜೆಗಳು ನಡೆದಿತ್ತು ಎಂದು ನುಡಿದರು.

ಕೃಷ್ಣ ಭಟ್‌ ಅವರು ಮಾತನಾಡಿ, ಗಣೇಶೋತ್ಸವದಲ್ಲಿ ಸಮಯದ ಸಮಸ್ಯೆಗಳು ಉಂಟಾಗಿದ್ದರೆ ಭಕ್ತಾದಿಗಳು ಲಿಖೀತ ರೂಪದಲ್ಲಿ ಸೇವಾ ಮಂಡಳದ ಕಾರ್ಯಾಲಯದಲ್ಲಿ ದೂರು ನೀಡಬಹುದು. ಮಂಡಲದ ಕಾರ್ಯಕಾರಿ ಸಮಿತಿ ಈ ಬಗ್ಗೆ ಚರ್ಚಿಸಿ ನಿರ್ಣಯ ತೆಗೆದುಕೊಳ್ಳಲಿದೆ ಎಂದರು.

ಬಳಿಕ ಜಿ. ಡಿ. ರಾವ್‌ ಅವರು ಗಣೇಶೋತ್ಸವಕ್ಕೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು. ಎ. ರಾಮ ನಾಯಕ್‌ ಹಾಲ್‌, ಮೈದಾನ ಮತ್ತು ಜಿಎಸ್‌ಬಿ ನ್ಪೋರ್ಟ್ಸ್ ಕ್ಲಬ್‌ ಮೈದಾನದವರಿಗೆ, ಕೃಷ್ಣ ಭಟ್‌ ಅವರ ವೈಧಿಕ ತಂಡಕ್ಕೆ, ತುಲಾಭಾರ ಸೇವೆಯನ್ನು ಪೂರೈಸಿದ ಗುರುದತ್‌ ನಾಯಕ್‌ ದಹಿಸರ್‌ ಅವರ ತಂಡಕ್ಕೆ, ಸಾಮೂಹಿಕ ಗಣಹೋಮದ ಪೂರ್ವತಯಾರಿಗಾಗಿ ಬಳುRಂಜೆ ಪುಂಡಲೀಕ ಶೆಣೈ ತಂಡಕ್ಕೆ, ನಿಗದಿತ ಸಮಯದಲ್ಲಿ ಫಲಾಹಾರ ಮತ್ತು ಸಮಾರಾಧನೆ ತಯಾರಿಕೆಗೆ ಸಹಕರಿಸಿದ ಗುರುದತ್‌ ಪ್ರಭು ತಂಡದವರು, ದಿನಂಪ್ರತಿ ಜರಗಿನ ಪೂಜೆಗಳ ವಿವರ, ರಶೀದಿ ತಯಾರಿಕೆಯನ್ನು ನಿರ್ವಹಿಸಿದ ಕೆ. ಕೆ. ಕಾಮತ್‌ ತಂಡಕ್ಕೆ, ಪೆಂಡಾಲ್‌ನ ಪ್ರಧಾನ ದ್ವಾರದಲ್ಲಿ ಅಸಂಖ್ಯಾತ ಭಕ್ತರನ್ನು ನಿಯಂತ್ರಿಸಲು ಸಹಕರಿಸಿದ ಪ್ರಶಾಂತ್‌ ಪುರಾಣಿಕ್‌ ನೇತೃತ್ವದ ತಂಡ, ಖಾಸಗಿ ಭದ್ರತೆ ಒದಗಿಸಿದ ಮಾಟುಂಗ ಪೊಲೀಸ್‌ ತಂಡಕ್ಕೆ, ಮುಂಬಯಿ ಅಗ್ನಿಶಾಮಕ ದಳಕ್ಕೆ, ಗಣೇಶೋತ್ಸವ ಪೆಂಡಾಲ್‌ನ್ನು ಸುಮಾರು ಎರಡು ತಿಂಗಳ ಕಾಲಾವಧಿಯಲ್ಲಿ ನಿರ್ಮಿಸಲು ಉಸ್ತುವಾರಿ ವಹಿಸಿದ ಸತೀಶ್‌ ರಾಮ ನಾಯಕ್‌ ಮತ್ತು ತಂಡಕ್ಕೆ, ಉತ್ಸವದ ಸಮಯ, ಪ್ರಧಾನ ಸ್ಟೋರ್‌ ನಿರ್ವಹಣೆ ವಹಿಸಿದ ರಾಜ್‌ಗೊàಪಾಲ್‌ ನಾಯಕ್‌ ಮತ್ತು ತಂಡಕ್ಕೆ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸರ್ವ ಕಲಾವಿದರಿಗೆ, ಯಕ್ಷಗಾನ ಬಯಲಾಟ ಪ್ರದರ್ಶಿಸಿದ ಜನಪ್ರಿಯ ಯಕ್ಷಗಾನ ಮಂಡಳಿಗೆ ಕೃತಜ್ಞತೆ ಸಲ್ಲಿಸಲಾಯಿತು.

ವಿವಿಧ ಸ್ಪರ್ಧೆಯಲ್ಲಿ ವಿಜೇತ ರಾದವರಿಗೆ ಜಿ. ಡಿ. ರಾವ್‌ ಮತ್ತು ರಘುನಂದನ್‌ ಕಾಮತ್‌ ಬಹು ಮಾನ ವಿತರಿಸಿದರು. ಸೇವಾ ಮಂಡಳದ ಅಧ್ಯಕ್ಷ ರಮೇಶ್‌ ಭಂಡಾರ್ಕರ್‌ ವಂದಿಸಿದರು. ರಘು ನಂದನ್‌ ಕಾಮತ್‌ ಅವರು ತಮ್ಮ ಸಂಸ್ಥೆಯ ನೂತನ ಐಸ್‌ಕ್ರೀಂನ್ನು ಬಿಡುಗಡೆಗೊಳಿಸಿ ಉಚಿತವಾಗಿ ಹಂಚಿದರು. ಸೇವಾ ಮಂಡಳದ ನವರಾತ್ರಿ ದಾಂಡಿಯಾ ರಾಸ್‌ ಅ. 12 ರಿಂದ ಅ. 14 ರವರೆಗೆ ಸಂಜೆ 7 ರಿಂದ ಸಯಾನ್‌ನ ಗುರುಗಣೇಶ್‌ ಪ್ರಸಾದ್‌ ಸಭಾಗೃಹದಲ್ಲಿ ನಡೆಯಲಿದೆ ಎಂದು ತಿಳಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next