Advertisement

Kerala: ಕೆಲವು ಬಾವಲಿಗಳಲ್ಲಿ ನಿಫಾ ವೈರಸ್‌ ಪತ್ತೆ

01:03 AM Aug 05, 2024 | Team Udayavani |

ತಿರುವನಂತಪುರ: ಕೇರಳದ ಮಲಪ್ಪುರಂ ಜಿಲ್ಲೆಯ ಪಂದಿಕ್ಕಾಡ್‌ ಪ್ರದೇಶದಲ್ಲಿ ಪಡೆದುಕೊಂಡ ಬಾವಲಿಗಳ ಮಾದರಿಗಳಲ್ಲಿ ನಿಫಾ ವೈರಸ್‌ ಇರುವುದು ದೃಢಪಟ್ಟಿದೆ. ಈ ಬಗ್ಗೆ ಆರೋಗ್ಯ ಸಚಿವೆ ವೀಣಾ ಜಾರ್ಜ್‌ ಮಾಹಿತಿ ನೀಡಿದ್ದು, 5 ಕಿ.ಮೀ. ಅಂತರದಲ್ಲಿ 27 ಬಾವಲಿಗಳನ್ನು ಪರೀಕ್ಷೆಗೊಳಪಡಿಸಲಾತ್ತು. ಅದರಲ್ಲಿ 6 ಬಾವಲಿಗಳಲ್ಲಿ ವೈರಸ್‌ ಇರುವುದು ಪತ್ತೆಯಾಗಿದೆ ಎಂದರು. ಜು.21ರಂದು ನಿಫಾದಿಂದ ಬಾಲಕ ಮೃತಪಟ್ಟ ಹಿನ್ನೆಲೆಯಲ್ಲಿ ಈ ಪರೀಕ್ಷೆ ನಡೆಸಲಾಗಿದ್ದು, ಬಾಲಕನ ಸಂಪರ್ಕದಲ್ಲಿದ್ದ ಯಾರಿಗೂ ನಿಫಾ ತಗಲಿಲ್ಲ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next