Advertisement

Sandalwood: ಇಂದು ಮೇರು ನಿರ್ದೇಶಕ ಪುಟ್ಟಣ್ಣ ಕಣಗಾಲ್‌ ಹುಟ್ಟುಹಬ್ಬ

09:18 AM Dec 01, 2024 | Team Udayavani |

ಕನ್ನಡ ಚಿತ್ರರಂಗದ ಮೇರು ನಿರ್ದೇಶಕ ಪುಟ್ಟಣ್ಣ ಕಣಗಾಲ್‌ ಬದುಕಿರುತ್ತಿದ್ದರೆ ಡಿಸೆಂಬರ್‌ 1ಕ್ಕೆ ಅವರಿಗೆ 91 ವರ್ಷ ತುಂಬುತ್ತಿತ್ತು. ಹೌದು, ಇಂದು ಪುಟ್ಟಣ್ಣ ಕಣಗಾಲ್‌ ಅವರ ಹುಟ್ಟುಹಬ್ಬ.

Advertisement

ಪುಟ್ಟಣ್ಣ ಕಣಗಾಲ್‌ ಚಿತ್ರರಸಿಕರನ್ನು ಅಗಲಿ 38 ವರ್ಷಗಳಾಗಿವೆ. 1985ರ ಜೂನ್‌ ಐದರಂದು ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು. ಈ ಮೂವತ್ತೆಂಟು ವರ್ಷಗಳಲ್ಲಿ ಪುಟ್ಟಣ್ಣ ಅವರನ್ನು ಕನ್ನಡಿಗರು ಅದೆಷ್ಟು ಬಾರಿ ನೆನಪಿಸಿಕೊಂಡಿದ್ದಾರೋ ಗೊತ್ತಿಲ್ಲ. ಚಿತ್ರರಂಗದ ವಿಷಯದಲ್ಲಿ ಹೇಳುವುದಾದರೆ, ಕನ್ನಡ ಚಿತ್ರರಂಗವಿರುವವರೆಗೂ ಪುಟ್ಟಣ್ಣನವರ ಹೆಸರಿರುವಷ್ಟು ಛಾಪನ್ನು ಅವರು ಒತ್ತಿಹೋಗಿದ್ದಾರೆ.

ಇನ್ನು ಪ್ರೇಕ್ಷಕರಿಗೂ ಅಷ್ಟೇ. ಪುಟ್ಟಣ್ಣ ಕಣಗಾಲ್‌ ಅವರು ನಿರ್ದೇಶಿಸಿರುವ ಚಿತ್ರಗಳ, ತೆರೆಗೆ ತಂದ ಪಾತ್ರಗಳ, ಬೆಳಕಿಗೆ ತಂದ ಕಲಾವಿದರ, ಇಂದಿಗೂ ಜನಪ್ರಿಯವಾಗಿರುವ ಹಾಡುಗಳ ಬಗ್ಗೆ ಯಾವಾಗಲೂ ಮೆಲುಕು ಹಾಕುತ್ತಲೇ ಇರುತ್ತಾರೆ. ಪುಟ್ಟಣ್ಣ ಅವರ ಹುಟ್ಟುಹಬ್ಬವನ್ನು ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ ಇಂದು ಆಚರಿಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next