ಲಾಹೋರ್: ಖಲಿಸ್ಥಾನ್ ಲಿಬರೇಶನ್ ಪೋರ್ಸ್ ಸಂಘಟನೆಯ ಉನ್ನತ ನಾಯಕನೋರ್ವನನ್ನು ಸ್ಥಳೀಯ ಗ್ಯಾಂಗ್ ಒಂದು ಹತ್ಯೆ ಮಾಡಿದೆ ಎಂದು ವರದಿಯಾಗಿದೆ.
ಭಾರತದಲ್ಲಿ ಅನೇಕ ಪಾತಕ ಕೃತ್ಯಗಳಲ್ಲಿ ಭಾಗಿಯಾಗಿದ್ದ, ಭಾರತದ ವಾಂಟೆಡ್ ಪಾತಕಿಗಳ ಪಟ್ಟಿಯಲ್ಲಿದ್ದ ಹರ್ಮೀತ್ ಸಿಂಗ್ ಹತ್ಯೆಯಾಗಿದೆ.
ಲಾಹೋರ್ ನ ಡೇರಾ ಚಾಹಲ್ ಗುರುದ್ವಾರದ ಬಳಿ ಸೋಮವಾರ ಮಧ್ಯಾಹ್ನ ಈ ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ.
ಹಣಕಾಸಿನ ವಿಚಾರದಲ್ಲಿ ಸ್ಥಳೀಯ ಗ್ಯಾಂಗ್ ನೊಂದಿಗೆ ಕಲಹ ಉಂಟಾಗಿ ಹರ್ಮೀತ್ ಸಿಂಗ್ ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ.
2016ರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪಂಜಾಬ್ ನಾಯಕನೋರ್ವನನ್ನು ಹತ್ಯೆ ಮಾಡಿದ್ದ ಆರೋಪಿಯಾಗಿರುವ ಹರ್ಮೀತ್ ಸಿಂಗ್, ಡ್ರಗ್ಸ್ ಕಳ್ಳ ಸಾಗಾಣಿಕೆ ಕೃತ್ಯದಲ್ಲೂ ಭಾಗಿಯಾಗಿದ್ದ.
ಪಂಜಾಬ್ ನ ಅಮೃತಸರದ ನಿವಾಸಿಯಾಗಿದ್ದ ಆತ ಕಳೆದ ಎರಡು ದಶಕದಿಂದ ಪಾಕಿಸ್ಥಾನದಲ್ಲಿ ನೆಲೆಸಿದ್ದ.
‘’ಹ್ಯಾಪಿ ಪಿಎಚ್ ಡಿ’’ ಎಂದು ಹೆಸರುವಾಸಿಯಾಗಿದ್ದ ಈತನ ವಿರುದ್ಧ ಇಂಟರ್ ಪೋಲ್ ಕಳೆದ ಅಕ್ಟೋಬರ್ ನಲ್ಲಿ ರೆಡ್ ಕಾರ್ನರ್ ನೋಟೀಸ್ ಜಾರಿ ಮಾಡಿತ್ತು.