Advertisement
ಸಾಣೂರು ಗ್ರಾ.ಪಂ. ಪಿಡಿಒ ಮಧು ಎಂ.ಸಿ. ನೀಡಿದ ದೂರಿನಂತೆ ಅವಹೇಳನಕಾರಿಯಾಗಿ ಅನ್ಯ ಧರ್ಮದ ಬಗ್ಗೆ ಸಾಣೂರು ಮುರತ್ತಂಗಡಿಯಲ್ಲಿ ಫ್ಲೆಕ್ಸ್ ಹಾಕಿದ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಆರೋಪಿ ಸತೀಶ್ ದೇವಾಡಿಗ ಹಾಗೂ ಫ್ಲೆಕ್ಸ್ ಮಾಡಿಕೊಟ್ಟಿದ್ದ ಕಾರ್ಕಳ ಮಾರ್ಕೆಟ್ ರಸ್ತೆಯಲ್ಲಿರುವ ಗ್ರಾಫಿಕ್ಸ್ನ ಮಾಲಕಿ ಪುಷ್ಪಲತಾ ಅವರನ್ನು ಕಾರ್ಕಳ ನಗರ ಪೊಲೀಸರು ಬಂಧಿಸಿ ಕಾರ್ಕಳ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿ ಸತೀಶ್ ದೇವಾಡಿಗನಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದ್ದು, ಮಹಿಳಾ ಆರೋಪಿ ಪುಷ್ಪಲತಾಗೆ ಷರತ್ತು ಬದ್ಧ ಜಾಮೀನು ನೀಡಿದೆ. Advertisement
Karkala ಅವಹೇಳನಕಾರಿ ಫ್ಲೆಕ್ಸ್ ಅಳವಡಿಕೆ: ಮಹಿಳೆ ಸಹಿತ ಇಬ್ಬರ ಬಂಧನ
11:27 PM Sep 03, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.