Advertisement

Hindu ಬಾಲಕಿಯ ಅಪಹರಣ, ಮತಾಂತರ, ಮದುವೆ

09:00 PM Jun 10, 2023 | Team Udayavani |

ಕರಾಚಿ: ಪಾಕಿಸ್ತಾನದ ಸಿಂಧ್‌ ಪ್ರಾಂತ್ಯದಲ್ಲಿ ಹಿಂದೂಗಳ ಮನೆಗೆ ನುಗ್ಗಿ, ಬಂದೂಕು ತೋರಿಸಿ 14 ವರ್ಷದ ಬಾಲಕಿಯನ್ನು ಅಪಹರಿಸಲಾಯಿತು. ನಂತರ ಆಕೆಯನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಿಸಿ, ಮುಸ್ಲಿಂ ಪುರುಷನೊಂದಿಗೆ ವಿವಾಹ ಮಾಡಲಾಗಿದೆ. ಬಾಲಕಿಯನ್ನು ಶನಿವಾರ ಬೆನ್‌ಜಿರಾಬಾದ್‌ ಜಿಲ್ಲಾ ನ್ಯಾಯಾಲಯದ ಎದುರು ಪೊಲೀಸರು ಹಾಜರುಪಡಿಸಿದರು. ತನ್ನ ಪೋಷಕರೊಂದಿಗೆ ತೆರಳುವುದಾಗಿ ಹೇಳಿದರೂ ಕೋರ್ಟ್‌ ಬಾಲಕಿಗೆ ಅನುಮತಿ ನೀಡಿಲ್ಲ.

Advertisement

ಬೆನ್‌ಜಿರಾಬಾದ್‌ ಜಿಲ್ಲೆಯ ಮನೆಯಿಂದ ಜೂ.2ರಂದು ಸೊಹನಾ ಶರ್ಮಾ ಕುಮಾರಿ(14)ಯನ್ನು ತಾಯಿಯ ಎದುರೇ ಬಂದೂಕು ತೋರಿಸಿ, ಮನೆಪಾಠ ಮಾಡುತ್ತಿದ್ದ ಶಿಕ್ಷಕ ಮತ್ತು ಆತನ ಸಹಚರರು ಅಪಹರಿಸಿದ್ದರು. ಈ ಕುರಿತು ಬಾಲಕಿಯ ತಂದೆ ದಿಲೀಪ್‌ ಕುಮಾರ್‌ ದೂರು ದಾಖಲಿಸಿದ್ದರು. ನಂತರ, ಬಾಲಕಿಯನ್ನು ಇಸ್ಲಾಂಗೆ ಮತಾಂತರಿಸಿ, ವಿವಾಹ ಮಾಡಿದ ವಿಡಿಯೋವನ್ನು ಪೋಷಕರಿಗೆ ಅಪಹರಣಕಾರರು ಕಳುಹಿಸಿದ್ದರು.

ಪೊಲೀಸರು ಪ್ರಕರಣ ಭೇದಿಸಿ, ಬಾಲಕಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆದರೆ ಬಾಲಕಿಯ ಇಚ್ಛೆಯ ವಿರುದ್ಧ ಕೋರ್ಟ್‌, ಆಕೆಯನ್ನು ಮಹಿಳಾ ಆಶ್ರಯ ತಾಣಕ್ಕೆ ಕಳುಹಿಸಿದೆ. “ಬಾಲಕಿಗೆ ಇನ್ನೂ 14 ವರ್ಷ. ಆದರೆ ಆಕೆಯ ಸಮ್ಮತಿಯಿಂದ ಮದುವೆ ಮಾಡಲಾಗಿದೆ ಎಂದು ಅಧಿಕಾರಿಗಳು ಪ್ರಮಾಣಪತ್ರ ನೀಡಿದ್ದಾರೆ. ಅಪ್ರಾಪ್ತ ವಯಸ್ಸಿನವಳಾದ ಅವಳ ಮದುವೆ ಕಾನೂನು ಬಾಹಿರ,’ ಎಂದು ಬಾಲಕಿಯ ತಂದೆ ಅವಲತ್ತುಕೊಂಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next