Advertisement

ಕೇರಳ ಹೈಕೋರ್ಟ್‌ನಿಂದ ಕರಾಟ್‌ ಅಬ್ದುಲ್‌ ರಜಾಕ್‌ ಚುನಾವಣೆ ರದ್ದು

10:20 AM Jan 18, 2019 | Team Udayavani |

ಕೊಚ್ಚಿ : 2016ರಲ್ಲಿ ನಡೆದಿದ್ದ ಕೇರಳ ವಿಧಾನಸಭಾ ಚುನಾವಣೆಯಲ್ಲಿ  ಕೋಯಿಕ್ಕೋಡ್‌ ಜಿಲ್ಲೆಯ ಕೊಡುವಳ್ಳಿ ವಿಧಾಸಭಾ ಕ್ಷೇತ್ರದಿಂದ ಗೆದ್ದಿದ್ದ ಕರಾಟ್‌ ಅಬ್ದುಲ್‌ ರಜಾಕ್‌ ಅವರ ಆಯ್ಕೆಯನ್ನು ಕೇರಳ ಹೈಕೋರ್ಟ್‌ ರದ್ದುಪಡಿಸಿದೆ. ರಜಾಕ್‌ ಅವರು ಚುನಾವಣಾ ಅಕ್ರಮಗಳಲ್ಲಿ ಶಾಮೀಲಾಗಿದ್ದುದು ದೃಡಪಟ್ಟದ್ದೇ ಈ ತೀರ್ಪಿಗೆ ಕಾರಣವಾಗಿದೆ.

Advertisement

ಅಂದಿನ ಚುನಾವಣೆಯಲ್ಲಿ ರಜಾಕ್‌ ಅವರು ಎಲ್‌ಡಿಎಫ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಚುನಾವಣಾ ಅಕ್ರಮದಲ್ಲಿ ರಜಾಕ್‌ ಶಾಮೀಲಾಗಿದ್ದರೆಂದು ಆರೋಪಿಸಿ ಇಬ್ಬರು ಮತದಾರರು ಹೈಕೋರ್ಟಿನಲ್ಲಿ ಅವರ ಆಯ್ಕೆಯನ್ನು ಪ್ರಶ್ನಿಸಿದ್ದರು. 

ಯುಡಿಎಫ್ ಅಭ್ಯರ್ಥಿ ಎಂ ಎ ರಜಾಕ್‌ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ರೀತಿಯಲ್ಲಿ ಕರಾಟ್‌ ರಜಾಕ್‌ ಅವರು ಕ್ಷೇತ್ರದ ಆದ್ಯಂತ ವಿಡಿಯೋ ಕಾರ್ಯಕ್ರಮವೊಂದನ್ನು  ಚುನಾವಣಾ ಅಕ್ರಮವಾಗಿ ಪ್ರದರ್ಶಿಸಿದ್ದರು ಎಂದು ಅರ್ಜಿದಾರರಾದ ಕೆ ಪಿ ಮೊಹಮ್ಮದ್‌ ಮತ್ತು ಮೊಯ್ದಿನ್‌ ಕುಂಞ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next