Advertisement

Sullia: ದ್ವಿಚಕ್ರ ವಾಹನಗಳ ನಡುವೆ ಅಪಘಾತದಲ್ಲಿ ಮಹಿಳೆ ಸಾವು

09:38 PM Sep 02, 2024 | Team Udayavani |

ಸುಳ್ಯ: ಬೈಕ್‌ ಹಾಗೂ ಸ್ಕೂಟರ್‌ ನಡುವಿನ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಬೈಕ್‌ ನ ಸಹಸವಾರೆ ಮೃತಪಟ್ಟ ಘಟನೆ ಸೆ.1ರಂದು ಸುಳ್ಯದ ಪೈಚಾರಿನಲ್ಲಿ ಸಂಭವಿಸಿದೆ.

Advertisement

ಸುಳ್ಯದಲ್ಲಿ ಕಳೆದ ಹಲವು ವರ್ಷಗಳಿಂದ ಕೂಲಿ ಕೆಲಸ ಮಾಡಿಕೊಂಡಿದ್ದ ಉತ್ತರ ಕರ್ನಾಟಕ ಮೂಲದ ಯಲಬುರ್ಗಿ ತಾಲೂಕಿನ ಚಿಕ್ಕ ಬನ್ನಿಗೋಳ ಗ್ರಾಮದ ಫಿರಾಬಿ ಮೃತರು. ಸೋಮವಾರ ಕಲಸದ ನಿಮಿತ್ತ ಎಲ್ಲಪ್ಪ ಎಂಬವರೊಂದಿಗೆ ಪೈಚಾರು ಕಡೆಗೆ ತೆರಳುತ್ತಿದ್ದ ವೇಳೆ ಪೈಚಾರಿನ ರಸ್ತೆ ಬದಿ ಸ್ಕೂಟರ್‌ ಸವಾರನೊಬ್ಬ ಸುಳ್ಯದತ್ತ ಹೋಗಲು ತಿರುಗಿಸಿದಾಗ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಗಾಯಗೊಂಡಿದ್ದ ಮಹಿಳೆಯನ್ನು ಸುಳ್ಯ ಆಸ್ಪತ್ರೆಯಲ್ಲಿ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಚಿಕಿತ್ಸೆ ಫ‌ಲಿಸದೇ ಮೃತರಾಗಿದ್ದಾರೆ.

ಸುಳ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next