Advertisement

ಕೇರಳ ಚುನಾವಣೆ : ಕಾಂಗ್ರೆಸ್‌ ಕಾರ್ಯಾಧ್ಯಕ್ಷ ಕೆ.ಸುಧಾಕರನ್‌ ರಾಜೀನಾಮೆ ಬೆದರಿಕೆ

06:48 PM Mar 16, 2021 | Team Udayavani |

ಕಾಸರಗೋಡು : ಅಭ್ಯರ್ಥಿಗಳ ಆಯ್ಕೆಯ ವಿಷಯದಲ್ಲಿ ಅಸಮಾಧಾನಗೊಂಡಿರುವ ಕಾಂಗ್ರೆಸ್‌ ಪಕ್ಷದ ಕಾರ್ಯಾಧ್ಯಕ್ಷ ಕೆ.ಸುಧಾಕರನ್‌ ರಾಜೀನಾಮೆ ನೀಡುವ ಬೆದರಿಕೆ ನೀಡಿದ್ದಾರೆ.

Advertisement

ಅಭ್ಯರ್ಥಿಗಳ ಆಯ್ಕೆಯ ವಿಷಯದಲ್ಲಿ ಕಾಂಗ್ರೆಸ್‌ ಪಕ್ಷದಲ್ಲಿ ಭಿನ್ನಮತ ತಲೆದೋರಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ನೇತೃತ್ವದ ಐಕ್ಯರಂಗ ಅಧಿಕಾರಕ್ಕೆ ಬರಬಹುದೆಂಬ ತನ್ನ ನಿರೀಕ್ಷೆ ಹುಸಿಯಾಗಿದೆಯೆಂದೂ, ತಾನು ಕಾಂಗ್ರೆಸ್‌ ಪಕ್ಷದ ಕಾರ್ಯಾಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ.

ಕಾಂಗ್ರೆಸ್‌ ಪಕ್ಷವು ಘಟಕ ಪಕ್ಷಗಳ ಆಜ್ಞೆಯನ್ನು ಪಾಲಿಸುತ್ತಿದೆ. ಅದರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ. ಕಾಂಗ್ರೆಸ್‌ ಹೇಳಿದಂತೆ ಘಟಕ ಪಕ್ಷಗಳು ಅನುಸರಿಸಬೇಕಿತ್ತು. ಆದರೆ ಇಲ್ಲಿ ತದ್ವಿರುದ್ಧವಾಗಿದೆ. ರಾಜ್ಯದ ಕಾಂಗ್ರೆಸ್‌ ನೇತಾರರಾದ ಉಮ್ಮನ್‌ ಚಾಂಡಿ, ರಮೇಶ್‌ ಚೆನ್ನಿತ್ತಲ, ಕೆ.ಸಿ.ವೇಣುಗೋಪಾಲ್‌ ಹೈಕಮಾಂಡ್‌ಗೆ ಸುಳ್ಳು ವರದಿ ನೀಡಿದ್ದಾರೆ. ಆ ಮೂಲಕ ತಮ್ಮ ಬೆಂಬಲಿಗರಿಗೆ ಮಾತ್ರ ಅಭ್ಯರ್ಥಿಯಾಗಲು ಅವಕಾಶ ನೀಡಿದ್ದಾರೆ. ಗೆಲುವು ಸಾಧ್ಯತೆಯಿರುವ ಹಲವು ಕಡೆಗಳಲ್ಲಿ ಉತ್ತಮ ಅಭ್ಯರ್ಥಿಗಳಿದ್ದರೂ ಅಂತವರಿಗೆ ಮನ್ನಣೆ ನೀಡಿಲ್ಲ ಎಂದು ಕೆ.ಸುಧಾಕರನ್‌ ಹೇಳಿದ್ದಾರೆ.

ಇದನ್ನೂ ಓದಿ :ಕೇರಳ ಚುನಾವಣಾ ಅಖಾಡ: ಪಿಣರಾಯಿ ವಿರುದ್ಧ ವಾಳಯಾರ್‌ ಹೆಣ್ಮಕ್ಕಳ ತಾಯಿ ಸ್ಪರ್ಧೆ

ರಾಜ್ಯ ಕಾಂಗ್ರೆಸ್‌ ಕಾರ್ಯಾಧ್ಯಕ್ಷ ಹುದ್ದೆಯಲ್ಲಿ ಇನ್ನೂ ಮುಂದುವರಿಯುವುದು ಸರಿಯಲ್ಲ. ಆದರೆ ಚುನಾವಣೆಯ ವೇಳೆ ತಾನು ರಾಜೀನಾಮೆ ನೀಡಿ ಪಕ್ಷಕ್ಕೆ ಮುಜುಗರ ತರಲಾರೆ. ಮುಂದಿನ ದಿನಗಳಲ್ಲಿ ಖಂಡನೆ ವ್ಯಕ್ತಪಡಿಸುವೆ ಎಂದೂ ಕೆ.ಸುಧಾಕರನ್‌ ಹೇಳಿದ್ದಾರೆ. ಹಿರಿಯ ಕಾಂಗ್ರೆಸ್‌ ಮುಖಂಡ ಕೆ.ಸುಧಾಕರನ್‌ ಅವರ ಹೇಳಿಕೆಯಿಂದ ಕಾಂಗ್ರೆಸ್‌ ಪಕ್ಷದಲ್ಲಿ ತಳಮಳಕ್ಕೆ ಕಾರಣವಾಗಿದೆ.

Advertisement

ಸ್ಪರ್ಧಿಸಲು ಅವಕಾಶ ನೀಡಿಲ್ಲವೆಂದು ಆರೋಪಿಸಿ ಮಹಿಳಾ ಕಾಂಗ್ರೆಸ್‌ ರಾಜ್ಯ ಅಧ್ಯಕ್ಷೆ ಲತಿಕಾ ಸುಭಾಷ್‌ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಜತೆಗೆ ಇವರ ಬೆಂಬಲಿಗರಾದ ಹಲವರು ಪಕ್ಷ ತ್ಯಜಿಸಿದ್ದಾರೆ. ಈ ರೀತಿಯಲ್ಲಿ ಪ್ರತಿದಿನ ರಾಜ್ಯ ಕಾಂಗ್ರೆಸ್‌ನಲ್ಲಿ ಸೃಷ್ಟಿಯಾಗುತ್ತಿರುವ ಭಿನ್ನಾಭಿಪ್ರಾಯ ಪಕ್ಷದ ನಾಯಕತ್ವಕ್ಕೆ ತೀವ್ರ ತಿರುಗೇಟು ಉಂಟಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next