Advertisement

ಇಡುಕ್ಕಿಯಲ್ಲಿ ಹತ್ಯೆಗೀಡಾದ ಎಸ್‌ಎಫ್‌ಐ ಕಾರ್ಯಕರ್ತನ ಮನೆಗೆ ಕೇರಳ ಸಿಎಂ ಭೇಟಿ

02:17 PM Mar 06, 2022 | Team Udayavani |

ಕಣ್ಣೂರು: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಜನವರಿಯಲ್ಲಿ ಇಡುಕ್ಕಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರಿಂದ ಹತ್ಯೆಗೀಡಾದ ಎಸ್‌ಎಫ್‌ಐ (ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ) ಕಾರ್ಯಕರ್ತನ ಮನೆಗೆ ಭಾನುವಾರ ಭೇಟಿ ನೀಡಿದರು.

Advertisement

ಈ ಬಗ್ಗೆ ಫೇಸ್‌ಬುಕ್ ಪೋಸ್ಟ್‌ ಮಾಡಿರುವ ಸಿಎಂ, ತಮ್ಮ ಮಗನ ಸಾವಿನ ಬಗ್ಗೆ ಇನ್ನೂ ಸಹಜ ಸ್ಥಿತಿಗೆ ಬರದಿರುವ ಪೋಷಕರನ್ನು ಭೇಟಿ ಮಾಡಿದ್ದೇನೆ ಮತ್ತು ಸರ್ಕಾರದಿಂದ ಅಗತ್ಯವಿರುವ ಎಲ್ಲಾ ಬೆಂಬಲವನ್ನುನೀಡುವುದಾಗಿ ಅವರಿಗೆ ಭರವಸೆ ನೀಡಿದ್ದೇನೆ ಎಂದು ಹೇಳಿದ್ದಾರೆ.

ಜನವರಿ 10 ರಂದು ಮಧ್ಯಾಹ್ನ ಕಣ್ಣೂರು ನಿವಾಸಿ ಧೀರಜ್ ರಾಜೇಂದ್ರನ್ (21), ಮತ್ತು ಇತರ ಇಬ್ಬರಾದ ಅಭ್ಜಿತ್ ಮತ್ತು ಅಮಲ್
ಮೇಲೆ ದಾಳಿ ನಡೆಸಲಾಗಿತ್ತು.

ಯುವ ಕಾಂಗ್ರೆಸ್ ಜಿಲ್ಲಾ ಮುಖಂಡ ನಿಖಿಲ್ ಪೈಲಿ ಎಂಬಾತ ಹೊರಗಿನ ತಂಡದೊಂದಿಗೆ ಕಾಲೇಜಿಗೆ ಆಗಮಿಸಿ ಧೀರಜ್ ಮತ್ತು ಇತರರನ್ನು ಇರಿದು ಕ್ಯಾಂಪಸ್‌ನಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next