Advertisement
ದೂರು ತರಬೇಡಿ: ತಾಲೂಕಿನ ಕೆಲವೆಡೆ ಅಂತರ್ಜಲ ಮಟ್ಟ ಕುಸಿದಿದ್ದರೆ, ಹನಗೋಡು ಹೋಬಳಿಯಲ್ಲಿ ಮಳೆ-ಬಿರುಗಾಳಿಯಿಂದ ವಿದ್ಯುತ್ ಕಂಬಗಳು ನೆಲಕ್ಕುರುಳಿರುವ ಪರಿಣಾಮ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ದುರಸ್ತಿ ಕಾರ್ಯ ನಡೆಯುತ್ತಿದೆ. ಇದರಿಂದಾಗಿ ಕುಡಿಯುವ ನೀರಿನ ಪೂರೈಕೆಯಲ್ಲಿ ಅಡ್ಡಿಯುಂಟಾಗಿದೆ. ಆದರೆ, ಕುಡಿಯುವ ನೀರಿನ ಸಮಸ್ಯೆಯಾಗದಂತೆ ಅಗತ್ಯವಿರುವೆಡೆಗಳಲ್ಲಿ ಟ್ಯಾಂಕರ್ ಮೂಲಕ ಸರಬರಾಜು ಮಾಡಬೇಕು. ಯಾವುದೇ ದೂರು ಬಾರದಂತೆ ಎಚ್ಚರ ವಹಿಸಬೇಕೆಂದು ಸೂಚಿಸಿದರು.
Related Articles
Advertisement
ಹಾನಿಗೊಳಗಾದ ಪ್ರಮಾಣದ ಸರ್ವೆ: ಬಿರುಗಾಳಿಯಿಂದ ಹಾನಿಗೊಳಗಾಗಿರುವ ಹನಗೋಡು ಹೋಬಳಿ ವ್ಯಾಪ್ತಿಯ ಗ್ರಾಮಗಳಿಗೆ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾಮ ಲೆಕ್ಕಿಗರ ನೇತೃತ್ವದಲ್ಲಿ ಹಾನಿ ಸರ್ವೆ ಕಾರ್ಯ ಚುರುಕಾಗಿ ನಡೆದಿದ್ದು, ವರದಿ ಸಿಕ್ಕ ನಂತರ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗವುದು. ನೆಲಕ್ಕುರುಳಿದ್ದ ಮರಗಳನ್ನು ತೆರವುಗೊಳಿಸುವ ಕಾರ್ಯ ಸಂಪೂರ್ಣಗೊಂಡಿದೆ ಎಂದು ತಹಸೀಲ್ದಾರ್ ಐ.ಇ.ಬಸವರಾಜು ತಿಳಿಸಿದರು.
ಸಭೆಯಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಎಚ್.ವೈ.ಮಹದೇವ್, ನಗರಸಭೆ ಪೌರಾಯುಕ್ತೆ ವೀಣಾ ಆಳ್ವ, ಸೆಸ್ಕ್ ಎಇಇ ಸಿದ್ದಯ್ಯ, ಜಿಪಂ ಕುಡಿಯುವ ನೀರು ಯೋಜನೆಯ ಎಂಜಿನಿಯರ್, ನಗರಸಭೆಯ ಕುಡಿಯುವ ನೀರು ನಿರ್ವಹಣಾ ಉಸ್ತುವಾರಿ ಎಂಜಿನಿಯರ್ ಅನುಪಮ, ಪರಿಸರ ಎಂಜಿನಿಯರ್ ರೂಪಾ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ನೀರಿನ ಸಮಸ್ಯೆಯಿದ್ದರೆ ಕರೆ ಮಾಡಿ: ಹುಣಸೂರು ತಾಲೂಕು ಪಂಚಾಯ್ತಿ ಕಚೇರಿ ಆವರಣದಲ್ಲಿ ಜಲಸೇವಾ ನಿಯಂತ್ರಣ ಕೊಠಡಿ ಸ್ಥಾಪನೆಗೊಂಡಿದ್ದು, ತಾಲೂಕಿನ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾದಲ್ಲಿ 08222-252028ಗೆ ಕರೆ ಮಾಡಿ ಸಮಸ್ಯೆಯನ್ನು ತಿಳಿಸಿದಲ್ಲಿ ಕೂಡಲೇ ಸಮಸ್ಯೆ ಪರಿಹರಿಸಲಾಗುವುದು ಎಂದು ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಮಹೇಶ್ ಭರವಸೆ ನೀಡಿದರು.