Advertisement

ಗ್ರಾಮ ವಾಸ್ತವ್ಯದಲ್ಲಿ ಊಟ ಬಡಿಸಿದ ಸಚಿವ ಖಾದರ್‌

11:21 AM Nov 20, 2017 | Team Udayavani |

ಪಾವೂರು: ಸಚಿವ ಯು.ಟಿ.ಖಾದರ್‌ ಅವರು ಗದ್ದೆಗಿಳಿದು ಭತ್ತದ ಕೃಷಿ ಪ್ರಾತ್ಯಕ್ಷಿಕೆಯಲ್ಲಿ ತೊಡಗಿಸಿಕೊಂಡು ನೇಜಿ ನಾಟಿ ಮಾಡಿ ಗಮನ ಸೆಳೆದಿದ್ದರು. ಇದೀಗ ಸುಮಾರು 100ಕ್ಕೂ ಅಧಿಕ ಜನರಿಗೆ ಸೌಟು ಹಿಡಿದು ಅನ್ನವನ್ನು ಬಡಿಸುವ
ಮೂಲಕ ಸಚಿವರಾಗಿ ಆಹಾರ ಖಾತೆ ನಿರ್ವಹಿಸುವುದು ಮಾತ್ರ ಅಲ್ಲ ಮಾಡಿದ ಆಹಾರವನ್ನು ಬಡಿಸುವುದರಲ್ಲೂ ಎತ್ತಿದ ಕೈ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.

Advertisement

ಇದು ನಡೆದದ್ದು ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಾವೂರು ಗ್ರಾಮದ ಕಂಬಳಪದವು ಪರಿಶಿಷ್ಟ ಜಾತಿ ಕಾಲನಿಯ ಗಂಗಮ್ಮ ಅವರ ಮನೆಯಲ್ಲಿ, ಉಳ್ಳಾಲ ಬ್ಲಾಕ್‌ ಮಹಿಳಾ ಕಾಂಗ್ರೆಸ್‌ನ ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಚಿವರು ಮಹಿಳಾ ಕಾಂಗ್ರೆಸ್‌ನ ಕಾರ್ಯಕರ್ತರು ಮತ್ತು ಗಂಗಮ್ಮಾ ಅವರ ಮನೆಯ ಸದಸ್ಯರು ತಯಾರಿಸಿದ ಅಡುಗೆಯನ್ನು ಕಾರ್ಯಕ್ರಮಕ್ಕೆ ಆಗಮಿಸಿದ ಕಾರ್ಯಕರ್ತರಿಗೆ ಮತ್ತು ಮನೆಯ ಸದಸ್ಯರಿಗೆ, ಕಾಲನಿ ನಿವಾಸಿಗಳಿಗೆ ಬಡಿಸುವ ಮೂಲಕ ಸಂಪೂರ್ಣವಾಗಿ ತೊಡಗಿಸಿಕೊಂಡರು.

ಕಾರ್ಯಕರ್ತರಿಂದ ಅಡುಗೆ ತಯಾರಿ
35ಕ್ಕೂ ಹೆಚ್ಚು ಕಾಂಗ್ರೆಸ್‌ನ ಮಹಿಳಾ ಮುಖಂಡರು ಸೇರಿದಂತೆ ಮಹಿಳಾ ಕಾರ್ಯಕರ್ತರು ಆಗಮಿಸಿದ್ದರು. ಕಾಲನಿಯ ಸುತ್ತಮುತ್ತಲಿನ ಜನರನ್ನು ಸೇರಿಸಿಕೊಂಡು ಆವರ ಸಮಸ್ಯೆಗಳನ್ನು ಆಲಿಸುವುದರೊಂದಿಗೆ, ಗ್ರಾಮ ಸಮಿತಿ ರಚನೆ, ಸೇರಿದಂತೆ ವಿವಿಧ ಚಟುವಟಿಕೆಗಳನ್ನು ನಡೆಸಿದರು.

ಗ್ರಾಮ ವಾಸ್ತವ್ಯದಲ್ಲಿ ಮಹಿಳಾ ಕಾಂಗ್ರೆಸ್‌ನ ಅಧ್ಯಕ್ಷ ದೇವಕಿ ಆರ್‌. ಉಳ್ಳಾಲ್‌, ತಾ.ಪಂ.ಸದಸ್ಯರಾದ ಸುರೇಖಾ ಚಂದ್ರಹಾಸ್‌, ಪದ್ಮಾವತಿ ಪೂಜಾರಿ, ವಿಲ್ಮಾ ವಿಲ್‌ಪ್ರಡ್‌ ಡಿ’ಸೋಜಾ, ಮುಖಂಡರಾದ ಸ್ವಪ್ನಾ ಹರೀಶ್‌, ವಿಜಯ ಲಕ್ಷ್ಮೀ ರಝೀಯಾ ಇಬ್ರಾಹಿಂ, ಜೆಸಿಂತಾ ಮೆಂಡೋನ್ಸಾ, ಸೀತಾ ನಾಯಕ್‌, ಚಂಚಲಾಕ್ಷಿ ಭಾಗವಹಿಸಿದ್ದರು. ಉಳ್ಳಾಲ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸಂತೋಷ್‌ ಕುಮಾರ್‌ ಶೆಟ್ಟಿ, ತಾಲೂಕು ಪಂಚಾಯತ್‌ ಅಧ್ಯಕ್ಷ ಮಹಮ್ಮದ್‌ ಮೋನು, ಸದಸ್ಯ ಜಬ್ಟಾರ್‌ ಬೋಳಿಯಾರ್‌, ಅಲ್ಪ ಸಂಖ್ಯಾಕ ಘಟಕದ ಜಿಲ್ಲಾಧ್ಯಕ್ಷ ಎನ್‌.ಎಸ್‌., ಕರೀಂ, ಪಾವೂರು ಗ್ರಾಮ ಪಂಚಾಯತ್‌ ಅಧ್ಯಕ್ಷ ಮಹಮ್ಮದ್‌ ಫಿರೋಝ್ ಮಲಾರ್‌ ಅಂಬ್ಲಿಮೊಗರು ಗ್ರಾಮ ಪಂಚಾಯತ್‌ ಅಧ್ಯಕ್ಷ ಮಹಮ್ಮದ್‌ ರಫೀಕ್‌, ಕೊಣಾಜೆ ಪಂಚಾಯತ್‌ ಅಧ್ಯಕ್ಷ ಶೌಕತ್‌ ಆಲಿ ಕೊಣಾಜೆ, ಕಿನ್ಯಾ ಪಂಚಾಯತ್‌ ಉಪಾಧ್ಯಕ್ಷ ಸಿರಾಜ್‌ ಕಿನ್ಯ, ಬ್ಲಾಕ್‌ ಕಾಂಗ್ರೆಸ್‌ ಪ್ರ. ಕಾರ್ಯದರ್ಶಿ ರೆಹಮಾನ್‌ ಕೋಡಿಜಾಲ್‌, ಉಳ್ಳಾಲ ನಗರಸಭಾ ಸದಸ್ಯ ಮುಸ್ತಾಫ ಉಳ್ಳಾಲ್‌, ಮುಖಂಡರಾದ ನಝರ್‌ಷಾ ಪಟ್ಟೋರಿ, ಪಿಯೂಷ್‌ ಮೊಂತೇರೋ, ಆಲ್ವಿನ್‌ ಡಿ’ಸೋಜಾ, ಪದ್ಮನಾಭ ಗಟ್ಟಿ, ಅಚ್ಯುತ ಗಟ್ಟಿ, ಸುಲೇಮಾನ್‌, ಯಾಕೂಬ್‌ ತಲಪಾಡಿ, ಸಲಾಂ ತಲಪಾಡಿ, ಸಲೀಂ ಮೇಘಾ, ಇಕ್ಬಾಲ್‌ ಕೊಣಾಜೆ, ಖಲೀಲ್‌ ಪಟ್ಟೋರಿ, ಝಕಾರಿಯಾ ಮಲಾರ್‌, ಪಾವೂರು ಗ್ರಾಮ ಪಂಚಾಯತ್‌ ಸದಸ್ಯರಾದ ವಿವೇಕ್‌ ರೈ, ಮಹಮ್ಮದ್‌, ಸಾದಿಕ್‌, ಮಜೀದ್‌ ಸಾತ್ಕೊ, ಎಂ.ಪಿ.ಹಸನ್‌ ಕಾಂಗ್ರೆಸ್‌ ಪಾವೂರು ಗ್ರಾಮ ಸಮಿತಿ ಅಧ್ಯಕ್ಷ ಉಗ್ಗಪ್ಪ ಪೂಜಾರಿ ಮಹಿಳಾ ಕಾಂಗ್ರೆಸ್‌ನ ಅನಿತಾ ಡಿ’ಸೋಜಾ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಮೂಲ ಸೌಕರ್ಯಕ್ಕೆ ಕೊಡುಗೆ
ಗಂಗಮ್ಮ ಅವರ ಮನೆ ನಾದುರಸ್ತಿಯಲ್ಲಿದ್ದು, ಮನೆಗೆ ಬಾಗಲು, ದಾರಂದ, ಸುಣ್ಣ ಬಣ್ಣ ಬಳಿಯುವ ಭರವಸೆಯನ್ನು ಮಹಿಳಾ ಕಾಂಗ್ರೆಸ್‌ ಮತ್ತು ಸಚಿವ ಯು.ಟಿ.ಖಾದರ್‌ ನೆರವೇರಿಸುವ ಭರವಸೆ ನೀಡಿದರು. ಮನಯ ಹಿಂಬದಿಯ ರಸ್ತೆ ದುರಸ್ತಿ ಸೇರಿದಂತೆ ಕಾಲನಿಯಲ್ಲಿ ಮೂಲ ಸೌಕರ್ಯದ ಭರವಸೆ ನೀಡಲಾಯಿತು. ಮಹಿಳಾ ಕಾಂಗ್ರೆಸ್‌ ಕಾರ್ಯಕರ್ತರು ಬೆಳಗಿನ ಉಪಹಾರ ಸೇವಿಸಿ ಗ್ರಾಮವಾಸ್ತವ್ಯವನ್ನು ಪೂರ್ಣಗೊಳಿಸಿದರು.

Advertisement

ಸೌಹಾರ್ದತೆಗೆ ಪೂರಕ
ಗ್ರಾಮವಾಸ್ತವ್ಯದಿಂದ ಗ್ರಾಮದ ಸಂಸ್ಕೃತಿ, ಆಚಾರ ವಿಚಾರಗಳೊಂದಿಗೆ ಆ ಪರಿಸರದ ಸಮಸ್ಯೆಗಳ ವಿಚಾರ ವಿನಿಮಯಕ್ಕೆ ಪೂರಕವಾಗಿದ್ದು, ಎಲ್ಲ ಜಾತಿ ಧರ್ಮದ ಕಾರ್ಯಕರ್ತರು ಒಂದೆಡೆ ಸೇರಿದಾಗ ಅವರಲ್ಲಿ ಸೌಹಾರ್ದ ತೆಯೊಂದಿಗೆ ಸಹೋದರತೆಯ ಮನೋಭಾವನೆ ಹೆಚ್ಚಲು ಸಹಕಾರಿ. ಇಂತಹ ಕಾರ್ಯಕ್ರಮದಿಂದ ಮಹಿಳಾ ಕಾರ್ಯಕರ್ತರಲ್ಲಿ ನಾಯಕತ್ವಗುಣ ಬೆಳೆಯಲು ಸಾಧ್ಯವಿದ್ದು, ಇದರೊಂದಿಗೆ ಸ್ಥಳೀಯ ಮೂಲಸೌಕರ್ಯದ ಮಾಹಿತಿ ಪಡೆದು. ಸಮಸ್ಯೆ ಪರಿಹಾರ ಸಹಕರಿಸಬಹುದು.
ಯು.ಟಿ.ಖಾದರ್‌, ಸಚಿವರು

Advertisement

Udayavani is now on Telegram. Click here to join our channel and stay updated with the latest news.

Next