Advertisement

ಕೇರಳ ಜೆಡಿಎಸ್‌ನಲ್ಲಿ ಭಿನ್ನಮತ: ಮ್ಯಾಥ್ಯೂ. ಟಿ. ಥಾಮಸ್‌ ಗೆ ಕೊಕ್‌

06:35 AM Nov 24, 2018 | Team Udayavani |

ಬೆಂಗಳೂರು/ತಿರುವನಂತಪುರ: ಕೇರಳದ ಆಡಳಿತಾರೂಢ ಸಿಪಿಎಂ ನೇತೃತ್ವದ ಎಲ್‌ಡಿಎಫ್ ಸರ್ಕಾರದಲ್ಲಿ ಅಂಗಪಕ್ಷವಾಗಿರುವ ಜಾತ್ಯತೀತ ಜನತಾದಳದಲ್ಲಿ (ಜೆಡಿಎಸ್‌) ಭಿನ್ನಮತ ಭುಗಿಲೆದ್ದಿದ್ದು, ಇದರ ಪರಿಣಾಮ, ಸಂಪುಟದಲ್ಲಿ ಜೆಡಿಎಸ್‌ ಪ್ರತಿನಿಧಿಸಿದ್ದ ಜಲ ಸಂಪನ್ಮೂಲ ಸಚಿವ ಮ್ಯಾಥ್ಯೂ. ಟಿ. ಥಾಮಸ್‌ ಅವರನ್ನು ಬದಲಾಯಿಸಿ, ಅವರ ಸ್ಥಾನಕ್ಕೆ ಶಾಸಕ ಕೆ. ಕೃಷ್ಣಮೂರ್ತಿ ಅವರ ನೇಮಕಕ್ಕೆ ಶಿಫಾರಸು ಮಾಡಲು ಪಕ್ಷದ ವರಿಷ್ಠ ಹಾಗೂ ಮಾಜಿ ಪ್ರಧಾನಿ ದೇವೇಗೌಡ ತೀರ್ಮಾನಿಸಿದ್ದಾರೆ.

Advertisement

ಕೇರಳದಲ್ಲಿ ಜೆಡಿಎಸ್‌ ಮೂವರು ಶಾಸಕರನ್ನು ಹೊಂದಿದೆ. ಹಲವಾರು ದಿನಗಳಿಂದ ಕೃಷ್ಣಮೂರ್ತಿ ಹಾಗೂ ಥಾಮಸ್‌ ಗುಂಪುಗಳ ನಡುವೆ ಭಿನ್ನಮತ ಭುಗಿಲೆದ್ದಿತ್ತು. ಸಂಪುಟದಲ್ಲಿ ಜೆಡಿಎಸ್‌ಗೆ ನೀಡಲಾಗಿರುವ ಒಂದೇ ಒಂದು ಸಚಿವ ಸ್ಥಾನಕ್ಕಾಗಿ ಕೃಷ್ಣಮೂರ್ತಿ ಮತ್ತು ಥಾಮಸ್‌ ನಡುವೆ ಪೈಪೋಟಿ ತೀವ್ರವಾಗಿತ್ತು. ಈ ಹಿನ್ನೆಲೆಯಲ್ಲಿ, ಶುಕ್ರವಾರ ಬೆಳಗ್ಗೆ ದೇವೇಗೌಡರನ್ನು ಬೆಂಗಳೂರಿನ ಅವರ ನಿವಾಸದಲ್ಲಿ ಭೇಟಿ ಮಾಡಿದ ಕೇರಳದ ಜೆಡಿಎಸ್‌ ಶಾಸಕರಾದ ಕೃಷ್ಣಮೂರ್ತಿ, ಸಿ.ಕೆ. ನಾಯ್ಡು ಅವರು ಜೆಡಿಎಸ್‌ ರಾಷ್ಟ್ರೀಯ ಕಾರ್ಯದರ್ಶಿ ಡ್ಯಾನಿಶ್‌ ಅಲಿ ಹಾಗೂ ಪಕ್ಷದ ಇತರ ನಾಯಕರೊಂದಿಗೆ ಸುದೀರ್ಘ‌ ಚರ್ಚೆ ನಡೆಸಿದರು.

ಈ ಮಹತ್ವದ ಸಭೆಗೆ ಥಾಮಸ್‌ ಬಂದಿರಲಿಲ್ಲ.ಸಭೆಯ ನಂತರ, ಸುದ್ದಿಗಾರರೊಂದಿಗೆ ಮಾತನಾಡಿದ ಅಲಿ, “2016ರಲ್ಲಿ ಎಲ್‌ಡಿಎಫ್ ಸರ್ಕಾರ ಅಸ್ತಿತ್ವಕ್ಕೆ ಬಂದಾಗಲೇ, ಜೆಡಿಎಸ್‌ಗೆ ಇರುವ ಒಂದು ಸಂಪುಟ ಸ್ಥಾನದಲ್ಲಿ ಇಬ್ಬರು ನಾಯಕರನ್ನು ರೊಟೇಷನ್‌ ಪದ್ಧತಿಯಲ್ಲಿ ಕೂರಿಸುವ ಬಗ್ಗೆ ಮಾತುಕತೆಯಾಗಿತ್ತು. ಈಗ ಅದನ್ನು ಜಾರಿಗೊಳಿಸಲಾಗುತ್ತಿದೆ. ಪಕ್ಷದ ವರಿಷ್ಠರ ನಿರ್ಧಾರವನ್ನು ಥಾಮಸ್‌ ಅವರೂ ಒಪ್ಪಿದ್ದಾರೆ” ಎಂದರು.

Advertisement

Udayavani is now on Telegram. Click here to join our channel and stay updated with the latest news.

Next