Advertisement

ಕೇರಳ, ತಮಿಳುನಾಡು, ಪುದುಚೇರಿಯಲ್ಲಿ ಇಂದು ಮತದಾನ : ಮತ ಸಮರದಲ್ಲಿ ಭವಿಷ್ಯದ ಹುಡುಕಾಟ

11:57 PM Apr 05, 2021 | Team Udayavani |

ಹೊಸದಿಲ್ಲಿ: ಹಲವು ವಾರಗಳ ಹೈವೋಲ್ಟೆàಜ್‌ ರ್ಯಾಲಿಗಳು, ಮ್ಯಾರಥಾನ್‌ ರೋಡ್‌ ಶೋಗಳು, ರಾಜಕೀಯ ನಾಯಕರ ಅಬ್ಬರವು ತಣ್ಣಗಾಗಿ, ದಕ್ಷಿಣದ ಮೂರು ರಾಜ್ಯಗಳು “ಹಕ್ಕು ಚಲಾವಣೆಯ ದಿನ’ಕ್ಕೆ ಕಾಲಿರಿಸಿವೆ. ಮಂಗಳವಾರ ತಮಿಳುನಾಡು, ಕೇರಳ, ಪುದುಚೇರಿಯಲ್ಲಿ ಒಂದೇ ಹಂತದಲ್ಲಿ ಮತದಾನ ಪೂರ್ಣಗೊಳ್ಳಲಿದ್ದು, ಅಸ್ಸಾಂ ಕೊನೆಯ ಹಂತ ಹಾಗೂ ಪ. ಬಂಗಾಲ 3ನೇ ಹಂತದ ಮತದಾನವನ್ನು ಕಾಣಲಿದೆ.

Advertisement

ತಮಿಳುನಾಡು ಎಐಎಡಿಎಂಕೆ ಡಿಎಂಕೆ
– ಪಳನಿಸ್ವಾಮಿಗೆ ಈಗ ಸಿಎಂ ಕಿರೀಟ ಉಳಿಸಿಕೊಳ್ಳಬೇಕಾದ ಅನಿ ವಾರ್ಯ ಇದೆ.
– ಜಯಾ ಅನುಪಸ್ಥಿತಿ ಯಲ್ಲಿ ಎಐಎಡಿಎಂಕೆ ಯನ್ನು ಜನರು ಒಪ್ಪಿಕೊಳ್ಳುತ್ತಾರೋ, ಇಲ್ಲವೋ ಎಂಬುದು ಸ್ಪಷ್ಟವಾಗಲಿದೆ.
– ಎಐಎಡಿಎಂಕೆ ಈ ಚುನಾವಣೆಯ ಗೆಲುವಿಗೆ ಎಲ್ಲ ರೀತಿಯ ಕಸರತ್ತುಗಳನ್ನು ನಡೆಸಿದೆ. ಪ್ರಧಾನಿ ಮೋದಿ, ಅಮಿತ್‌ ಶಾ ಅವರನ್ನು ಕರೆಸಿ ರ್ಯಾಲಿ, ರೋಡ್‌ ಶೋ ನಡೆಸಿದೆ.
– ಶಶಿಕಲಾ ಕಣದಿಂದ ದೂರವುಳಿದಿದ್ದರಿಂದ ಎಐಎಡಿಎಂಕೆ ನಿಟ್ಟುಸಿರು ಬಿಟ್ಟಿದೆ. ಆದರೆ ಎಎಂಎಂಕೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರು ವುದರಿಂದ ಮತ ವಿಭಜನೆ ಖಚಿತ.
– ಪಕ್ಷ ಸೋಲುಂಡರೆ ಎಐಎಡಿಎಂಕೆ ಪಕ್ಷ ಹೋಳಾಗುವ ಸಾಧ್ಯತೆ ಅಧಿಕ.

ಕೇರಳ : ಎಲ್‌ಡಿಎಫ್ ಯುಡಿಎಫ್
– ಪ್ರತೀ ಬಾರಿಯೂ ಪರ್ಯಾಯ ಪಕ್ಷವನ್ನೇ ಆಯ್ಕೆ ಮಾಡುವ ಕೇರಳಿಗರು ಈ ಬಾರಿ ಸಂಪ್ರದಾಯ ಮುರಿದು ಎಲ್‌ಡಿಎಫ್ ಅನ್ನೇ ಮತ್ತೆ ಅಧಿಕಾರಕ್ಕೆ ತರ  ಲಿದ್ದಾರೆ ಎಂಬ ಸಮೀಕ್ಷಾ ವರದಿಗಳು ಚಿನ್ನ ಕಳ್ಳಸಾಗಾಟ ಆರೋಪಗಳ ನಡುವೆಯೂ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರಿಗೆ ಬಲ ತಂದುಕೊಟ್ಟಿವೆ.

– ಇದು ಎಡಪಕ್ಷಕ್ಕೆ ಅತ್ಯಂತ ನಿರ್ಣಾಯಕ ಚುನಾವಣೆ. ಎಲ್ಲ ರಾಜ್ಯಗಳಲ್ಲೂ ಬಲ ಕಳೆದುಕೊಂಡಿರುವ ಸಿಪಿಎಂ, ಸದ್ಯಕ್ಕೆ ಕೇರಳದಲ್ಲಿ ಮಾತ್ರ ಜೀವಂತಿಕೆ ಕಾದುಕೊಂಡಿದೆ. ಹೀಗಾಗಿ, ಇದು ಸಿಪಿಎಂಗೂ ಮಾಡು ಇಲ್ಲವೇ ಮಡಿ ಚುನಾವಣೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next