Advertisement
ಸೋಮವಾರ ಕೆ ಎಫ್ ಡಿಸಿ ಆಡಳಿತ ನಿರ್ದೇಶಕರು ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳು ಭೇಟಿ ನೀಡಿ ಧರಣಿ ನಿರತ ಕೆ ಎಫ್ ಡಿಸಿ ಕಾರ್ಮಿಕರೊಂದಿಗೆ ಮಾತುಕತೆ ನಡೆಸಿದರು. ಮಂಗಳವಾರ ನಿಗಮದ ಕಚೇರಿಯಲ್ಲಿ ಕಾರ್ಮಿಕ ಸಂಘಗಳೊಂದಿಗೆ ಕುಂದುಕೊರತೆ ಸಭೆ ನಡೆದಿದ್ದು, ಅದಕ್ಕೂ ಮೊದಲು ರಬ್ಬರ್ ಕಾರ್ಖಾನೆಯ ಕಚೇರಿಯಲ್ಲಿ ಮಾತುಕತೆ ನಡೆದಿತ್ತು. ಇಲಾಖೆಯ ಆಡಳಿತ ನಿರ್ದೇಶಕರಾಗಿರುವ ಐಎಫ್ಎಸ್ ಅಧಿಕಾರಿ ವಿದ್ಯಾಸಾಗರ್ ಮತ್ತು ಕಾರ್ಯನಿರ್ವಾಹಕ ನಿರ್ದೇಶಕರಾದ ಐಎಫ್ಎಸ್ ಅಧಿಕಾರಿ ಕಮಲಾ ಮತ್ತು ಸ್ಥಳೀಯ ಅಧಿಕಾರಿಗಳು ಭಾಗವಹಿಸಿದ್ದರು.
ಧರಣಿ ನಿರತ ಕಾರ್ಮಿಕ ಸಂಘಟನೆಯವರನ್ನು ನಿಗಮ ಕಚೇರಿಯಲ್ಲಿ ಕರೆದ ಕುಂದುಕೊರತೆ ಸಭೆಗೆ ಪಾಲ್ಗೊಳ್ಳುವಂತೆ ಅಧಿಕಾರಿಗಳು ಸೂಚಿಸಿದರು. ಅದರಂತೆ ತೆರಳಿದ ಕಾರ್ಮಿಕ ಸಂಘಟನೆಯ ಪದಾಧಿಕಾರಿಗಳು ಸಭೆಯಲ್ಲಿ ತಮ್ಮ ಬೇಡಿಕೆಯನ್ನು ಮಂಡಿಸಿ 16 ಮಂದಿ ಕಾರ್ಮಿಕರನ್ನು ಮರುನಿಯೋಜಿಸುವಂತೆ ಒತ್ತಾಯಿಸಿದರು.
Related Articles
Advertisement
ತುರ್ತು ಸಭೆ: ಪ್ರಯತ್ನ 16 ಮಂದಿ ಕಾರ್ಮಿಕರ ವರ್ಗಾವಣೆಗೊಳಿಸಿದ್ದನ್ನು ಹಿಂಪಡೆದು ಮರುನಿಯೋಜಿಸಲು ಸಕಾರಣ ನೀಡಬೇಕಾಗಿರುವುದರಿಂದ ಹಾಗೂ ಒತ್ತಡಗಳ ಕಾರಣ ಅಧಿಕಾರಿಗಳು ನಿರ್ಧಾರ ಪ್ರಕಟಿಸಿಲ್ಲ. ಧರಣಿ ನಿರತರು ಮುಷ್ಕರ ಮುಂದುವರಿಸಿರುವುದರಿಂದ ನ. 29ರ ಮೊದಲು ದಿನ ನಿಗದಿಪಡಿಸಿ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರ ಸಮ್ಮುಖ ಮತ್ತು ಕೆಎಫ್ಡಿಸಿ ಆಡಳಿತ ನಿರ್ದೇಶಕರು, ಕಾರ್ಯವಾಹ ನಿರ್ದೇಶಕರ ಉಪಸ್ಥಿತಿಯಲ್ಲಿ ಧರಣಿ ನಿರತ ಸಂಘಟನೆಗಳ ಮುಖಂಡರ ಸಭೆ ಕರೆಯಲು ಪ್ರಯತ್ನ ನಡೆಯುತ್ತಿವೆ.