Advertisement

 ಕೆಜಿಎಫ್ ನಲ್ಲಿ ಹೊಸ ನಗರ, ರಾಜಧಾನಿ ಒತ್ತಡ ತಗ್ಗಿಸಲು ನಿರ್ಮಾಣ

03:45 AM Mar 08, 2017 | Harsha Rao |

ಬೆಂಗಳೂರು: ರಾಜಧಾನಿ ಬೆಂಗಳೂರಿನ ಒತ್ತಡ ತಗ್ಗಿಸಲು ಆಂಧ್ರದ ಅಮರಾವತಿ ಮಾದರಿಯಲ್ಲೇ ಕೋಲಾರ ಜಿಲ್ಲೆಯ ಕೆಜಿಎಫ್ನಲ್ಲಿ 20 ಲಕ್ಷ ಜನವಸತಿಗೆ ಅವಕಾಶವುಳ್ಳ “ನವನಗರ’ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ.

Advertisement

ಕೆಜಿಎಫ್ನಲ್ಲಿರುವ ಭಾರತ್‌ ಗೋಲ್ಡ್‌ ಮೈನ್ಸ್‌ ಲಿಮಿಟೆಡ್‌ಗೆ (ಬಿಜಿಎಂಎಲ್‌) ಸೇರಿದ 12 ಸಾವಿರ ಎಕರೆ ಪೈಕಿ 11 ಸಾವಿರ ಎಕರೆ ಪ್ರದೇಶದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಈ ಉಪನಗರ ತಲೆ ಎತ್ತಲಿದ್ದು, ಅಂತಾರಾಷ್ಟ್ರೀಯ ಟೆಂಡರ್‌ ಮೂಲಕ ಸಾಧ್ಯತಾ ವರದಿ ಪಡೆದು ಕ್ರಿಯಾ ಯೋಜನೆ ರೂಪಿಸಲು ತೀರ್ಮಾನಿಸಲಾಗಿದೆ.

ವಿಕಾಸಸೌಧದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಗರಾಭಿವೃದ್ಧಿ ಸಚಿವ ರೋಷ ನ್‌ಬೇಗ್‌ ಅವರು, ಈ ಹಿಂದೆ ಬಿಜಿಎಂಎಲ್‌ ಸಂಸ್ಥೆಗೆ 12 ಸಾವಿರ ಎಕರೆ ಕೊಡಲಾಗಿತ್ತು. ಪ್ರಸ್ತುತ ಬಿಜಿಎಂಎಲ್‌ ಸ್ಥಗಿತಗೊಂಡಿರುವುದರಿಂದ ಕೇಂದ್ರ ಸರ್ಕಾರವು ಆ ಸಂಸ್ಥೆಗೆ ನೀಡಿದ್ದ 12 ಸಾವಿರ ಎಕರೆ ವಾಪಸ್‌ ಪಡೆಯಲು ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಆ ಜಾಗ ವಾಪಸ್‌ ಪಡೆದು ಉಪನಗರ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.

ಬೆಂಗಳೂರು ನಗರದಿಂದ 95 ಕಿ.ಮೀ. ದೂರದಲ್ಲಿರುವ ಕೆಜಿಎಫ್ನಲ್ಲಿ ಈಗಾಗಲೇ ಎರಡು ಗಾಲ್ಫ್ ಕೋರ್ಸ್‌, 450 ಕ್ಕೂ ಹೆಚ್ಚು ಪುರಾತನ ಬಂಗಲೆಗಳು ಇವೆ. ಅಲ್ಲಿಗೆ ರೈಲು ಹಾಗೂ ರಸ್ತೆ ಸಾರಿಗೆ ವ್ಯವಸ್ಥೆ ಇರುವುದನ್ನು ಗಮನದಲ್ಲಿಟ್ಟುಕೊಂಡು ಉಪನಗರ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. ಇದರ ಜತೆಗೆ ದೇವನಹಳ್ಳಿ, ನೆಲಮಂಗಲ, ಬಿಡದಿ, ದಾಬಸ್‌ಪೇಟೆ, ಹಾರೋಹಳ್ಳಿ, ದೊಡ್ಡಬಳ್ಳಾ ಪುರಗಳಲ್ಲಿ ಕ್ಲಸ್ಟರ್‌ ಸಿಟಿ ಡೆವಲಪ್‌ಮೆಂಟ್‌ ಯೋಜನೆ ಯಡಿ ಏಷ್ಯನ್‌ ಡೆವಲಪ್‌ಮೆಂಟ್‌ ಬ್ಯಾಂಕ್‌ ನೆರವಿನೊಂದಿಗೆ ಉಪನಗರ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ.

ಮೊದಲ ಹಂತದಲ್ಲಿ ದೇವನಹಳ್ಳಿ ಅಭಿವೃದ್ಧಿಪಡಿಸಲು 400 ಕೋಟಿ ರೂ. ನೆರವು ಕೋರಲಾಗಿದೆ. ಕ್ರಿಯಾ ಯೋಜಗೂ ಸೂಚಿಸಲಾಗಿದೆ.

Advertisement

ಒಟ್ಟಾರೆ ಯೋಜನೆಗೆ 2800 ಕೋಟಿ ರೂ. ಅಗತ್ಯವಿದೆ. ವಿಮಾನ ನಿಲ್ದಾಣಕ್ಕೆ ಮೆಟ್ರೋ ನೇರ ಸಂಚಾರವೂ ಆಗುವುದರಿಂದ ಉಪನಗರಕ್ಕೆ ಹೇಳಿ ಮಾಡಿಸಿದಂತಿದೆ ಎಂದರು. ಮೈಸೂರಿನಲ್ಲಿ ವಿದೇಶಿ ಪ್ರವಾಸಿಗರಿಗೆ ಸಂಚಾರಕ್ಕಾಗಿ ಬಾಡಿಗೆಗೆ ಸೈಕಲ್‌ ನೀಡುವ ಯೋಜನೆ ಜಾರಿಗೆ ಮೈಸೂರು ಮಹಾನಗರ ಪಾಲಿಕೆ ಮುಂದಾಗಿದೆ.

ವಿಧಾನಮಂಡಲದ ಬಜೆಟ್‌ ಅಧಿವೇಶನದ ನಂತರ ಈ ಯೋಜನೆಗೆ ಚಾಲನೆ ದೊರೆಯಲಿದೆ ಎಂದು ಸಚಿವ ರೋಷನ್‌ಬೇಗ್‌ ತಿಳಿಸಿದರು. ಕಡಿಮೆ ಬಾಡಿಗೆ ಪಡೆದು ರೇಸ್‌ಕೋರ್ಸ್‌ ರಸ್ತೆ, ಕುಕ್ಕರಹಳ್ಳಿ ಕೆರೆ, ಮೈಸೂರು ಅರಮನೆ, ಚಾಮುಂಡಿ ಬೆಟ್ಟ, ಲಷ್ಕರ್‌ ಮೊಹಲ್ಲ, ಬಸ್‌ ನಿಲ್ದಾಣ ಸೇರಿ ಏಳು ಮಾರ್ಗದಲ್ಲಿ ಸಂಚರಿಸಲು “ಪಬ್ಲಿಕ್‌ ಬೈಸಿಕಲ್‌ ಸಿಸ್ಟಮ್‌’ ರೂಪಿಸಲಾಗಿದೆ. 450 ಸೈಕಲ್‌ಗ‌ಳನ್ನು ಈ ವ್ಯವಸ್ಥೆಗೆ ಒದಗಿಸಲಾಗುವುದು.

48 ನಿಲ್ದಾಣಗಳು ಇದ್ದು, ಪ್ರವಾಸಿಗರು ಒಂದು ಕಡೆಯಿಂದ ಪಡೆದ ಸೈಕಲ್‌ ತಮ್ಮ ಸಂಚಾರ ಮುಗಿದ ನಂತರ ಮತ್ತೂಂದು ನಿಲ್ದಾಣದಲ್ಲಿ ಕೊಟ್ಟು ಹೋಗಬಹುದು. ಪಾಸ್‌ಪೋರ್ಟ್‌ ಸೇರಿ ಕೆಲವು ದಾಖಲೆ ಪಡೆದು ಸೈಕಲ್‌ ನೀಡಲಾಗುವುದು. ವಿದೇಶಗಳಲ್ಲಿ ಇಂತಹ ವ್ಯವಸ್ಥೆ ಜಾರಿಯಲ್ಲಿದೆ ಎಂದು ಹೇಳಿದರು.

55 ಪಟ್ಟಣಗಳಲ್ಲಿ ನಿರಂತರ ನೀರು ಪೂರೈಕೆ: ರಾಜ್ಯದ 55 ಪಟ್ಟಣಗಳಲ್ಲಿ ದಿನದ 24 ಗಂಟೆ ಕುಡಿಯುವ ನೀರು ಪೂರೈಕೆ ಯೋಜನೆ ರೂಪಿಸಲಾಗಿದ್ದು, ಪ್ರಾಯೋಗಿಕವಾಗಿ ಇಳಕಲ್‌ ಪಟ್ಟಣದಲ್ಲಿ ಯೋಜನೆ ಅನುಷ್ಟಾನಗೊಂಡಿದೆ. ಇನ್ನೊಂದು ವರ್ಷದಲ್ಲಿ 15 ಪಟ್ಟಣ ಹಾಗೂ ಮೂರು ವರ್ಷಗಳಲ್ಲಿ 55 ಪಟ್ಟಣಗಳಲ್ಲಿ ಈ ವ್ಯವಸ್ಥೆ ಜಾರಿಯಾಗಲಿದೆ. ನಗರಾಭಿವೃದ್ಧಿ ಇಲಾಖೆಯಲ್ಲಿ ಪೌರ ಕಾರ್ಮಿಕರನ್ನು ಹೊರತುಪಡಿಸಿ 5000 ಹುದ್ದೆಗಳಿದ್ದು, ಆ ಪೈಕಿ 2600 ಹುದ್ದೆಗಳು ಖಾಲಿಯಾಗಿವೆ.

ಈ ವರ್ಷ 2 ಸಾವಿರ ಹುದ್ದೆಗಳ ಭರ್ತಿಗೆ ಅನುಮತಿ ದೊರೆತಿದ್ದು, ಈಗಾಗಲೇ 1 ಸಾವಿರ ಹುದ್ದೆ ಭರ್ತಿಗೆ ಕೆಪಿಎಸ್‌ಸಿ ಪ್ರಕ್ರಿಯೆ ಪ್ರಾರಂಭಿಸಿದೆ ಎಂದು ರೋಷನ್‌ಬೇಗ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next