Advertisement

ಉತ್ತರ ಕೊರಿಯಾ ಪ್ರಜೆಗಳಿಗೆ ಮಾತ್ರ ಚಳಿಯ ಶಿಕ್ಷೆ!

11:35 PM Feb 19, 2022 | Team Udayavani |

ಪ್ಯಾಂಗ್ಯಾಂಗ್‌: ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ತನ್ನ ತಂದೆ ಕಿಮ್‌ ಜಾಂಗ್‌
ಇಲ್‌ರ ಜನ್ಮ ದಿನದ ಹಿನ್ನೆಲೆ ಆಯೋಜಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ, ಪ್ರಜೆಗಳನ್ನು ಕೊರೆಯುವ ಚಳಿಯಲ್ಲಿ ನಿಲ್ಲಿಸಿದ್ದಾರೆ.

Advertisement

ಆದರೆ ವೇದಿಕೆ ಮೇಲೆ ಕುಳಿತಿದ್ದ ತಾನು ಮಾತ್ರ ರಹಸ್ಯ ಹೀಟರ್‌ ಬಳಸಿಕೊಂಡು ಆರಾಮವಾಗಿ ನಿಂತಿದ್ದರು ಎಂದು ಹೇಳಲಾಗಿದೆ.

ಸುಮಾರು -15 ಡಿಗ್ರಿ ಸೆಲ್ಸಿಯಸ್‌ ತಾಪಮಾನದಲ್ಲಿ ಪ್ರಜೆಗಳು ಅರ್ಧ ಗಂಟೆ ಕಾಲ ನಡುಗುತ್ತಾ ನಿಂತಿದ್ದರು. ಅವರಿಗೆ ಗ್ಲೌಸ್‌ ಆಗಲೀ, ಟೋಪಿಯನ್ನಾಗಲೀ ಧರಿಸಲು ಅನುಮತಿ ಇರಲಿಲ್ಲ. ವೇದಿಕೆ ಮೇಲೆ ಕಿಮ್‌, ಆತನ ತಂಗಿ ಸೇರಿ ಏಳೆಂಟು ಮಂದಿ ಕುಳಿತಿದ್ದು, ಅವರಿಗೆ ಚಳಿಯಾಗದಿರಲಿ ಎನ್ನುವ ಕಾರಣಕ್ಕೆ ವೇದಿಕೆಯಲ್ಲೇ ಹೀಟರ್‌ಗಳನ್ನು ಯಾರಿಗೂ ಕಾಣದಂತೆ ಅಳವಡಿಸಲಾಗಿತ್ತು ಎನ್ನಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next