ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ವಿಮಾನದಲ್ಲಿ ಬಾಂಬ್ ಇದೆ ಎಂದು ಬೆದರಿಕೆ ಕರೆಗಳು ಬರುವುದು ಹೆಚ್ಚಾಗಿ ಕಂಡುಬರುತ್ತದೆ ಆದರೆ ಇಲ್ಲೊಂದು ವಿಚಿತ್ರ ಪ್ರಕರಣ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬೆಳಕಿಗೆ ಬಂದಿದೆ.
ಬೆಂಗಳೂರಿನಿಂದ ಲಕ್ನೋಗೆ ತೆರಳಬೇಕಿದ್ದ ಏರ್ ಇಂಡಿಯಾ ವಿಮಾನವನ್ನು ಹತ್ತಲು ಬಂದ ಯುವಕನೊಬ್ಬ ವಿಮಾನವನ್ನು ಹತ್ತದೆ ಅಲ್ಲಿನ ವಿಮಾನ ಸಿಬಂದಿ ಬಳಿ ತಾನೊಬ್ಬ ಟೆರರಿಸ್ಟ್, ಭಯೋತ್ಪಾದಕ ಗುಂಪಿನಲ್ಲಿ ಇದ್ದಿರುವುದಾಗಿ ಹೇಳಿಕೊಂಡಿರುವ ಘಟನೆ ಫೆಬ್ರವರಿ 17 ರಂದು ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಘಟನೆಗೆ ಸಂಬಂಧಿಸಿ ವಿಮಾನ ನಿಲ್ದಾಣದ ಪೊಲೀಸರು ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ, ತಾನೊಬ್ಬ ಭಯೋತ್ಪಾದಕ ಎಂದು ಹೇಳಿದ ಯುವಕನ ಹೆಸರು ಆದರ್ಶ್ ಕುಮಾರ್ ಸಿಂಗ್ ಎಂದು ಹೇಳಲಾಗಿದೆ.
ಈತ ಫೆಬ್ರವರಿ ಹದಿನೇಳರಂದು ಬೆಂಗಳೂರಿನಿಂದ ಲಕ್ನೋ ಗೆ ಹೊರಡುವ ಏರ್ ಇಂಡಿಯಾ ವಿಮಾನ ಹತ್ತಬೇಕಿತ್ತು ಆದರೆ ವಿಮಾನ ನಿಲ್ದಾಣದಲ್ಲಿ ಎಲ್ಲ ದಾಖಲೆಗಳ ಪರಿಶೀಲನೆ ನಡೆಸಿದ ಬಳಿಕ ವಿಮಾನ ಹತ್ತಲು ಬಂದವ ಬಳಿಕ ಅಲ್ಲಿಂದ ಹಿಂದೆ ನಡೆದಿದ್ದಾನೆ ಇದನ್ನು ಕಂಡ ವಿಮಾನ ಸಿಬಂದಿ ಪ್ರಶ್ನೆ ಮಾಡಿದ್ದಾರೆ ಇದಕ್ಕೆ ಉತ್ತರಿಸಿದ ಯುವಕ ತಾನೊಬ್ಬ ಉಗ್ರ, ಭಯೋತ್ಪಾದಕ ಗುಂಪಿನಲ್ಲಿ ಇದ್ದೇನೆ ಈ ವಿಮಾನ ಲಕ್ನೋ ಗೆ ಹೋಗುವುದಿಲ್ಲ ಎಂದು ಹೇಳಿದ್ದಾನೆ ಇದರಿಂದ ಗಾಬರಿಯಾದ ಸಿಬಂದಿ ಕೂಡಲೇ ವಿಚಾರವನ್ನು ವಿಮಾನ ನಿಲ್ದಾಣದ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಅಲ್ಲಿಗೆ ಬಂದ ಪೊಲೀಸರು ಆತನನ್ನು ವಿಚಾರಣೆ ನಡೆಸಿ ತಮ್ಮ ವಶಕ್ಕೆ ಪಡೆದುಕೊಂಡು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಯುವಕನ ಮಾತು ಸತ್ಯವೋ ಸುಳ್ಳೋ ಪೊಲೀಸರ ವಿಚಾರಣೆ ಬಳಿಕವೇ ಸತ್ಯಾಂಶ ಹೊರಬರಲಿದೆ.
ಇದನ್ನೂ ಓದಿ: ನಿಮ್ಮನ್ನು ಪ್ರಧಾನಿ ಮಾಡಿದ್ದು ನಾವು… ನಮ್ಮ ಮೇಲೆ ದಬ್ಬಾಳಿಕೆ ಮಾಡಬೇಡಿ: ರೈತ ಮುಖಂಡ ಕಿಡಿ