Advertisement

ಸೋಮವಾರ ಅಪ್ಪಳಿಸಲಿದೆ ರಾಕಿಂಗ್ ‘ತೂಫಾನ್’; ಕೆಜಿಎಫ್ 2 ಹಾಡು ಬಿಡುಗಡೆ

03:00 PM Mar 20, 2022 | Team Udayavani |

ಬಹುನಿರೀಕ್ಷಿತ ಚಿತ್ರ ‘ಕೆಜಿಎಫ್ 2’ ಎಪ್ರಿಲ್ 14ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ.  ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಚಿತ್ರದ ಫೀವರ್ ಈಗಾಗಲೇ ಆರಂಭವಾಗಿದೆ. ಚಿತ್ರದ ಮೊದಲ ಹಾಡು ಮಾರ್ಚ್ 21ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

Advertisement

ಕೆಜಿಎಫ್ 2 ಚಿತ್ರದ ಮೊದಲ ಲಿರಿಕಲ್ ವಿಡಿಯೋ ‘ತೂಫಾನ್’ ಹಾಡು ಸೋಮವಾರ ಬೆಳಗ್ಗೆ 11.07ಕ್ಕೆ ಬಿಡುಗಡೆಯಾಗಲಿದೆ. ಈ ಮೂಲಕ ಕೆಜೆಎಫ್ 2 ತನ್ನ ಪ್ರಚಾರ ಕಾರ್ಯ ಆರಂಭಿಸಿದೆ.

ಚಿತ್ರದ ಟ್ರೇಲರ್ ನ್ನು ಮಾರ್ಚ್ 27ರಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಈ ಮೊದಲೇ ಘೋಷಣೆ ಮಾಡಿತ್ತು.  ಇದೀಗ ಲಿರಿಕಲ್ ಹಾಡು ಬಿಡುಗಡೆಯ ಮಾಹಿತಿಯನ್ನು ನಿರ್ಮಾಣ ಸಂಸ್ಥೆಹೊಂಬಾಳೆ ಫಿಲ್ಸ್ಮ್​ ಅಧಿಕೃತವಾಗಿ ಸಾಮಾಜಿಕ ಜಾಲತಾಣದ ಮೂಲಕ ಪ್ರಕಟಿಸಿದೆ. ಸಂಗೀತ ನಿರ್ದೇಶಕ ರವಿ ಬಸ್ರೂರು ಅವರ ಸಂಗೀತವು ‘ಕೆಜಿಎಫ್​: ಚಾಪ್ಟರ್​ 1’ ಚಿತ್ರಕ್ಕೆ ಹೊಸ ಮೆರುಗು ತಂದಿತ್ತು. ಈಗ ‘ಕೆಜಿಎಫ್​​ 2’ ಸಿನಿಮಾದ ಹಾಡುಗಳ ಮೂಲಕ ಅವರು ಯಾವ ರೀತಿ ಮೋಡಿ ಮಾಡಲಿದ್ದಾರೆ ಎಂದು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

ಇದನ್ನೂ ಓದಿ:ಹೋಳಿ: ಗಂಗಾವತಿ ಪತ್ರಕರ್ತರ ಫೋಟೋ ಶೇರ್ ಮಾಡಿದ ಅನುಪಮ್ ಖೇರ್

ಸ್ಟಾರ್ ಡೈರೆಕ್ಟರ್ ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ 2 ಚಿತ್ರವನ್ನು ವಿಜಯ್ ಕಿರಗಂದೂರು ನಿರ್ಮಿಸಿದ್ದಾರೆ. ಬಾಲಿವುಡ್ ಸ್ಟಾರ್ ಕಲಾವಿದರಾದ ಸಂಜಯ್ ದತ್ ಮತ್ತು ರವೀನಾ ಟಂಡನ್ ಅವರು ಕೆಜಿಎಫ್ 2 ಚಿತ್ರದಲ್ಲಿ ನಟಿಸಿದ್ದು, ಸಿನಿಮಾದ ಕ್ರೇಜ್ ಹೆಚ್ಚುವಂತೆ ಮಾಡಿದ್ದಾರೆ. ಉಳಿದಂತೆ ಶ್ರೀನಿಧಿ ಶೆಟ್ಟಿ, ಪ್ರಕಾಶ್ ರೈ ಮುಖ್ಯಪಾತ್ರಗಳಲ್ಲಿ ನಟಿಸಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next