Advertisement

ಕೆಂಪೇಗೌಡರ ಸಾಧನೆ ಜೀವಂತವಾಗಿರಿಸಿ

09:53 PM Jun 28, 2021 | Team Udayavani |

ಮಾಗಡಿ: ನಾಡಪ್ರಭು ಕೆಂಪೇಗೌಡರನ್ನುಕೇವಲ ಜಯಂತಿಗೆ ಸೀಮಿತಗೊಳಿಸಬೇಡಿ.ಅವರ ಕಾರ್ಯಗಳನ್ನು ಕಾರ್ಯರೂಪಕ್ಕೆತರಬೇಕು. ಅವರ ತತ್ವಾದರ್ಶ ಹಾಗೂಸಾಧನೆಗಳನ್ನು ವಿಶ್ವದಲ್ಲಿಯೇ ಜೀವಂತವಾಗಿರಿಸುವ ಕೆಲಸ ಆಗಬೇಕುಎಂದು ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ಆರ್‌.ರಾಮಕೃಷ್ಣಯ್ಯ ತಿಳಿಸಿದರು.

Advertisement

ಪಟ್ಟಣದ ಎನ್‌ಇಎಸ್‌ ಬಡಾವಣೆಯಲ್ಲಿರುವ ಕೆಂಪೇಗೌಡ ಪ್ರೌಢಶಾಲಾಆವರಣದಲ್ಲಿ ಒಕ್ಕಲಿಗರ ಸಂಘದಿಂದನಡೆದ ಕೆಂಪೇಗೌಡ ಜಯಂತಿಯಲ್ಲಿ ಮಾತನಾಡಿ, ನಾಡಪ್ರಭು ಕೆಂಪೇಗೌಡ ಅವರುಅನೇಕ ಕೆರೆಕಟ್ಟೆ, ಗುಡಿ, ಗೋಪುರಗಳನ್ನುಸ್ಥಾಪಿಸಿದ್ದಾರೆ. ಜನರ ಉಪಯೋಗಕ್ಕಾಗಿಅನೇಕಕೆಲಸಗಳನ್ನು ಮಾಡಿದ್ದಾರೆ.

ಮಾಗಡಿಕೆಂಪೇಗೌಡರು, ವಿಶ್ವಖ್ಯಾತಿ ಬೆಂಗಳೂರಿನನಿರ್ಮಾಪಕರು. ಬಿಜೆಪಿ ಸರ್ಕಾರದಲ್ಲಿಮುಚ್ಚುಣಿ ನಾಯಕರಾಗಿರುವ ಡಿಸಿಎಂಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರುತಾಲೂಕಿನವರೇ ಆಗಿದ್ದು, ವಿಶ್ವ ಮಟ್ಟದಲ್ಲಿಕೆಂಪಾಪುರ ಅಭಿವೃದ್ಧಿಯಾಗಲಿದೆ ಎಂದುವಿಶ್ವಾಸ ವ್ಯಕ್ತಪಡಿಸಿದರು.

ಕೆಂಪೇಗೌಡ ಹೆಸರಿನಲ್ಲಿ ಪ್ರಶಸ್ತಿಗೆತೀರ್ಮಾನ: ಒಕ್ಕಲಿಗರ ಸಂಘದ ಪ್ರಧಾನಕಾರ್ಯದರ್ಶಿ ಹಾಗೂ ಪುರಸಭಾ ಸದಸ್ಯಎಚ್‌.ಜೆ.ಪುರುಷೋತ್ತಮ್‌ ಮಾತನಾಡಿ,ಕೆಂಪೇಗೌಡ ಅವರನ್ನು ಸ್ಮರಿಸುವಂತಕಾರ್ಯಕ್ರಮಗಳು ನಡೆಸಬೇಕು. ಅವರಹೆಸರಿನಲ್ಲಿ ಶಾಲಾ ಮಕ್ಕಳಿಗೆ ಪ್ರಬಂಧಸ್ಪರ್ಧೆ, ಚರ್ಚಾ ಸ್ವರ್ಧೆ ಏರ್ಪಡಿಸಿ, ಪ್ರತಿವರ್ಷವೂ ಕೆಂಪೇಗೌಡ ಹೆಸರಿನಲ್ಲಿ ಪ್ರಶಸ್ತಿನೀಡಲು ತೀರ್ಮಾನ ಕೈಗೊಳ್ಳಲಾಗುವುದುಎಂದು ತಿಳಿಸಿದರು.

ಒಕ್ಕಲಿಗರ ಸಂಘದ ಉಪಾಧ್ಯಕ್ಷ ಸೀಬೇಗೌಡ, ಖಜಾಂಚಿ ಡೂಂಲೈಟ್‌ ಮೂರ್ತಿ,ನಿರ್ದೇಶಕ ನರಸಿಂಹಮೂರ್ತಿ, ಮಂಜುನಾಥ್‌, ಪುರಸಭಾ ಸದಸ್ಯ ಪ್ರವೀಣ್‌,ಭಾರತ್‌ ಕೋ ಆಪರೇಟಿವ್‌ ಸೊಸೈಟಿನಿರ್ದೇಶಕ ರಮೇಶ್‌, ನಾಗರಾಜು,ಪ್ರಾಂಶುಪಾಲ ಆರ್‌.ಶ್ರೀನಿವಾಸ್‌, ರಂಗೇಗೌಡ, ಶಿಕ್ಷಕ ಪ್ರವೀಣ್‌ ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next