ಬೆಂಗಳೂರು : ಖೇಲೋ ಇಂಡಿಯಾ ಗೇಮ್ ಪ್ರಧಾನಿ ಮೋದಿ ಅವರ ಕನಸು ಬೆಂಗಳೂರಿನಲ್ಲಿ ಆಯೋಜನೆ ಆಗಿರೋ ಖೇಲೋ ಇಂಡಿಯಾ ಸಂಪೂರ್ಣ ಯಶಸ್ವಿಯಾಗಿದೆ ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.
ಕಳೆದ ಹತ್ತು ದಿನಗಳಲ್ಲಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಖೇಲೋ ಇಂಡಿಯಾ 2021 ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಸಚಿವರು ಖೇಲೋ ಇಂಡಿಯಾ ಆಲೋಚನೆ 2016ರಿಂದ ಆರಂಭವಾಯ್ತು. ಇದು ಪ್ರಧಾನಿ ಮೋದಿ ಅವರ ಕನಸಾಗಿತ್ತು ಈ ಕಾರ್ಯಕ್ರಮಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಬಂದಿರುವುದು ಸಂತಸದ ವಿಚಾರ ಅಲ್ಲದೆ ಬೆಂಗಳೂರಿನಲ್ಲಿ ಆಯೋಜನೆಗೊಂಡ ಕ್ರೀಡೆ ಸಂಪೂರ್ಣ ಯಶಸ್ಸುಗೊಂಡಿದೆ ಮೂರು ಸಾವಿರ ಜನ ಈ ಕ್ರೀಡೆಯಲ್ಲಿ ಭಾಗವಹಿಸಿದ್ದರು. ಶಿವ ಶ್ರೀಧರ್ (ಈಜು) ,ಅನ್ ಮೇರಿಯಾ (ವೈಟ್ ಲಿಫ್ಟಿಂಗ್) ಈ ಇಬ್ಬರು ಕ್ರೀಡಾಪಟುಗಳು ನ್ಯಾಷನಲ್ ರೆಕಾರ್ಡ್ ಮಾಡಿರುವುದು ಸಂತಸದ ವಿಷಯ ಎಂದರು.
ಕ್ರೀಡೆಯಲ್ಲಿ ಯೋಗ ಕೂಡ ಅಳವಡಿಸಿದ್ದು, ಯೋಗದ ಶಕ್ತಿಯನ್ನ ಈಗ ನೋಡಿದ್ದೇವೆ. ಮೋದಿ ಅವರು ಕೂಡ ಯೋಗವನ್ನ ಉತ್ತೇಜಿಸಿದ್ದಾರೆ. ವಿಶ್ವ ಸಂಸ್ಥೆ ಕೂಡ ಯೋಗ ದಿನಾಚರಣೆ ಮಾಡಲು ಒಪ್ಪಿಗೆ ನೀಡಿದ್ದು, ಅದರ ಶಕ್ತಿ ಏನೆಂಬುದು ನೋಡಿದೆವು ಎಂದ ಅವರು ಯೋಗ ಮಾಡಿದ ಯುವತಿಗೆ ಧನ್ಯವಾದ ಅರ್ಪಿಸಿದ ಠಾಕೂರ್ 20 ಗೋಲ್ಡ್ ಮೆಡಲ್ ಪಡೆದ ಜೈನ್ ವಿವಿಗೆ ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ, ಸಿಎಂ ಬಸವರಾಜ್ ಬೊಮ್ಮಾಯಿ, ಪ್ರಹ್ಲಾದ್ ಜೋಶಿ, ಸಚಿವರಾದ ಅರಗ ಜ್ಞಾನೇಂದ್ರ, ಅಶ್ವಥ್ ನಾರಾಯಣ್, ನಾರಾಯಣ್ ಗೌಡ, ಸಂಸದ ಪಿ.ಸಿ ಮೋಹನ್, ತೇಜಸ್ವಿ ಸೂರ್ಯ, ನಟ ಸುದೀಪ್ ಪಾಲ್ಗೊಂಡಿದ್ದರು.
ಇದನ್ನೂ ಓದಿ :14 ವರ್ಷಗಳ ಹಿಂದಿನ ಪ್ರಕರಣದಲ್ಲಿ ರಾಜ್ ಠಾಕ್ರೆ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿ