Advertisement

ಷರತ್ತಿನೊಂದಿಗೆ ಕೇರಳದಲ್ಲಿ ಬಿಜೆಪಿಗೆ ಚರ್ಚ್‌ ಬೆಂಬಲ

09:53 PM Mar 19, 2023 | Team Udayavani |

ತಿರುವನಂತಪುರ: ಕೇರಳದಲ್ಲಿನ ಕ್ರಿಶ್ಚಿಯನ್‌ ಸಮುದಾಯವನ್ನು ತಲುಪುವ ಬಿಜೆಪಿಯ ಪ್ರಯತ್ನಗಳ ನಡುವಯೇ, ರಾಜ್ಯದಲ್ಲಿ ಸಮುದಾಯದ ಒಂದು ವಿಭಾಗವನ್ನು ಪ್ರತಿನಿಧಿಸುವ ಸೈರೋ -ಮಲಬಾರ್‌ ಕ್ಯಾಥೋಲಿಕ್‌ ಚರ್ಚ್‌, ತನ್ನ ಸಂಪೂರ್ಣ ಬೆಂಬಲವನ್ನು ಬಿಜೆಪಿಗೆ ನೀಡುವುದಾಗಿ ಘೋಷಿಸಿದೆ. ಆದರೆ, ಅದರ ಜತೆಗೆ ಒಂದು ಷರತ್ತನ್ನೂ ವಿಧಿಸಿದೆ.

Advertisement

ಕಣ್ಣೂರಿನಲ್ಲಿ ಚರ್ಚ್‌ ವತಿಯಿಂದ ಆಯೋಜಿಸಲಾಗಿದ್ದ ರೈತರ ಸಭೆಯಲ್ಲಿ ಚರ್ಚ್‌ನ ಆರ್ಚ್‌ ಬಿಷಪ್‌ ಜೋಸೆಫ್ ಪಂಪ್ಲಾನಿ ಮಾತನಾಡಿದ್ದಾರೆ. ಈ ವೇಳೆ ರಬ್ಬರ್‌ ಕೃಷಿಕರ ಬಗ್ಗೆ ಪ್ರಸ್ತಾಪಿಸಿ, ರಬ್ಬರ್‌ ಬೆಲೆ ಕುಸಿಯುತ್ತಿದೆ. ಇದಕ್ಕೆ ಯಾರು ಹೊಣೆ ?ಕೇಂದ್ರ ಸರ್ಕಾರ ಮನಸ್ಸು ಮಾಡಿದರೆ, ಕೆಜಿಗೆ 250 ರೂ.ಬೆಲೆ ಸಿಗುತ್ತದೆ. ನೀವು ಕೆಜಿಗೆ 300 ರೂ.ಗಳಂತೆ ರಬ್ಬರ್‌ ಖರೀದಿಸಿದರೆ, ರಾಜ್ಯದಲ್ಲಿ ಬಿಜೆಪಿಯ ಸಂಸದರಿಲ್ಲ ಎನ್ನುವ ಸಮಸ್ಯೆ ನಾವು ಪರಿಹರಿಸುತ್ತೇವೆ. ನಮ್ಮ ಮತವನ್ನು ನೀಡುತ್ತೇವೆ ಎಂದಿದ್ದಾರೆ.

ಕೇರಳದಲ್ಲಿ ಇನ್ನುಮುಂದೆ ಕ್ರಿಶ್ಚಿಯನ್ನರು ಮತ್ತು ಆರ್‌ಎಸ್‌ಎಸ್‌ ನಡುವೆ ಘರ್ಷಣೆಗಳಿರುವುದಿಲ್ಲ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು ಹೇಳಿಕೆ ನೀಡಿದ ಬೆನ್ನಲ್ಲೇ, ಚರ್ಚ್‌ನ ಈ ಘೋಷಣೆ ಮಹತ್ವ ಪಡೆದುಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next