ಮಾಗಡಿ: ಬರಹಗಾರ, ನಿವೃತ್ತ ದೈಹಿಕ ಶಿಕ್ಷಕ ಗಣೇಶಚಾರಿ ಅವರು ಬುದ್ಧಿ ಭ್ರಮಣೆಯಿಂದ ತನ್ನ ವಿರುದ್ಧ ತೇಜೋವಧೆ ವರದಿ ಮಾಡಿದ್ದಾರೆ. ಅವರು ಕೂಡಲೇ ನಿಮ್ಹಾನ್ಸ್‌ಗೆ ದಾಖಲಾಗಿ ಸೂಕ್ತ ಚಿಕಿತ್ಸೆ ಪಡೆದು ಕೆಂಪೇಗೌಡರ ಹೆಸರಿನಲ್ಲಿ ನಾನು ಮಾಡಿರುವ ಸೇವೆ ಕುರಿತು ಪ್ರಾಮಾಣಿಕವಾಗಿ ಬರೆಯುವುದು ಸೂಕ್ತ ಎಂದು ಕೆಂಪೇಗೌಡ ಅಭಿವೃದ್ಧಿ ಸಮಿತಿ ರಾಜ್ಯಾಧ್ಯಕ್ಷ ಡಾ.ಎಚ್.ಎಂ. ಕೃಷ್ಣಮೂರ್ತಿ ಸಲಹೆ ನೀಡಿದರು.
ಪಟ್ಟಣದ ನಾಡಪ್ರಭು ಕೆಂಪೇಗೌಡ ಕೋಟೆ ವೀಕ್ಷಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ಗಣೇಶಚಾರಿ ಅವರು,ಒಬ್ಬರನ್ನು ತೇಜೋವಧೆಮಾಡುವಮೊದಲು ತಮ್ಮ ಜೀವನದ ಚರಿತ್ರೆಯನ್ನು ಒಮ್ಮೆ ತಿರುಗಿ ನೋಡಲಿ. ಬಾಲಕೃಷ್ಣ ಹಿಂಬಾಲಕರು ಗಣೇಶಚಾರಿ ಮೇಲೆ ಹಲ್ಲೆ ಮಾಡಿದ್ದರಿಂದ ಕಾಲು ಮುರಿದಿತ್ತು. ತಲೆಗೂ ಪೆಟ್ಟಾಗಿತ್ತು. ಚಿಕಿತ್ಸೆ ಕೊಡಿಸಿದ್ದು ಯಾರು ಎಂಬುದನ್ನು ಮರೆತಿರಬೇಕು. ಗಣೇಶಚಾರಿ ತಮ್ಮ ಮೊದಲನೇ ಪತ್ನಿಕೆ.ವಿ.ಸುಜಾತಾಗೆ ಕೋರ್ಟ್ ಆದೇಶದಂತೆ ಕೊಡಬೇಕಾದ ಜೀವನಾಂಶ 80 ಸಾವಿರ ರೂ. ಇನ್ನೂ ನೀಡದೆ ಅನ್ಯಾಯ ಮಾಡಿದ್ದಾರೆ.ಈಗನಾಡಪ್ರಭುಕೆಂಪೇಗೌಡರ ಕೋಟೆ ಕಂದಕ ಮುಚ್ಚಲು ಬಿಡಿ ಎಂದು ಬರೆಯುತ್ತಾರೆ. ಇನ್ನು ಕೃಷ್ಣಮೂರ್ತಿ ಅವರನ್ನು ರಾಜಕೀಯ ತಂದಿದ್ದು ನಾನೇ ಎಂದೂ ಬರೆದುಕೊಂಡಿದ್ದಾರೆ. ಇದು ಅವರ ಮನಸ್ಥಿತಿ ತೋರಿಸಿದೆ ಎಂದರು.
ರಕ್ಷಣೆ ಅವಶ್ಯ:ನಾಡಪ್ರಭು ಕೆಂಪೇಗೌಡ ಕೋಟೆ, ಕಂದಕ ರಕ್ಷಣೆಗಾಗಿ ಆದಿಚುಂಚನಗಿರಿ ಮಠಾಧೀಶರಾಗಿದ್ದ ಭೈರವೈಕ್ಯ ಡಾ.ಬಾಲಗಂಗಾಧರನಾಥಸ್ವಾಮೀಜಿ, ಸಾಹಿತಿಗಳಾದ ಡಾ.ಚಿದಾ ನಂದಮೂರ್ತಿ, ಡಾ.ಕಾಮತ್, ಸಚಿವ ಆರ್. ಅಶೋಕ್, ಅಲೂರು ನಾಗಪ್ಪ, ನಾಗೇಗೌಡ, ಪ್ರಮೀಳಾ ನೈಸರ್ಗಿ, ಪ್ರೇಮಾ ಕಾರ್ಯಪ್ಪ, ಚಲನಚಿತ್ರ ಸಾ.ರಾ.ಗೋವಿಂದರಾಜು, ಇವರ ಸಮ್ಮುಖದಲ್ಲಿ 2008ರಲ್ಲಿ ಹೋರಾಟ ಮಾಡಿದ್ದೆ. ಆಗ ಮಾಗಡಿ ಕೆಂಪೇಗೌಡ ಸ್ಮಾರಕಗಳ ರಕ್ಷಣೆಗೆ ಮುಂದಾದ ತನ್ನನ್ನು
ತೇಜೋವಧೆ ಮಾಡುವ ನಿಟ್ಟಿನಲ್ಲಿ ಕೆಲ ರಾಜಕಾರಣಿಗಳು ತನ್ನನ್ನುಕೊಲೆ ಕೇಸಿಗೆ ಸಿಲುಕಿಸಿದ್ದರು. ಎರಡು ಕಡೆ ಕಂದಕ ಮುಚ್ಚಿದರು. ಮುಚ್ಚಿದ್ದೂ ಆಗಿದೆ. ಮುಂದೆ ಕೆಂಪೇಗೌಡರ ಸ್ಮಾರಕ ಮುಚ್ಚದಂತೆ ರಕ್ಷಣೆ ಕುರಿತು ಬೆಂಗಳೂರಿನ ಚುಂಚನಗಿರಿ ಶಾಖಾ ಮಠದ ಸಭೆ ಕರೆದ ಶ್ರೀಗಳ ಬಾಲ ಗಂಗಾಧರನಾಥಸ್ವಾಮಿ ಎಲ್ಲರಿಂದಲೂ ಸಹಿ ಪಡೆದರು. ಸ್ಮಾರಕ ರಕ್ಷಣೆಯಾಗಬೇಕಿದೆ. ಕೆಂಪೇಗೌಡರಕಾಲದ ಗತವೈಭವಮತ್ತೆ ಕಾಣಬೇಕಿದೆ. ಅದಕ್ಕಾಗಿ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದು ತಿಳಿಸಿದರು.
ವಕೀಲರಾದ ವೆಂಕಲಕ್ಷ್ಮೀ, ಹಿರಿಯರಾದ ಜ್ಯೊತಿಪಾಳ್ಳದ ಶ್ರೀನಿವಾಸಯ್ಯ, ದೊಡ್ಡಿ ಗೋಪಿ, ಗೌಡರ ಪಾಳ್ಯದ ಗಂಗಾಧರ್, ಆನಂದ್, ಎಪಿಎಂಸಿ ಮಾಜಿ ನಿರ್ದೇಶಕ ಜಯಕುಮಾರ್,ಮರೂರು ಶಂಕರ್, ಕುದೂರು ಕೃಷ್ಣಮೂರ್ತಿ, ತಗಚಕುಪ್ಪೆ ಸುರೇಶ್, ನೇತೇನಹಳ್ಳಿ, ಸುರೇಶ್, ರಾಮಣ್ಣ, ರಾಮಚಂದ್ರ, ಲಕ್ಷ್ಮಣ್‌ಗೌಡ, ಸ್ವಾಮಿ,ಮೋಹನ್, ಪೂಜಾರಿ ಇದ್ದರು.