Advertisement

ಖಡ್ಕಿ ಶ್ರೀ ಸಾಯಿಬಾಬಾ ದೇವಸ್ಥಾನ ಸುವರ್ಣ ಮಹೋತ್ಸವ

03:51 PM Mar 18, 2018 | |

ಪುಣೆ: ಪುಣೆ ಖಡ್ಕಿ ಯಲ್ಲಿ ರುವ ಶ್ರೀ ಸಾಯಿಬಾಬಾ  ದೇವಸ್ಥಾನದ 50 ನೇ ವಾರ್ಷಿಕೋತ್ಸವವು ಫೆ. 27  ಹಾಗೂ  28 ರಂದು  ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ದೇವಸ್ಥಾನದ ವಿಶ್ವಸ್ತರಾದ ಶಿವ ಎಂ. ಶೆಟ್ಟಿ ಅವರ ನೇತೃತ್ವದಲ್ಲಿ ಶ್ರದ್ಧಾ ಭಕ್ತಿಯೊಂದಿಗೆ ನಡೆಯಿತು.

Advertisement

ಫೆ. 26 ರಿಂದ ಧಾರ್ಮಿಕ ಕಾರ್ಯ ಕ್ರಮಗಳು ಆರಂಭಗೊಂಡಿದ್ದು,  ಫೆ.  27ರಂದು  ವಿಷ್ಣು ಸಹಸ್ರನಾಮ, ಸಾಯಿ ಸಚ್ಚರಿತೆಯ ಸಾಮೂಹಿಕ ಪಾರಾಯಣ, ಗುರು ಪಾಠ ಅಭಂಗ, ಮಹಿಳಾ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ  ವಿಠಲ್‌ ರುಕ್ಮಿಣಿ ಸಾಂಸ್ಕೃತಿಕ ಮಹಿಳಾ ಭಜನಾ ಮಂಡಳಿಯಿಂದ ಭಜನೆ, ಗುರುದತ್ತ ಮಹಿಳಾ ಭಜನಾ ಮಂಡಳಿಯಿಂದ ಭಜನೆ ರಾತ್ರಿ ಖ್ಯಾತ ಸಾಯಿ ಭಜನಾ ಕಲಾವಿದ ಬಬ್ಲೂ ದುಗ್ಗಲ್‌ ಮತ್ತು ಬಳಗದಿಂದ ಸಾಯಿ ದರ್ಬಾರ್‌ ಇನ್ನಿತರ ಕಾರ್ಯಕ್ರಮಗಳು   ನಡೆಯಿತು.

ಫೆ. 28 ರಂದು ಬೆಳಗ್ಗೆ  ನಿತಿನ್‌ ತುಕಾರಾಮ್‌ ದೈತನ್ಕರ್‌ ಇವರಿಂದ ಶಹನಾಯಿ ವಾದನ, ಬೆಳಗ್ಗೆ  ರಾಷ್ಟ್ರೀಯ ಕೀರ್ತನಕಾರರಾದ ಡಾ| ಅಜಯ್‌ ಅಪ್ಪಾ ಮಾರ್ಜನೆ ಮಹಾರಾಜ್‌ ರವರಿಂದ ಕೀರ್ತನೆಗಳು ಹಾಗೂ ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಪ್ರಸಾದ ಸ್ವೀಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next