“ಕೆರೆಬೇಟೆ’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ದೀಪಾ ವಳಿ ಹಬ್ಬದ ಸಂದರ್ಭದಲ್ಲಿ ಮಲೆನಾಡು ಭಾಗದಲ್ಲಿ ಆಚರಣೆ ಯಲ್ಲಿರುವ ಸಾಂಪ್ರದಾಯಿಕ “ಅಂಟಿಗೆ-ಪಿಂಟಿಗೆ’ಯ ಜನಪದ ಗಾಯನದೊಂದಿದೆ ತೆರೆದುಕೊಳ್ಳುವ ದೃಶ್ಯಗಳು. ಅಲ್ಲಿಂದ ನಿಧಾನ ವಾಗಿ ಪ್ರೇಮಕಥೆಯ ಎಳೆಯೊಂದು ನೋಡುಗರ ಮುಂದೆ ಬಿಚ್ಚಿಕೊಳ್ಳುತ್ತದೆ. ಇದೂ ಮೂರರಂತೆ ಮತ್ತೂಂದು ಲವ್ ಸ್ಟೋರಿ ಸಿನಿಮಾ ಎಂದುಕೊಳ್ಳುವ ಹೊತ್ತಿಗೆ, ಅದರ ಹಿಂದೆಯೇ ಒಂದಷ್ಟು ಆ್ಯಕ್ಷನ್ ದೃಶ್ಯಗಳ ಸಣ್ಣ ಝಲಕ್ ಎದುರಾಗುತ್ತದೆ. ಅದರ ಬೆನ್ನ ಒಂದಷ್ಟು ಸಸ್ಪೆನ್ಸ್ ಎನಿಸುವಂಥ ಸನ್ನಿವೇಶಗಳು, ಗಂಭೀರವೆನಿಸಿ ಮನಮುಟ್ಟುವ ಗ್ರಾಮೀಣ ಸಂಭಾಷಣೆಗಳು. ನಡುವೆ ಮಲೆನಾಡಿನ ಸುಂದರ ಚಿತ್ರಣ, ಗಮನ ಸೆಳೆಯುವಂಥ ಹಿನ್ನೆಲೆ ಸಂಗೀತ, ಬೃಹತ್ ಕಲಾವಿದರ ತಾರಾಗಣದ ಕಿರುನೋಟ ಇವಿಷ್ಟು “ಕೆರೆಬೇಟೆ’ ಸಿನಿಮಾದ ಟ್ರೇಲರಿನಲ್ಲಿ ಎದ್ದು ಕಾಣುತ್ತದೆ.
ಸುಮಾರು ಮೂರು ನಿಮಿಷದ “ಕೆರೆಬೇಟೆ’ ಟ್ರೇಲರಿನಲ್ಲಿ ಪ್ರೀತಿ-ಪ್ರೇಮ, ಸಂಸ್ಕೃತಿ, ಆಚರಣೆ, ಹೋರಾಟ, ಹೊಡೆದಾಟ ಗಳ ಜೊತೆಗೆ ಮಲೆನಾಡು ಹಿನ್ನೆಲೆಯ ಕಥೆಯೊಂದನ್ನು ಕೌತುಕವಾಗಿ ಸಿನಿಮಾದಲ್ಲಿ ಕಟ್ಟಿಕೊಡಲಾಗಿದೆ ಎಂಬ ಗುಟ್ಟನ್ನು ಚಿತ್ರತಂಡ ಬಿಟ್ಟುಕೊಟ್ಟಿದೆ.
ಬಹುತೇಕ ಚಿರಪರಿಚಿತ ಕಲಾವಿದರ ಬೃಹತ್ ತಾರಾಗಣವೇ ಸಿನಿಮಾದಲ್ಲಿದ್ದು, ಪ್ರತಿ ಪಾತ್ರವನ್ನು ವಿಭಿನ್ನವಾಗಿ ಸಿನಿಮಾದಲ್ಲಿ ಕಟ್ಟಿಕೊಟ್ಟಿರುವ ಸುಳಿವನ್ನಿಟ್ಟಿದೆ ಚಿತ್ರತಂಡ. ಒಂದು ಕಂಟೆಂಟ್ ಜೊತೆಗೆ ಮಾಸ್ ಸಿನಿಮಾಕ್ಕೆ ಬೇಕಾದ ಎಲ್ಲ ಎಂಟರ್‌ಟೈನ್ಮೆಂಟ್ ಎಲಿಮೆಂಟ್ ಸಿನಿಮಾದಲ್ಲಿದೆ ಎಂಬುದು “ಕೆರೆಬೇಟೆ’ ಟ್ರೇಲರ್ ನೋಡಿದವರಿಗೆ ಗೊತ್ತಾಗುವಂತಿದೆ.
ಸದ್ಯ ಸೋಶಿಯಲ್ ಮೀಡಿಯಾದಲ್ಲಿ “ಕೆರೆಬೇಟೆ’ ಸಿನಿಮಾದ ಟ್ರೇಲರಿಗೆ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಟ್ರೇಲರ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ 1 ಮಿಲಿಯನ್‌ಗೂ ಹೆಚ್ಚು ವೀಕ್ಷಣೆ ಪಡೆದುಕೊಂಡು ಮುನ್ನುಗ್ಗುತ್ತಿದೆ.
ಅಂದಹಾಗೆ, ಮಾ. 15 ಕ್ಕೆ “ಕೆರೆಬೇಟೆ’ ಸಿನಿಮಾ ತೆರೆಗೆ ಬರುತ್ತಿದೆ. ಗೌರಿಶಂಕರ್ ಈ ಸಿನಿಮಾದ ನಾಯಕ.