Advertisement
ಏನಿದು ಚಿಕಿತ್ಸೆ?ಕೋವಿಡ್ 19 ವೈರಸ್ ಸೋಂಕಿನಿಂದ ಪಾರಾಗಿರುವ ವ್ಯಕ್ತಿಗಳಲ್ಲಿನ ರಕ್ತವನ್ನು ಪಡೆದು ಅದರಲ್ಲಿನ ಪ್ಲಾಸ್ಮಾವನ್ನು ಬೇರ್ಪಡಿಸಿ, ಅದನ್ನು ನಾನಾ ಕ್ಲಿನಿಕಲ್ ಕ್ರಮಗಳ ಮೂಲಕ ಔಷಧಿಯನ್ನಾಗಿ ಬಳಸುವ ಒಂದು ಪದ್ಧತಿ ರೂಢಿಯಲ್ಲಿದೆ. ಈ ಪದ್ಧತಿಯನ್ನು 1918ರಲ್ಲಿ ಮೊದಲ ಬಾರಿಗೆ ಫ್ಲ್ಯೂ ಚಿಕಿತ್ಸೆಯಲ್ಲಿ ಬಳಸಲಾಗಿತ್ತು.
ಸೋಂಕಿನಿಂದ ಪಾರಾಗಿರುವ ವ್ಯಕ್ತಿಗಳಲ್ಲಿ ಅಗತ್ಯ ಪ್ರಮಾಣದ ಪ್ರತಿಜೀವಕಗಳು ಸೃಷ್ಟಿಯಾಗಿರುತ್ತವೆ. ಹಾಗಾಗಿ, ಅವರ ರಕ್ತದಲ್ಲಿನ ಪ್ಲಾಸ್ಮಾವನ್ನು ತೆಗೆದು, ಸೋಂಕಿತರಿಗೆ ನೀಡಿದಾಗ ಅವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ಸೋಂಕಿನಿಂದ ಪಾರಾಗಲು ಸಾಧ್ಯವಾಗುತ್ತದೆ. ಚಿಕಿತ್ಸೆ ಬಗ್ಗೆ ಆತಂಕವೇನು?
ವೈರಾಣು, ಬ್ಯಾಕ್ಟೀರಿಯಾ ತೀವ್ರ ಬಾಧಿತರಿಗೆ ಪರಿಣಾಮಕಾರಿ ಚಿಕಿತ್ಸೆ ಇದಾಗಿದ್ದರೂ, ರೋಗಿಗಳ ಮೇಲೆ ಅಡ್ಡಪರಿಣಾಮ ಬೀರುವ ಬಗ್ಗೆ ಅಮೆರಿಕದ ಆಹಾರ ಮತ್ತು ಔಷಧ ಆಡಳಿತ (ಎಫ್ಡಿಎ) ಈ ಹಿಂದೆಯೇ ಎಚ್ಚರಿಸಿದೆ. ಹಾಗಾಗಿಯೇ, ಈ ಚಿಕಿತ್ಸೆ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಸಲು ಕೇರಳ ವೈದ್ಯರು, ತಜ್ಞರು ಮುಂದಾಗಿದ್ದಾರೆ.