Advertisement

ಸೆಪ್ಟೆಂಬರ್‌ ಮೊದಲ ವಾರ  ಕೆಜಿಎಫ್-2 ರಿಲೀಸ್‌?

10:46 AM Jul 14, 2021 | Team Udayavani |

ಯಶ್‌ ಅಭಿನಯದ “ಕೆಜಿಎಫ್-2′ ಚಿತ್ರ ದಿನದಿಂದ ದಿನಕ್ಕೆ ನಿರೀಕ್ಷೆ ಹೆಚ್ಚಿಸುತ್ತಲೇ ಇದೆ. ಕೇವಲ ಕನ್ನಡ ಚಿತ್ರರಂಗಕ್ಕಷ್ಟೇ ಈ ನಿರೀಕ್ಷೆ ಸೀಮಿತವಾಗಿಲ್ಲ. ಇಡೀ ಭಾರತೀಯ ಚಿತ್ರರಂಗ ಈ ಸಿನಿಮಾವನ್ನು ಎದುರು ನೋಡುತ್ತಿದೆ.

Advertisement

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ “ಕೆಜಿಎಫ್-2′ ಜುಲೈ16ಕ್ಕೆ ರಿಲೀಸ್‌ ಆಗಬೇಕಿತ್ತು. ಆದರೆ,ಕೊರೊನಾ ಎರಡನೇ ಅಲೆಯಿಂದಎಲ್ಲಾ ಲೆಕ್ಕಾಚಾರ ಉಲ್ಪಾಪಲ್ಟಾ ಆಗಿದೆ. ಹಾಗಾದರೆ, “ಕೆಜಿಎಫ್-2′ ರಿಲೀಸ್‌ ಯಾವಾಗ ಎಂಬ ಪ್ರಶ್ನೆ ಹಾಗೂ ಕುತೂಹಲ ಸಹಜ. ಇದಕ್ಕೆ ಉತ್ತರ ಸೆಪ್ಟೆಂಬರ್‌ ಮೊದಲ ವಾರ. ಹೌದು, ಸದ್ಯ ಗಾಂಧಿನಗರದ ಹರಿದಾಡುತ್ತಿರುವ ಸುದ್ದಿಯ ಪ್ರಕಾರ, ಸೆಪ್ಟೆಂ ಬರ್‌ ಮೊದಲ ವಾರದಲ್ಲಿ “ಕೆಜಿಎಫ್-2′ ಚಿತ್ರವನ್ನು ರಿಲೀಸ್‌ ಮಾಡಲು ಚಿತ್ರತಂಡ ತಯಾರಿ ನಡೆಸುತ್ತಿದೆಯಂತೆ.

ಒಂದು ವೇಳೆ ಗಾಂಧಿ ನಗರದ ಲೆಕ್ಕಾಚಾರದಂತೆ “ಕೆಜಿಎಫ್-2′ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾದರೆ, ವರ್ಷದ ಬಹುನಿರೀಕ್ಷಿತ ಚಿತ್ರ ಬಿಡುಗಡೆಯಾದಂತಾಗುತ್ತದೆ. ಇತ್ತೀಚೆಗಷ್ಟೇ ಚಿತ್ರತಂಡ, ಚಿತ್ರಮಂದಿರಗಳಹೌಸ್‌ಫ‌ುಲ್‌ ಪ್ರದರ್ಶನಕ್ಕೆ ಅನುಮತಿ ಕೊಟ್ಟ ನಂತರವಷ್ಟೇ “ಕೆಜಿಎಫ್-2′ ಬಿಡುಗಡೆ ಯಾಗಲಿದೆ ಎಂದಿತ್ತು.

ಇನ್ನು, ಈ ತಿಂಗಳಾಂತ್ಯದಲ್ಲಿ ಚಿತ್ರಮಂದಿರಗಳಲ್ಲಿ ಪ್ರದರ್ಶನಕ್ಕೆ ಸರ್ಕಾರ ಅನುಮತಿ ಕೊಡುವ ನಿರೀಕ್ಷೆ ಇದೆ. ಪ್ರದರ್ಶನಕ್ಕೆ ಅವಕಾಶ ಸಿಕ್ಕ ಕೂಡಲೇ ಈಗಾಗಲೇ ಸರತಿಯಲ್ಲಿರುವ ಸ್ಟಾರ್‌ ಸಿನಿಮಾಗಳುಆಗಸ್ಟ್‌ನಲ್ಲಿ ಬಿಡುಗಡೆಯಾಗಲಿವೆ. ಅದರ ಬೆನ್ನಿಗೆ “ಕೆಜಿಎಫ್-2′ ಚಿತ್ರ ಬಿಡುಗಡೆಯಾಗಲಿದೆ. “ಕೆಜಿಎಫ್-2′ ಚಿತ್ರವನ್ನು ಹೊಂಬಾಳೆ ಫಿಲಂಸ್‌ ನಿರ್ಮಿಸಿದ್ದು, ಪ್ರಶಾಂತ್‌ ನೀಲ್‌ ನಿರ್ದೇಶಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next