ನವದೆಹಲಿ: ಪಶ್ಚಿಮ ಬಂಗಾಳದಲ್ಲಿ “ದಿ ಕೇರಳ ಸ್ಟೋರಿ” ಸಿನಿಮಾಗೆ ವಿಧಿಸಿದ್ದ ನಿಷೇಧವನ್ನು ಸುಪ್ರೀಂ ಕೋರ್ಟ್ ತೆರುವುಗೊಳಿಸಿದೆ. ಆದರೆ ಅಲ್ಲಿನ ಚಿತ್ರಮಂದಿರದ ಮಾಲೀಕರಿಗೆ ಪೊಲೀಸರು ಮತ್ತು ಅಧಿಕಾರಿಗಳು ಬೆದರಿಕೆ ಹಾಕುತ್ತಿದ್ದು, ಚಿತ್ರ ಪ್ರದರ್ಶಿಸದಂತೆ ತಡೆಯುತ್ತಿದ್ದಾರೆ ಎಂದು ಸಿನಿಮಾ ನಿರ್ಮಾಪಕ ವಿಫುಲ್ ಶಾ ಆರೋಪಿಸಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, “ಸುಪ್ರೀಂ ಕೋರ್ಟ್‌ನ ಆದೇಶದ ಹೊರತಾಗಿಯೂ ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಲ್ಲಿ ಚಿತ್ರ ಪ್ರದರ್ಶನಗೊಳುತ್ತಿಲ್ಲ. ಸಿನಿಮಾ ಪ್ರದರ್ಶಿಸಿದರೆ ಚಿತ್ರ ಮಂದಿರದ ಪರವಾನಗಿಯನ್ನು ನವೀಕರಣ ಮಾಡುವುದಿಲ್ಲ ಎಂದು ಅಧಿಕಾರಿಗಳು ಬೆದರಿಕೆ ಹಾಕುತ್ತಿದ್ದಾರೆ. ಅಲ್ಲದೇ ರೌಡಿಗಳು ಬಂದು ಚಿತ್ರಮಂದಿರಗಳ ಮುಂದೆ ಗಲಾಟೆ ಮಾಡಿದರೆ ರಕ್ಷಣೆ ನೀಡುವುದಿಲ್ಲ ಎಂದು ಪೊಲೀಸರು ಹೇಳುತ್ತಿದ್ದಾರೆ. ಇದರಿಂದ ಮಾಲೀಕರು ಸಿನಿಮಾ ಪ್ರದರ್ಶನಕ್ಕೆ ಮುಂದಾಗುತ್ತಿಲ್ಲ” ಎಂದು ಅಳಲು ತೋಡಿಕೊಂಡಿದ್ದಾರೆ. ಮಮತಾ ಬ್ಯಾನರ್ಜಿ ಸರ್ಕಾರ ಮೇ 8ರಂದು ಸಿನಿಮಾ ಮೇಲೆ ನಿಷೇಧ ಹೇರಿತ್ತು. ಆದರೆ ಈ ನಿಷೇಧವನ್ನು ಕಳೆದ ವಾರ ಸುಪ್ರೀಂ ತೆರುವುಗೊಳಿಸಿತ್ತು.