Advertisement
ಎಸ್‌ಡಿಪಿಐ ಮುಖಂಡ ಕಲಾಯಿ ಅಶ್ರಫ್ ಹತ್ಯೆ ನಡೆದು ಜಿಲ್ಲೆಯಲ್ಲಿ ಕೋಮು ಸಂಘರ್ಷದ ಪರಿಸ್ಥಿತಿ ತಲೆದೋರಿದ್ದ ಸಂದರ್ಭ ಜಿಲ್ಲೆಗೆ ಮಂಡ್ಯದಿಂದ ಎಸ್‌ಪಿಯಾಗಿ ವರ್ಗಾ ವಣೆಗೊಂಡು ಬಂದಿದ್ದ ಯುವ ಐಪಿಎಸ್ ಅಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಜಿಲ್ಲೆಯಲ್ಲಿ ಹದಗೆಟ್ಟಿದ್ದ ಕಾನೂನು ಸುವ್ಯವಸ್ಥೆಯನ್ನು ಹತೋಟಿಗೆ ತರುವ ಪ್ರಯತ್ನ ನಡೆಸಿದ್ದರು. ಅಧಿಕಾರ ವಹಿಸಿಕೊಂಡ ಬಳಿಕ ಬಿ.ಸಿ. ರೋಡ್‌ನಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ನಡೆದು ಉದ್ಭವಿಸಿದ್ದ ಕೋಮು ಸಂಘರ್ಷ ಪರಿಸ್ಥಿತಿಯನ್ನು ಕೂಡ ಅತ್ಯಂತ ಪರಿಣಾಮಕಾರಿಯಾಗಿ ನಿಯಂ ತ್ರಣಕ್ಕೆ ತರುವಲ್ಲಿ ಅವರು ಕಟ್ಟುನಿಟ್ಟಿನ ಕ್ರಮ ಗಳನ್ನು ಕೈಗೊಂಡಿದ್ದರು. ಹೀಗೆ ಜಿಲ್ಲೆಯು ವಿಷಮ ಸ್ಥಿತಿಯಿಂದ ನಿಧಾನವಾಗಿ ಚೇತರಿಸಿಕೊಳ್ಳು ತ್ತಿರುವಾಗಲೇ ಅವರನ್ನು ಯಾವುದೇ ನಿರ್ದಿಷ್ಟ ಕಾರಣಗಳಿಲ್ಲದೆ, “ಸಹಜ ವರ್ಗಾವಣೆ’ಯ ನೆಪದಲ್ಲಿ ಎತ್ತಂಗಡಿ ಮಾಡಿರುವುದಕ್ಕೆ ಸಾಮಾಜಿಕ ಜಾಲತಾಣ ಸೇರಿದಂತೆ ವಿರೋಧ ವ್ಯಕ್ತ ವಾಗುತ್ತಿದೆ. ಇದು ಸುಧೀರ್ ರೆಡ್ಡಿ ಅವರ ಕಾರ್ಯವೈಖರಿ ಹಾಗೂ ಜನಪ್ರಿಯತೆಗೆ ಸಾಕ್ಷಿಯಾಗಿದೆ.
ನಿಕಟಪೂರ್ವ ಎಸ್‌ಪಿ ಭೂಷಣ್ ಗುಲಾಬ್ ರಾವ್ ಬೋರಸೆ ಅವರು ವಿನಾ ಕಾರಣ ವಿವಾದ ಕ್ಕೊಳಗಾಗಿ ವರ್ಗಾವಣೆ ಗೊಂಡಾಗ, 2017ರ ಜೂನ್ 22ರಂದು ಜಿಲ್ಲೆಗೆ ಸುಧೀರ್ ಕುಮಾರ್ ರೆಡ್ಡಿ ವರ್ಗಾವಣೆಯಾಗಿ ಬಂದಿದ್ದರು. ಅವರು ಅಧಿಕಾರ ವಹಿಸಿಕೊಂಡ ಸಂದರ್ಭ ಜಿಲ್ಲೆಯಲ್ಲಿ ಅಶಾಂತಿಯ ವಾತಾವರಣವಿತ್ತು. ಕಾನೂನು ಸುವ್ಯವಸ್ಥೆಯೂ ಸಮಾಧಾನಕರವಾಗಿರಲಿಲ್ಲ. ವಿಶೇಷವಾಗಿ ಕಲ್ಲಡ್ಕ, ಬಂಟ್ವಾಳ ಭಾಗದಲ್ಲಿ ಉದ್ವಿಗ್ನ ವಾತಾವರಣವಿತ್ತು. ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿಯೂ ಚೂರಿ ಇರಿತ, ಹಲ್ಲೆ ಮತ್ತು ಪ್ರತೀಕಾರದ ಹಲ್ಲೆ-ಹತ್ಯೆಗಳು ಆಗಿಂದಾಗ್ಗೆ ನಡೆಯುತ್ತಿದ್ದವು. ಇಂತಹ ಸಂದರ್ಭದಲ್ಲಿ ಜಿಲ್ಲೆಗೆ ಬಂದಿದ್ದ ಸುಧೀರ್ ಕುಮಾರ್ ರೆಡ್ಡಿ ಅವರ ಬಗ್ಗೆ “ಇನ್ನೂ ಚಿಗುರು ಮೀಸೆಯ ಹುಡುಗ! ದ.ಕ.ದಂಥ ಜಿಲ್ಲೆಗೆ ಬಂದು ಏನು ಮಾಡಿಯಾರು? ಕಠಿನ ಪರಿಸ್ಥಿತಿ ನಿಭಾಯಿಸಲು ಇವರಿಂದ ಸಾಧ್ಯವೇ?’ ಎಂಬಿತ್ಯಾದಿ ಪ್ರಶ್ನೆಗಳು ಕೇಳಿಬಂದಿದ್ದವು. ಆದರೆ ಸುಧೀರ್ ಅಧಿಕಾರ ವಹಿಸಿಕೊಂಡ ಕೂಡಲೇ ಅಖಾಡಕ್ಕಿಳಿದು ಉದ್ವಿಗ್ನಗೊಂಡಿದ್ದ ಬಂಟ್ವಾಳ, ಕಲ್ಲಡ್ಕಗಳಲ್ಲಿ ಆಗಿನ ಐಜಿಪಿ ಹರಿಶೇಖರನ್ ಜತೆ ಸೇರಿ ಮೊಕ್ಕಾಂ ಹೂಡಿದರು. ಎಲ್ಲ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ಜಿಲ್ಲೆಯ ಪರಿಸ್ಥಿತಿಯನ್ನು ಸವಾಲಾಗಿ ಸ್ವೀಕರಿಸಿ ಕೆಲವೇ ದಿನಗಳಲ್ಲಿ ಸಹಜ ಸ್ಥಿತಿಗೆ ತರುವಲ್ಲಿ ಯಶಸ್ವಿಯಾಗಿದ್ದರು.
Related Articles
Advertisement
ವದಂತಿಗಳ ಬಗ್ಗೆ ಕಠಿನ, ಪಾರದರ್ಶಕ ನಿಲುವುವದಂತಿ ಹಬ್ಬಿಸುವವರ ಬಗ್ಗೆ ಸುಧೀರ್ ರೆಡ್ಡಿ ಅವರು ಕಠಿನ ನಿಲುವು ಹೊಂದಿದ್ದರು. ತನಿಖೆ ಸಂದರ್ಭದಲ್ಲಿ ಪೊಲೀಸರು “ಕುರಾನ್ ಎಸೆದರು’ ಎಂಬ ವದಂತಿ ಹಬ್ಬಿಸಿದ ಪ್ರಕರಣದಲ್ಲಿ ತತ್‌ಕ್ಷಣ ಪತ್ರಕರ್ತರಿಗೆ ಸ್ಪಷ್ಟೀಕರಣ ನೀಡಿದ್ದಲ್ಲದೆ, ತಪ್ಪು ಮಾಹಿತಿ ನೀಡಿದ, ತಪ್ಪು ವರದಿ ಮಾಡಿದ ಪತ್ರಕರ್ತರ ಮೇಲೂ ಕೇಸು ಹಾಕುವ ನಿಷ್ಠುರ ನಿಲುವು ತಳೆದಿದ್ದರು. ಇದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿ ಅವರ ವರ್ಗಾವಣೆಗೂ ಒತ್ತಡ ಬಂದಿತ್ತು. ಶರತ್ ಮಡಿವಾಳ ಶವಯಾತ್ರೆ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆಸಿದ ಪ್ರಕರಣದಲ್ಲಿ ಸಿಸಿಟಿವಿ ಕೆಮರಾ ದೃಶ್ಯಾವಳಿ ಆಧಾರದಲ್ಲಿ ಪ್ರಭಾವಿಗಳಿಗೂ ಕೇಸಿನ ರುಚಿ ತೋರಿಸಿದ್ದರು. ಇನ್ನೊಂದೆಡೆ ಅಕ್ರಮ ಮರಳು ಸಾಗಾಟ ಗಾರರ ವಿರುದ್ಧ ಕಠಿನ ನಿಲುವು ತಳೆದು ಹಲವಾರು ಮಂದಿಯ ಮೇಲೆ ಪ್ರಕರಣ ದಾಖ ಲಿಸಿದ್ದಲ್ಲದೆ ಸಾಕಷ್ಟು ಸಂಖ್ಯೆಯ ವಾಹನ ಗಳನ್ನು ಮತ್ತು ಮರಳನ್ನು ವಶಪಡಿಸಿ ಮುಟ್ಟುಗೋಲು ಹಾಕಿಕೊಂಡಿದ್ದರು. ತಪ್ಪೆಸಗಿದ್ದ ತಮ್ಮದೇ ಇಲಾಖೆಯ ಕೆಳಹಂತದ ಪೊಲೀಸ್ ಅಧಿಕಾರಿ, ಸಿಬಂದಿಯನ್ನೂ ಅವರು ಬಿಟ್ಟಿರಲಿಲ್ಲ ಎನ್ನುವುದು ಗಮನಾರ್ಹ. 2010ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿ
ವರ್ಗಾವಣೆ ಹೊಂದಿರುವ ಸಿ.ಎಚ್. ಸುಧೀರ್ ಕುಮಾರ್ ರೆಡ್ಡಿ ಅವರು 2010ನೇ ತಂಡದ ಐಪಿಎಸ್ ಅಧಿಕಾರಿಯಾಗಿದ್ದು, ಮೂಲತಃ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆ ನರಸರಾವ್‌ಪೇಟೆಯವರು. ಅವರು ಈ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಸೂಕ್ಷ್ಮ ಪ್ರದೇಶ ಭಟ್ಕಳದಲ್ಲಿ ಅಡಿಶನಲ್ ಎಸ್‌ಪಿ ಆಗಿ ಹಾಗೂ ಬಳಿಕ ಬೀದರ್ ಮತ್ತು ಮಂಡ್ಯದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. “ವೀ ವಾಂಟ್ ಸುಧೀರ್ ರೆಡ್ಡಿ’ ಟ್ವೀಟ್ ಅಭಿಯಾನ
ಎಸ್ಪಿ ವರ್ಗಾವಣೆ ವಿರೋಧಿಸಿ ಯುನೈಟೆಡ್ ತುಳುನಾಡು ಸಂಘಟನೆ ವತಿಯಿಂದ “ವೀ ವಾಂಟ್ ಸುಧೀರ್ ರೆಡ್ಡಿ’ ಸೇವ್ ತುಳುನಾಡ್ ಹೆಸರಲ್ಲಿ ಟ್ವೀಟ್ ಅಭಿಯಾನ ಆರಂಭಗೊಂಡಿದೆ. ರವಿವಾರ ಬೆಳಗ್ಗೆ 6ರಿಂದ ಸಂಜೆ 6ರ ವರೆಗೆ ಟ್ವೀಟ್ ಅಭಿಯಾನ ನಡೆಯಲಿದೆ ಎಂಬುದಾಗಿ ಸಂಘಟಕರು ತಿಳಿಸಿದ್ದರೂ ಸರಕಾರದಿಂದ ಯಾವುದೇ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಇನ್ನೂ ಎರಡು ದಿನ ಅಭಿಯಾನ ನಡೆಸಲಿದೆ. ಅದಾದ ಬಳಿಕವೂ ಸರಕಾರದಿಂದ ಸಕಾರಾತ್ಮಕ ಸ್ಪಂದನೆ ಬಾರದೆ ಇದ್ದಲ್ಲಿ ಬೇರೆ ರೀತಿಯಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ. ಸರಕಾರ ನನ್ನನ್ನು ವರ್ಗಾವಣೆ ಮಾಡಿದೆ. ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ವರ್ಗಾವಣೆ ಕುರಿತಂತೆ ಮೂವ್‌ಮೆಂಟ್ ಆರ್ಡರ್ ಬರಬೇಕು. ಅದು ಕೈ ಸೇರಿದ ಬಳಿಕ ನೂತನ ಎಸ್‌ಪಿ ಇಲ್ಲಿಗೆ ಬಂದು ಅಧಿಕಾರ ಸ್ವೀಕರಿಸಬೇಕು. ಅವರಿಗೆ ಆ ಬಳಿಕ ನನ್ನ ಸೇವಾ ಅನುಭವವನ್ನು ತಿಳಿಸುತ್ತೇನೆ.
– ಸುಧೀರ್ ಕುಮಾರ್ ರೆಡ್ಡಿ , ಜಿಲ್ಲಾ ಎಸ್.ಪಿ. ಎಸ್.ಪಿ. ಸುಧೀರ್ ಕುಮಾರ್ ರೆಡ್ಡಿ ಅವರ ವರ್ಗಾವಣೆಗೆ ಕಾರಣ ಯಾವುದೂ ಇಲ್ಲ. ಅವರದು ಮಾಮೂಲಿ ವರ್ಗಾವಣೆ. ನಮಗೆ ಇನ್ನೋರ್ವ ಉತ್ತಮ ಅಧಿಕಾರಿ ಬರುತ್ತಾರೆ.
– ಬಿ. ರಮಾನಾಥ ರೈ, ಜಿಲ್ಲಾ ಉಸ್ತುವಾರಿ ಸಚಿವ ಸುಧೀರ್ ರೆಡ್ಡಿ ಪಾಲಿಗಿದು ಭಡ್ತಿ: ಗೃಹ ಸಚಿವ ರಾಮಲಿಂಗಾ ರೆಡ್ಡಿ
“ಬೆಳಗಾವಿ ಎಸ್‌ಪಿಯಾಗಿದ್ದ ರವಿಕಾಂತೇ ಗೌಡ ಅವರು ಈಗಾಗಲೇ ಮೂರು ವರ್ಷ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ಸೂಚನೆಯಂತೆ ಅವರನ್ನು ವರ್ಗಾವಣೆ ಮಾಡುವುದು ಅನಿವಾರ್ಯವಾಗಿತ್ತು. ಈ ಕಾರಣಕ್ಕೆ ದ.ಕ. ಎಸ್‌ಪಿ ಸುಧೀರ್ ಕುಮಾರ್ ರೆಡ್ಡಿ ಅವರನ್ನು ಬೆಳ ಗಾವಿಗೆ ವರ್ಗಾಯಿಸಿ ರವಿಕಾಂತೇಗೌಡರನ್ನು ದ.ಕ. ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ.
ಅದು ಬಿಟ್ಟರೆ, ಯಾವುದೇ ರಾಜಕೀಯ ದುರುದ್ದೇಶದಿಂದ ಸುಧೀರ್ ರೆಡ್ಡಿಯನ್ನು ಏಕಾಏಕಿ ವರ್ಗಾವಣೆ ಮಾಡಿಲ್ಲ. ಆದರೆ ದ.ಕ.ದಲ್ಲಿ ನಾಲ್ಕು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯನ್ನು ರೆಡ್ಡಿ ಅವರು ನೋಡಿಕೊಳ್ಳುತ್ತಿದ್ದರು. ಈಗ ಅವರಿಗೆ ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 18 ವಿಧಾನಸಭೆ ಕ್ಷೇತ್ರದ ವ್ಯಾಪ್ತಿ ನೋಡಿಕೊಳ್ಳುವ ಜವಾಬ್ದಾರಿಯಿದೆ. ಹಾಗೆ ನೋಡಿದರೆ, ಸಣ್ಣ ಜಿಲ್ಲೆಯಿಂದ ದೊಡ್ಡ ಜಿಲ್ಲೆಗೆ ಸುಧೀರ್ ರೆಡ್ಡಿ ಪಾಲಿಗೆ ಇದು ಪ್ರೊಮೋಷನ್ ಆಗಿದೆ. ಇನ್ನು ರವಿಕಾಂತೇ ಗೌಡ ಅವರು ಕೂಡ ದಕ್ಷ ಅಧಿಕಾರಿಯಾಗಿದ್ದು, ದ.ಕ.ದಲ್ಲಿ ಉತ್ತಮ ರೀತಿ ಕೆಲಸ ಮಾಡುವ ವಿಶ್ವಾಸವಿದೆ’ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ “ಉದಯವಾಣಿ’ಗೆ ಸ್ಪಷ್ಟಪಡಿಸಿದ್ದಾರೆ. ನನ್ನ ಕ್ಷೇತ್ರದ ಶೇ. 90ರಷ್ಟು ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಗೆ ಬರುತ್ತದೆ. ಶೇ. 10ರಷ್ಟು ವ್ಯಾಪ್ತಿ ಮಾತ್ರ ಎಸ್.ಪಿ. ಅವರ ಕಾರ್ಯಕ್ಷೇತ್ರದಲ್ಲಿದೆ. ಅವರ ವರ್ಗಾವಣೆ ಸಹಜ ಪ್ರಕ್ರಿಯೆ ಆಗಿರಬಹುದು.
-ಸಚಿವ ಯು.ಟಿ. ಖಾದರ್ ಸುಧೀರ್ ಕುಮಾರ್ ರೆಡ್ಡಿ ಅವರು ಉತ್ತಮ, ದಕ್ಷ ಅಧಿಕಾರಿಯಾಗಿದ್ದು, ಅಕ್ರಮ ಮರಳುಗಾರಿಕೆ ಮತ್ತು ಇತರ ಅಕ್ರಮ ದಂಧೆಗಳನ್ನು ಸಂಪೂರ್ಣವಾಗಿ ನಿಲ್ಲಿಸಿದ್ದರು. ಅವರನ್ನು ಕಾಂಗ್ರೆಸ್‌ನವರು ರಾಜಕೀಯ ದುರುದ್ದೇಶದಿಂದ ವರ್ಗಾಯಿಸಿದ್ದಾರೆ. ಜಿಲ್ಲೆಯಲ್ಲಿ ನಡೆಯುತ್ತಿದ್ದ ಗಲಭೆ ನಿಲ್ಲಿಸಬೇಕೆಂದು ಅವರನ್ನು ಕರೆತಂದವರೇ ಈಗ ವರ್ಗಾವಣೆ ಮಾಡಿಸಿದ್ದಾರೆ.
– ಶರಣ್ ಪಂಪ್‌ವೆಲ್, ಬಜರಂಗದಳ ಪ್ರಾಂತ ಸಂಚಾಲಕ ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ ಸಾಮಾನ್ಯ ಪ್ರಕ್ರಿಯೆ. ಉತ್ತಮ ಕೆಲಸ ಮಾಡಿದವರನ್ನು ಮತ್ತು ಅವರ ಕೆಲಸವನ್ನು ಜನರು ಮರೆಯುವುದಿಲ್ಲ. ಸುಧೀರ್ ರೆಡ್ಡಿ ಉತ್ತಮ ಅಧಿಕಾರಿಯಾಗಿದ್ದರು. ಅವರು ಮಾಡಿದ ಒಳ್ಳೆಯ ಕೆಲಸಗಳನ್ನು ಮುಂದೆ ಬರುವ ಅಧಿಕಾರಿಗಳು ಮುಂದುವರಿಸಬೇಕು.
– ವಸಂತ ಆಚಾರಿ, ಸಿಐಟಿಯು ಮುಖಂಡ ಹಿಲರಿ ಕ್ರಾಸ್ತಾ