Advertisement
ಮೋದಿಯನ್ನು ಅಧಿಕಾರದಿಂದ ಕೆಳಗಿಳಿಸಿದ ಬಳಿಕವೇ ಸಾಯುತ್ತೇನೆ ಎನ್ನುವ ಮೂಲಕ ತಮ್ಮ ಆಯಸ್ಸು ವೃದ್ಧಿಯಾಗಲಿ ಎಂದು ಖರ್ಗೆ ಬೇಡಿಕೊಂಡಿದ್ದಾರೆ. ಯಾಕೆಂದರೆ 2047ರ ವಿಕಸಿತ ಭಾರತವನ್ನು ಅವರು ನೋಡಲಿ ಎಂದು ಆಶಿಸುತ್ತೇನೆ ಎಂದು ಅಮಿತ್ ಶಾ ಹೇಳಿದ್ದಾರೆ.ಮಣಿಪುರ ಬಗ್ಗೆ ಗಮನ ನೀಡಿ- ಕಾಂಗ್ರೆಸ್: ಗೃಹ ಸಚಿವ ಅಮಿತ್ ಶಾ ಅವರು ಮಣಿಪುರ ಹಿಂಸಾಚಾರ, ಜಾತಿ ಗಣತಿಯಂತಹ ಪ್ರಮುಖ ವಿಷಯಗಳತ್ತ ಗಮನ ಹರಿಸಬೇಕೆಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿರುಗೇಟು ನೀಡಿದ್ದಾರೆ. ಎಸ್ಸಿ, ಎಸ್ಟಿ, ಒಬಿಸಿಗೆ ಸೇರಿದ ನೌಕರರಲ್ಲಿ ಶೇ.92ರಷ್ಟು ಜನ ನಗರ ಪ್ರದೇಶದಲ್ಲಿ ಪೌರ ಕಾರ್ಮಿಕರಿದ್ದಾರೆ. ಇಂಥವರಿಗಾಗಿ ಕೇಂದ್ರ ಸರಕಾರ ಜಾತಿ ಗಣತಿ ನಡೆಸಬೇಕು. ಈ ಬಗ್ಗೆ ಗಮನಹರಿಸಿ ಎಂದು ಹೇಳಿದ್ದಾರೆ.