Advertisement

4ನೇ ಸಾಲ ಕೇಳಲು ಬ್ಯಾಂಕ್ ಹೋಗಿ ವಾಪಸ್ ಬರುವ ವೇಳೆ ಖರೀದಿಸಿದ ಲಾಟರಿ ಟಿಕೆಟ್ ಗೆ ಜಾಕ್ ಪಾಟ್!

08:33 AM Feb 13, 2020 | Nagendra Trasi |

ಕಣ್ಣೂರು/ಕೇರಳ: ಈ ಹಿಂದೆ ಮಾಡಿದ್ದ ಮೂರು ಸಾಲವನ್ನು ತೀರಿಸಲು ನಾಲ್ಕನೇ ಸಾಲ ಪಡೆಯುವ ಬಗ್ಗೆ ಬ್ಯಾಂಕ್ ಮ್ಯಾನೇಜರ್ ಬಳಿ ಚರ್ಚೆ ನಡೆಸಿ ಕೊನೆಗೆ ನಾಲ್ಕನೇ ಸಾಲ ಸಿಗೋದಿಲ್ಲ ಎಂಬ ಬೇಸರದಲ್ಲಿದ್ದ ವ್ಯಕ್ತಿ ಲಾಟರಿ ಟಿಕೇಟ್ ಖರೀದಿಸಿ ಮನೆಗೆ ತೆರಳಿದ್ದ. ಆದರೆ ಆ ಲಾಟರಿ ಟಿಕೆಟ್ ಆತನ ಅದೃಷ್ಟವನ್ನೇ ಬದಲಾಯಿಸಿಬಿಟ್ಟ ಘಟನೆ ಕಣ್ಣೂರಿನಲ್ಲಿ ನಡೆದಿದೆ.

Advertisement

ಕೇರಳದ ಕಣ್ಣೂರಿನ ಪಿ.ರಾಜನ್ (52ವರ್ಷ)ಗೆ ತಾನು ಖರೀದಿಸಿದ ಲಾಟರಿ ಟಿಕೆಟ್ ತನ್ನ ಬದುಕನ್ನೇ ಬದಲಾಯಿಸಿಬಿಡಲಿದೆ ಎಂಬ ಸಣ್ಣ ಸುಳಿವು ಇದ್ದಿರಲಿಲ್ಲ. ಯಾಕೆಂದರೆ ರಾಜನ್ ನಿರಂತರ ಎಂಬಂತೆ ಲಾಟರಿ ಖರೀದಿಸುತ್ತಿದ್ದ ವ್ಯಕ್ತಿ!

ಸೋಮವಾರ ಮಧ್ಯಾಹ್ನ ಲಾಟರಿ ಫಲಿತಾಂಶ ಘೋಷಿಸಿದ ನಂತರ ರಾಜನ್ ಬಂಪರ್ ಬಹುಮಾನ ಪಡೆದಿರುವುದು ಗಮನಕ್ಕೆ ಬಂದಿತ್ತು. ಆದರೆ ಈ ವಿಷಯ ರಾಜನ್ ಗೆ ತಿಳಿದದ್ದು ಕೆಲವು ದಿನ ಕಳೆದ ನಂತರ, ಯಾಕೆಂದರೆ ಸ್ವತಃ ರಾಜನ್ ಬಂಪರ್ ಬಹುಮಾನ 12 ಕೋಟಿ ರೂಪಾಯಿ ಜಾಕ್ ಪಾಟ್ ಹೊಡೆದಿರುವುದು ನಂಬಲು ತಯಾರಾಗಿಲ್ಲವಾಗಿತ್ತು ಎಂದು ವರದಿ ತಿಳಿಸಿದೆ.

ನಂತರ ರಾಜನ್ ಪತ್ನಿಯೂ ಕೂಡಾ ನಂಬಿರಲಿಲ್ಲವಾಗಿತ್ತಂತೆ. ವಿಷಯ ಎಲ್ಲೆಡೆ ಹಬ್ಬಿ ಒಬ್ಬೊಬ್ಬರೇ ರಾಜನ್ ಮನೆಗೆ ಬಂದು ಅಭಿನಂದನೆ ಸಲ್ಲಿಸುವಾಗ ಪತ್ನಿಗೆ ವಿಷಯ ಮನದಟ್ಟಾಗಿತ್ತು. ಲಾಟರಿಯ ಬಂಪರ್ ಬಹುಮಾನ ತನ್ನ ಜೀವನದ ದಿಕ್ಕನ್ನೇ ಬದಲಿಸಿದೆ ಎಂದು ಪ್ರತಿಕ್ರಿಯೆ ನೀಡಿರುವ ರಾಜನ್, ಮೊದಲು ಬ್ಯಾಂಕ್ ನ 7 ಲಕ್ಷ ಸಾಲ ತೀರಿಸಿ, ನಂತರ ಅರ್ಧಂಬರ್ಧ ನಿರ್ಮಾಣವಾಗಿರುವ ಮನೆ ಪೂರ್ಣಗೊಳಿಸುವುದು. ಕಿರಿಯ ಮಗಳಿಗೆ ಉತ್ತಮ ಶಿಕ್ಷಣ ಕೊಡುವುದು ತನ್ನ ಮುಂದಿನ ಕನಸು ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next