Advertisement
ಮುಕ್ಕಚ್ಚೇರಿ ಜಂಕ್ಷನ್‌ನಲ್ಲಿ ಝುಬೈರ್ ಹತ್ಯೆಗೆ ಸಂಬಂಧಿಸಿದಂತ ಗಾಂಜಾ ಮಾಫಿಯಾ ವಿರುದ್ಧ ಡಿವೈಎಫ್‌ಐ ಉಳ್ಳಾಲ ಘಟಕದ ಆಶ್ರಯದಲ್ಲಿ ಪ್ರತಿಭಟನೆ ನಡೆಯುತ್ತಿತ್ತು. ಈ ಸಂದರ್ಭ ಜುಬೈರ್ ಮನೆಗೆ ಸಾಂತ್ವನ ಹೇಳಲೆಂದು ಸಚಿವ ಖಾದರ್ ಅವರು ಜಂಕ್ಷನ್‌ಗೆ ಆಗಮಿಸುತ್ತಿದ್ದಂತೆಯೇ ಪ್ರತಿಭಟನ ನಿರತರು ಖಾದರ್ ಅವರೊಂದಿಗೆ ಮಾತಿನ ಚಕಮಕಿ ನಡೆಸಿದರು. ಜತೆಗೆ ಅವರೊಂದಿ ಗಿದ್ದ ಕಾಂಗ್ರೆಸ್ ನಾಯಕರನ್ನು ಹಿಂದೆ ಕಳುಹಿಸಿದರು. ಖಾದರ್ ಅವರು ಮನವಿ ಮಾಡಿದರೂ ಸ್ಥಳೀ ಯರು ಅವರ ಮನವಿಯನ್ನು ಪುರಸ್ಕರಿಸಲಿಲ್ಲ. ಹಿಂತಿರು ಗುವ ವೇಳೆ ಕಲ್ಲು ತೂರಾಟ ನಡೆದಿದೆ. ಕಾಂಗ್ರೆಸ್ ಮುಖಂಡ ಸುರೇಶ್ ಭಟ್ನಗರ ಕಾರಿಗೆ ಕಲ್ಲುಬಿದ್ದಿದೆ.
ಸಚಿವ ಖಾದರ್ ಹಿಂತಿರುಗಿದ ಅರ್ಧ ತಾಸಿನ ಬಳಿಕ ಸಂಸದ ನಳಿನ್ ಆಗಮಿಸಿದ್ದಾರೆ. ಈ ವೇಳೆ ನಮಾಜ್ ಮುಗಿಸಿ ಬರುತ್ತಿದ್ದ ಸ್ಥಳೀಯರು ಝುಬೇರ್ ಮನೆಗೆ ದಾರಿ ತೋರಿಸಿದ್ದಾರೆ. ಬಿಜೆಪಿ ಮುಖಂಡರೊಂದಿಗೆ ಮನೆಗೆ ಭೇಟಿ ನೀಡಿದ ನಳಿನ್ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಈ ಸಂದರ್ಭ ಮಾತ ನಾಡಿದ ನಳಿನ್, ಝುಬೈರ್ ಹಂತಕರನ್ನು ವಾರ ದೊಳಗೆ ಬಂಧಿಸಬೇಕು ಮತ್ತು ರಾಜ್ಯ ಸರಕಾರ 40 ಲಕ್ಷ ರೂ. ಪರಿಹಾರ ನೀಡಬೇಕು ಎಂದರು. ಝುಬೇರ್ ಮಕ್ಕಳ ಶೈಕ್ಷಣಿಕ ದತ್ತು: ಝುಬೇರ್ ಅವರ ಇಬ್ಬರು ಪುತ್ರಿಯರು ಮತ್ತು ನಾಲ್ವರು ಪುತ್ರರು ಶಾಲೆಗೆ ಹೋಗುತ್ತಿದ್ದು ಈ ಎಲ್ಲ ಮಕ್ಕಳ ಶಿಕ್ಷಣದ ಖರ್ಚನ್ನು ಬಿಜೆಪಿ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾದ ಪ್ರ. ಕಾರ್ಯದರ್ಶಿ ಡಾ| ಮುನೀರ್ ಬಾವ ಅವರು ಭರಿಸುವ ಭರವಸೆ ನೀಡಿದರು.