ಕನ್ನಡದ ಕ್ಲಾಸಿಕ್ ಚಿತ್ರವಾದ ಡಾ.ವಿಷ್ಣುವರ್ಧನ್ ಅಭಿನಯದ “ನಾಗರಹಾವು’ ಮತ್ತೆ ತೆರೆ ಮೇಲೆ ಹೊಸ ಅವತಾರದಲ್ಲಿ ಬರಲು ಸಜ್ಜಾಗಿದ್ದು, ಅದಕ್ಕೆ ಮುನ್ನುಡಿಯಾಗಿ ಚಿತ್ರದ ಟೀಸರ್ ನ್ನು ನಟ ಕಿಚ್ಚ ಸುದೀಪ್ ಸರ್ಬಿಯಾ ದೇಶದಿಂದ ತಮ್ಮ ಟ್ವೀಟರ್ ಅಕೌಂಟ್ ಮೂಲಕ ಬಿಡುಗಡೆ ಮಾಡಿದ್ದಾರೆ.
ಅಲ್ಲದೇ “ವಿಷ್ಣು ಸರ್ ಒಬ್ಬ ಅಪರೂಪದ ನಟ. ಈಗಲೂ ಕೋಟ್ಯಾಂತರ ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ ನೆಲೆಸಿರೋ ಕಲಾವಿದ. ನನ್ನ ಪಾಲಿನ ದೇವರ ಸಿನಿಮಾದ ಟೀಸರ್ ಬಿಡುಗಡೆ ಮಾಡಿರುವುದು ಸಂತೋಷ ತಂದಿದೆ. ನಾಗರಹಾವು ಮತ್ತೆ ಹೊಸ ಅವತಾರದಲ್ಲಿ ಬಂದಿದೆ. “ರಾಮಾಚಾರಿ ಈಸ್ ಬ್ಯಾಕ್’ ಎಂದು ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ.
ಇನ್ನು ಹೊಸ ತಂತ್ರಜ್ಞಾನ, ವಿಷ್ಯುಯಲ್ ಎಫೆಕ್ಟ್ ಬಳಸಿಕೊಂಡು ರೂಪಿಸಿರುವ ಟೀಸರ್ನಲ್ಲಿ ಸೌಂಡು ಹೈಲೈಟಾಗಿದ್ದು, ವಿಜಯ್ ಭಾಸ್ಕರ್ ಅವರ ಸಂಗೀತದ 7.1 ಬಿಜಿಎಮ್ ಸೌಂಡ್ ಕೇಳೋದೆ ಒಂದು ಥ್ರಿಲ್ಲಾಗಿದೆ. ಇನ್ನು ಶ್ರೀ ಈಶ್ವರಿ ಪ್ರೊಡಕ್ಷನ್ ಚಿತ್ರವನ್ನು ಡಿಜಿಟಲೈಸ್ ಮಾಡಿದ್ದು, ಕಲರ್ಫುಲ್ ರಾಮಾಚಾರಿಯನ್ನು ತೆರೆಗೆ ತರಲು ರೆಡಿ ಆಗಿದೆ.