Advertisement

Missing Case ಕಿಲೆಂಜೂರು: ಮಹಿಳೆ ನಾಪತ್ತೆ

12:44 AM Jul 26, 2024 | Team Udayavani |

ಮೂಲ್ಕಿ: ಮೆನ್ನಬೆಟ್ಟು ಪಟ್ಟಣ ಪಂಚಾಯತ್‌ ವ್ಯಾಪ್ತಿಯ ಕಿಲೆಂಜೂರು ಗ್ರಾಮದ ನಿವಾಸಿ ಬೇಬಿ ಪೂಜಾರ್ತಿ (67) ಅವರು ಜು. 22ರಂದು ಬೆಳಗ್ಗೆ ಮನೆಯಿಂದ ಕಾಣೆಯಾದವರು ಈವರೆಗೆ ಪತ್ತೆಯಾಗಿಲ್ಲ ಎಂದು ಅವರ ಸಹೋದರ ನಾರಾಯಣ ಪೂಜಾರಿ ಅವರು ಮೂಲ್ಕಿ ಪೊಲೀಸರಿಗೆ ದೂರು ನೀಡಿದ್ದಾರೆ.

Advertisement

ಸುಮಾರು 5 ಅಡಿ ಎತ್ತರ, ಕಪ್ಪು ಬಣ್ಣ, ಸಪೂರ ಶರೀರ, ತುಳುಭಾಷೆ ಮಾತನಾಡುವ ಇವರ ತಲೆ ಕೂದಲನ್ನು ಬಾಬ್‌ಕಟ್‌ ಮಾಡಲಾಗಿದೆ. ಅವರ ಎಡಕಾಲಿನ ಮಣಿಗಂಟು ಬಳಿ ಶಸ್ತ್ರ ಚಿಕಿತ್ಸೆಯ ಗಾಯದ ಕಲೆ ಇದೆ. ಅವರ ಕುರಿತು ಮಾಹಿತಿ ಸಿಕ್ಕಿದಲ್ಲಿ ಮೂಲ್ಕಿ ಪೊಲೀಸರನ್ನು ಸಂಪರ್ಕಿಸುವಂತೆ ಕೋರಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next