ತಿರುವನಂತಪುರ: ಕೋವಿಡ್-19 ಪ್ರಕರಣಗಳು ಮತ್ತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇರಳ ಸರಕಾರವು ಮಾಸ್ಕ್ ಧರಿಸದ ಪ್ರಕರಣಗಳಲ್ಲಿ ವಿಧಿಸುವ ದಂಡವನ್ನು ಬರೋಬ್ಬರಿ 10 ಸಾವಿರ ರೂ. ಅಥವಾ 2 ವರ್ಷಗಳ ಜೈಲು ಶಿಕ್ಷೆಗೆ ಏರಿಸಿದೆ.
ಜತೆಗೆ ಸಾಮಾಜಿಕ ಅಂತರ ಕಾಪಾಡಿ ಕೊಳ್ಳುವುದನ್ನೂ ಒಂದು ವರ್ಷದ ಅವಧಿಗೆ ಕಡ್ಡಾಯಗೊಳಿಸಿದೆ. ಈ ಸಂಬಂಧ ಕೇರಳ ಸರಕಾರ ಕಾನೂನು ತಿದ್ದುಪಡಿ ತಂದಿದೆ.
ಮಾಸ್ಕ್ ಧಾರಣೆ ಮತ್ತು ಸಾಮಾಜಿಕ ಅಂತರ ಒಂದು ವರ್ಷ ಕಡ್ಡಾಯ ಸಂಬಂಧ ಸರಕಾರವು ಕೇರಳ ಸಾಂಕ್ರಾಮಿಕ ಕಾಯಿಲೆಗಳ ನಿಯಂತ್ರಣ ಕಾನೂನು 2020ಕ್ಕೆ ತಿದ್ದುಪಡಿ ತಂದಿದೆ. ಜತೆಗೆ ವಿವಾಹ ಸಮಾರಂಭಗಳಲ್ಲಿ 50ಕ್ಕಿಂತ ಕಡಿಮೆ ಮಂದಿ ಸೇರುವುದಕ್ಕೆ ಮಾತ್ರ ಅವಕಾಶ ನೀಡಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದೂ ಶಿಕ್ಷಾರ್ಹ ಅಪರಾಧವಾಗಿದೆ. ಪ್ರತಿಭಟನೆ ಸಹಿತ ಯಾವುದೇ ರೀತಿಯ ಸಭೆಗಳಿಗೆ ಇನ್ನು ಪೂರ್ವಾನುಮತಿ ಕಡ್ಡಾಯ ಗೊಳಿಸಲಾಗಿದೆ.