Advertisement

ಬ್ಯಾಡ್ಮಿಂಟನ್‌ ರ್‍ಯಾಂಕಿಂಗ್‌: ಕೆಂಟೊ ಮೊಮೊಟ ನಂಬರ್‌ ವನ್‌

06:00 AM Sep 29, 2018 | |

ಟೋಕಿಯೊ: ವಿಶ್ವ ಚಾಂಪಿಯನ್‌ ಕೆಂಟೊ ಮೊಮೊಟ ಬಿಡಬ್ಲ್ಯುಎಫ್ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಅಲಂಕರಿಸಿದ ವಿಶ್ವದ ಮೊದಲ ಜಪಾನಿ ಬ್ಯಾಡ್ಮಿಂಟನ್‌ ಆಟಗಾರನಾಗಿ ಮೂಡಿಬಂದಿದ್ದಾರೆ. ಅವರು ಡೆನ್ಮಾರ್ಕ್‌ನ ವಿಕ್ಟರ್‌ ಅಕ್ಸೆಲ್ಸೆನ್‌ ಸ್ಥಾನಕ್ಕೆ ಸಂಚಕಾರ ತಂದರು. ಅಕ್ಸೆಲ್ಸೆನ್‌ ಈಗ 3ನೇ ಸ್ಥಾನಕ್ಕೆ ಕುಸಿದಿದ್ದಾರೆ. ಚೀನದ ಶಿ ಯುಕಿ ದ್ವಿತೀಯ ಸ್ಥಾನದಲ್ಲಿದ್ದಾರೆ.

Advertisement

24ರ ಹರೆಯದ ಆಕ್ರಮಣಕಾರಿ ಆಟಗಾರ ಕೆಂಟೊ ಮೊಮೊಟ ಈ ವರ್ಷದ ಮಲೇಶ್ಯ ಓಪನ್‌ ಫೈನಲ್‌ ಹೊರತುಪಡಿಸಿ ಬಹುತೇಕ ಕೂಟಗಳಲ್ಲಿ ಚಾಂಪಿಯನ್‌ ಆಗಿದ್ದರು. ಇಂಡೋನೇಶ್ಯ ಓಪನ್‌ ಫೈನಲ್‌ನಲ್ಲಿ ಅಕ್ಸೆಲ್ಸೆನ್‌ಗೆ ಸೋಲುಣಿಸಿ ಮೆರೆದಿದ್ದರು. ಇದೇ ತಿಂಗಳಲ್ಲಿ ತವರಿನ ಜಪಾನ್‌ ಓಪನ್‌ ಕೂಟದಲ್ಲೂ ಪ್ರಶಸ್ತಿ ಎತ್ತಿದ್ದರು. ಆದರೆ ಕಳೆದ ವಾರದ ಚೀನ ಓಪನ್‌ ಫೈನಲ್‌ನಲ್ಲಿ ಆ್ಯಂಟನಿ ಸಿನಿಸುಕ ಅವರಿಗೆ ಶರಣಾಗಿದ್ದರು. 

2016ರಲ್ಲಿ ಅನಧಿಕೃತ ಕ್ಯಾಸಿನೊ ಒಂದಕ್ಕೆ ಭೇಟಿಯಿತ್ತು ಅಮಾನತಿಗೊಳಗಾಗಿದ್ದ ಕೆಂಟೊ ಮೊಮೊಟ, ಅಂದಿನ ರಿಯೋ ಒಲಿಂಪಿಕ್ಸ್‌ನಿಂದಲೂ ಹೊರಗುಳಿಯುವ ಸಂಕಟಕ್ಕೆ ಸಿಲುಕಿದ್ದರು. ಕಳೆದ ವರ್ಷದ ಕೆನಡಿಯನ್‌ ಓಪನ್‌ ಮೂಲಕ ಸ್ಪರ್ಧಾತ್ಮಕ ಬ್ಯಾಡ್ಮಿಂಟನ್‌ಗೆ ಮರಳಿದ ಬಳಿಕ ಕ್ಷಿಪ್ರಗತಿಯಲ್ಲಿ ಪ್ರಗತಿ ಕಾಣುತ್ತ ಹೋದರು.

Advertisement

Udayavani is now on Telegram. Click here to join our channel and stay updated with the latest news.

Next