Advertisement
1823ರಲ್ಲಿ ತಿರುವಾಂಕೂರು ರಾಜ್ಯದ ರಾಣಿ ಗೌರಿ ಪಾರ್ವತಿ ಬಾಯಿ, ಅಂದಿಗೆ ಅಸ್ತಿತ್ವದಲ್ಲಿದ್ದ ವರದಕ್ಷಿಣೆ ಕ್ರಮದ ವಿರುದ್ಧ ಸಿಡಿದೆದ್ದಿರು ಎಂಬುದು ಕೇರಳ ಸರಕಾರದ ಪತ್ರಗಾರದಲ್ಲಿರುವ ದಾಖಲೆಗಳಿಂದ ಬಹಿರಂಗ ಗೊಂಡಿದೆ. ದಾಖಲೆಗಳ ಪ್ರಕಾರ, ಅಂದಿಗೆ ಬ್ರಾಹ್ಮಣ ಸಮುದಾಯ ದ ಯುವತಿಯರನ್ನು ಮದುವೆಯಾಗಲು ಹೆಚ್ಚಿನ ವರದಕ್ಷಿಣೆ ನೀಡಬೇಕಿತ್ತು. ಈ ವಿಚಾರ ಪ್ರಶ್ನಿಸಿದ ರಾಣಿ, ವರದಕ್ಷಿಣೆ ನೀಡುವುದಕ್ಕೆ ಮಿತಿ ವಿಧಿಸಿ ರಾಜಾಜ್ಞೆ ಹೊರಡಿಸಿದ್ದಾರೆ. ವರದಕ್ಷಿಣೆ ಸಂಪೂರ್ಣ ವಾಗಿ ನಿಷೇಧಿಸದಿದ್ದರೂ ವಧುವಿಗೆ ಹೊರೆಯಾಗದಂತೆ ಮಿತಿ ವಿಧಿಸುವ ಮೂಲಕ ಕ್ರಮ ಕೈಗೊಂಡಿದ್ದರು ವರ ದಕ್ಷಿಣೆ ಕಿರುಕುಳ ಪ್ರಕರಣಗಳ ಹೆಚ್ಚಳದ ನಡುವೆ ಈ ವಿಚಾರ ಮಹತ್ವ ಪಡೆದಿದೆ. Advertisement
Kerala; ವರದಕ್ಷಿಣೆ ವಿರುದ್ಧ 200 ವರ್ಷ ಹಿಂದೆಯೇ ರಾಜಾಜ್ಞೆ
12:49 AM Feb 19, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.