ಮುಂಬಯಿ: ʼಕೆಜಿಎಫ್ʼ, ʼಕೆಜಿಎಫ್-2ʼ ಸಾಮ್ರಾಜ್ಯ ಕಟ್ಟಿದ ರೂವಾರಿ ಪ್ರಶಾಂತ್ ನೀಲ್ ಅವರು ಸದ್ಯ ಪ್ಯಾನ್ ಇಂಡಿಯಾ ʼಸಲಾರ್ʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಬಹು ನಿರೀಕ್ಷಿತ ಸಿನಿಮಾದ ಚಿತ್ರೀಕರಣ ನಡೆಯುತ್ತಿರುವಾಗಲೇ ಅವರ ಮುಂದಿನ ಸಿನಿಮಾದ ಬಗ್ಗೆ ಹೊಸ ಅಪ್ಡೇಟ್ ವೊಂದು ಹೊರ ಬಿದ್ದಿದೆ.
ಪ್ರಶಾಂತ್ ನೀಲ್ ʼಕೆಜಿಎಫ್-2ʼ ಬಳಿಕ ʼಸಲಾರ್ʼ ಸಿನಿಮಾದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಡಾರ್ಲಿಂಗ್ ಪ್ರಭಾಸ್ ಅವರ ಸಿನಿಮಾದ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಕೊಂಡಿದೆ. ಇತ್ತ ʼಬಘೀರʼ ಸಿನಿಮಾದ ಚಿತ್ರಕಥೆಯನ್ನೂ ಪ್ರಶಾಂತ್ ನೀಲ್ ಅವರು ಬರೆದಿದ್ದಾರೆ. ಆ ಸಿನಿಮಾವೂ ಹೈಪ್ ಕ್ರಿಯೇಟ್ ಮಾಡಿದೆ.
ಪ್ರಶಾಂತ್ ನೀಲ್ ಜೂನಿಯರ್ ಎನ್ಟಿಆರ್ ಅವರೊಂದಿಗೆ ಸಿನಿಮಾ ಮಾಡುತ್ತಿರುವ ವಿಷಯ ಗೊತ್ತೇ ಇದೆ. ಈಗಾಗಲೇ ಸಿನಿಮಾದ ಘೋಷಣೆಯಾಗಿದ್ದು, ಈಗ ಈ ಸಿನಿಮಾದ ಕುರಿತು ಹೊಸ ಅಪ್ಡೇಟ್ ವೊಂದು ಹೊರ ಬಿದ್ದಿದೆ.
ಇದನ್ನೂ ಓದಿ:ಚಾಲಕನಿಗೆ ಹೃದಯಾಘಾತವಾಗಿ ಕಾರಿಗೆ ಢಿಕ್ಕಿ ಹೊಡೆದ ಬಸ್: 9 ಮಂದಿ ದುರ್ಮರಣ
ಬಾಲಿವುಡ್ ನ ಮಿಸ್ಟರ್ ಫರ್ಫೆಕ್ಟ್ ಆಮಿರ್ ಖಾನ್ ಅವರು ಪ್ರಶಾಂತ್ ನೀಲ್ ಅವರ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜೂ. ಎನ್ಟಿಆರ್ ಅವರ ಸಿನಿಮಾದಲ್ಲಿ ಆಮಿರ್ ಖಡಕ್ ಪಾತ್ರದಲ್ಲಿ, ನೆಗೆಟಿವ್ ರೋಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿ ತಿಳಿಸಿದೆ.
ಮುಂದಿನ ವರ್ಷ ಈ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾವಾಗಿ ಸಟ್ಟೇರುವ ಸಾಧ್ಯತೆಯಿದೆ.
ಇತ್ತೀಚೆಗೆ ಆಮಿರ್ ಖಾನ್ ಒಂದೂವರೆ ವರ್ಷ ನಟನೆಯಿಂದ ದೂರ ಉಳಿದು, ಕುಟುಂಬದೊಂದಿಗೆ ಸಮಯ ಕಳೆಯುತ್ತೇನೆ ಎಂದು ಹೇಳಿದ್ದರು.