ತಿರುವನಂತಪುರಂ: ಕೇರಳದ ತಿರುವನಂತಪುರಂನ ಗ್ರಾಮವೊಂದು ಈಗ ಕಮಾಂಡೋಗಳ ಕಣ್ಗಾವಲಿನಲ್ಲಿದೆ.
ಅದೇಕೆ ಎಂದು ಯೋಚಿಸುತ್ತಿದ್ದೀರಾ?
ವಿಷಯ ಇಷ್ಟೆ, ಇಲ್ಲಿನ ಪೂಂಥುರಾ ಗ್ರಾಮದಲ್ಲಿ ಒಂದಕ್ಕಿಂತ ಹೆಚ್ಚು ಕೋವಿಡ್ 19 ಸೂಪರ್ ಸ್ಪ್ರೆಡರ್‌ಗಳು ಪತ್ತೆಯಾಗಿದ್ದು, ಸ್ಥಳೀಯ ಮಟ್ಟದಲ್ಲಿ ಸೋಂಕು ವ್ಯಾಪಕವಾಗಿ ಹಬ್ಬಿದೆ.
ಇದು ಕೇರಳದ ಮೊದಲ ಕೋವಿಡ್ 19 ಕ್ಲಸ್ಟರ್ ಆಗಿ ಪರಿವರ್ತನೆಯಾಗುತ್ತಿದೆ ಎಂಬ ಸಂದೇಹವನ್ನು ಆರೋಗ್ಯ ತಜ್ಞರು ವ್ಯಕ್ತಪಡಿಸಿದ್ದಾರೆ.
ಹೀಗಾಗಿ, ಸುಮಾರು 25ರಷ್ಟು ಕಮಾಂಡೋಗಳನ್ನು ಈ ಗ್ರಾಮದಲ್ಲಿ ನಿಯೋಜಿಸಲಾಗಿದೆ. ಜತೆಗೆ, ದಿನದ 24 ಗಂಟೆಯೂ ಆ್ಯಂಬುಲೆನ್ಸ್‌ಗಳು, ಪೊಲೀಸ್ ವಾಹನಗಳು ಇಲ್ಲಿನ ವಾರ್ಡ್‌ಗಳಲ್ಲಿ ಸಂಚರಿಸುತ್ತಿರುತ್ತವೆ.
ಕಳೆದ 5 ದಿನಗಳಲ್ಲಿ 600 ಮಂದಿಯ ಪರೀಕ್ಷೆ ನಡೆಸಲಾಗಿದ್ದು, ಈ ಪೈಕಿ 119 ಸ್ಯಾಂಪಲ್‌ಗಳ ವರದಿ ಪಾಸಿಟಿವ್ ಎಂದು ಬಂದಿದೆ.
ಒಟ್ಟಿನಲ್ಲಿ ಈ ಗ್ರಾಮದಲ್ಲಿ ಸೋಂಕು ಇನ್ನಷ್ಟು ಮಂದಿಗೆ ವ್ಯಾಪಿಸದಂತೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.