Advertisement

ಕಳವಿನ ಗೆಲುವಿಗೆ ದೇವರಿಗೆ ಹರಕೆ

02:15 PM Aug 26, 2021 | Team Udayavani |

ಬೆಂಗಳೂರು: ಕಳವು ಕಾರ್ಯ ಯಶಸ್ವಿಯಾಗಲೆಂದೇ ದೇವರಿಗೆ ಹರಕೆಕಟ್ಟಿಯೇ ನಗರಕ್ಕೆ ಬರುತ್ತಾರಿವರು…! ಇದು ಓಜಿಕುಪ್ಪಂ ಮತ್ತು ತಿರುಚ್ಚಿ ಗ್ಯಾಂಗ್‌ಗಳ ವಿಶೇಷ.

Advertisement

ಈ ಎರಡು ಗ್ಯಾಂಗ್‌ಗಳು ತಮ್ಮ ಗ್ರಾಮ ದೇವತೆಗೆ ಕಾರ್ಯ ಯಶಸ್ವಿಗೊಳಿಸುವಂತೆ ಹರಕೆ ಕಟ್ಟಿ ಬರುತ್ತಾರೆ. ಜನರ ಗಮನ ಬೇರೆಡೆ ಸೆಳೆದು, ಬ್ಯಾಗ್‌ಗಳು, ಹಣ ದೋಚಿದ ಹಣದಲ್ಲಿ ದೇವರ ಹರಕೆ ತೀರಿಸಿಯೇ ಮನೆಗೆ ತೆರಳುತ್ತಾರೆ!

ತಮಿಳುನಾಡು ಮೂಲದ ಓಜಿಕುಪ್ಪಂ ಮತ್ತು ತಿರುಚ್ಚಿ ಗ್ಯಾಂಗ್‌ಗಳ ಕೃತ್ಯದ ಮಾದರಿ ಬೇರೆ ಬೇರೆ. ಆದರೆ, ಇಬ್ಬರ ಟಾರ್ಗೆಟ್‌ ಬೆಂಗಳೂರು. ರೈಲು, ಬಸ್‌ಗಳ ಮೂಲಕ ತಿಂಗಳಿಗೆ ಎರಡು-ಮೂರು ಬಾರಿ ಬರುವ ಈ ಗ್ಯಾಂಗ್‌ನ ಸದಸ್ಯರು, ನಗರದಲ್ಲಿರುವ ಸ್ಥಳೀಯ ಸಹಚರರ ಮೂಲಕ ಬಾಡಿಗೆ ಮನೆಗಳಲ್ಲಿ ಆಶ್ರಯಿಸಿ, ಕಳವು ದ್ವಿಚಕ್ರ ವಾಹನಗಳನ್ನು ಬಳಸಿ ಕೃತ್ಯ ಎಸಗುತ್ತಾರೆ. ವಿಶೇಷವೆಂದರೆ, ಈ ಗ್ಯಾಂಗ್‌ಗಳ ಸದಸ್ಯರು ಯಾರ ಮೇಲೂ ಹಲ್ಲೆ ನಡೆಸುವುದಿಲ್ಲ. ಕೇವಲ ಹಣ, ಚಿನ್ನಾಭರಣ ಕಳವು ಮಾಡಿ ಪರಾರಿಯಾಗುತ್ತಾರೆ.

ಓಜಿಕುಪ್ಪಂ: ತಮಿಳುನಾಡಿನ ಓಜಿಕುಪ್ಪಂ ಎಂಬ ಗ್ರಾಮದಲ್ಲಿ ಶೇ.80ರಷ್ಟು ಮಂದಿ ಅಪರಾಧ ಹಿನ್ನೆಲೆಯುಳ್ಳವರಾಗಿದ್ದಾರೆ. ಹೀಗಾಗಿಯೇ ಈ ಗ್ರಾಮದಿಂದ ಬಂದು ಕೃತ್ಯ ಎಸಗುವ ಆರೋಪಿಗಳಿಗೆ “ಓಜಿಕುಪ್ಪಂ’ ಎಂಬ ಕುಖ್ಯಾತಿ ಬಂದಿದೆ. 8-10ಮಂದಿಯ ಒಂದು ತಂಡ ಊರಿಂದ ತೆರಳುವಾಗ ಗ್ರಾಮದ ಹೊರಭಾಗದಲ್ಲಿರುವ ದೇವಿಗೆ ಹರಕೆ ಕಟ್ಟಿಕೊಂಡು ಬೆಂಗಳೂರು ಸೇರಿ ನಾನಾ ರಾಜ್ಯಗಳಿಗೆ ತೆರಳುತ್ತಾರೆ. ಹಣ ದೋಚಿ ಊರಿಗೆ ತೆರಳುತ್ತಿದ್ದಂತೆ ಹರಕೆ ತೀರಿಸುತ್ತಾರೆ.

ಇದನ್ನೂ ಓದಿ:ಕೋವಿಡ್ ಹೆಚ್ಚಳವಾಗುತ್ತಿದೆ, ಕೇಂದ್ರ ಸರ್ಕಾರ ಆಸ್ತಿ ಮಾರಾಟದಲ್ಲಿ ನಿರತವಾಗಿದೆ : ರಾಹುಲ್

Advertisement

ಆರೋಪಿಗಳು ಹೇಗೆ ಕೃತ್ಯವೆಸಗುತ್ತಾರೆ?
ಪ್ರತಿಷ್ಠಿತ ಪ್ರದೇಶ ಅಥವಾ ಹೆಚ್ಚು ಸಂದಣಿ ಇಲ್ಲದ ಪ್ರದೇಶದಲ್ಲಿರುವ ಬ್ಯಾಂಕ್‌ಗಳ ಬಳಿ ಒಂಚು ಹಾಕುವ ತಂಡದ ಸದಸ್ಯರು, ಬ್ಯಾಂಕ್‌ ಒಳ
ಗಡೆ ಇಬ್ಬರು, ಹೊರಭಾಗದಲ್ಲಿ ನಾಲ್ವರು ಗ್ರಾಹಕರ ಮೇಲೆ ನಿಗಾವಹಿಸುತ್ತಾರೆ. ಲಕ್ಷಾಂತರ ರೂ. ಹಣ ಡ್ರಾ ಮಾಡಿಕೊಂಡು ಹೊರಗಡೆ
ಬರುವ ಗ್ರಾಹಕನ ಹಿಂಬಾಲಿಸಿ, ಕಾರು ಅಥವಾ ದ್ವಿಚಕ್ರ ವಾಹನ ಹತ್ತುತ್ತಿದ್ದಂತೆ ಸಮೀಪಕ್ಕೆ ಬಂದು, ಪಕ್ಕದಲ್ಲಿ ಹತ್ತು ಅಥವಾ ನೂರು ರೂ.
ಮುಖಬೆಲೆಯ ನೋಟು ನೆಲದ ಮೇಲೆ ಹಾಕಿ ಅವರ ಗಮನ ಬೇರೆಡೆ ಸೆಳೆಯುತ್ತಾರೆ. ಇತ್ತ ಕೆಳಗೆ ಬಿದ್ದ ನೋಟಿನ ಬಗ್ಗೆ ಗ್ರಾಹಕ ಗಮನ ಹರಿಸುತ್ತಿದ್ದಂತೆ ಹಣದ ಬ್ಯಾಗ್‌ನ್ನು ದ್ವಿಚಕ್ರ ವಾಹನದಲ್ಲಿ ಕದೊಯ್ಯುತ್ತಾರೆ. ಇತ್ತ ನೋಟುಬಿದ್ದಿರುವಬಗ್ಗೆ ಹೇಳಿದವ್ಯಕ್ತಿ ಕೂಡ ಗ್ರಾಹಕನಿಗೆ ಕಳ್ಳನ ಹಿಂಬಾಲಿಸಲು ಸಹಾಯ ಮಾಡುವ ನೆಪದಲ್ಲಿ ಆತ ಕೂಡ ಮತ್ತೂಂದು ಬೈಕ್‌ನಲ್ಲಿ ಪರಾರಿಯಾಗುತ್ತಾನೆ.

ಕಳ್ಳತನವೇ ತಿರುಚ್ಚಿ ಗ್ಯಾಂಗ್‌ ಕಸುಬು
ತಮಿಳುನಾಡಿನ ತಿರುಚ್ಚಿ ಎಂಬ ಗ್ರಾಮದಲ್ಲಿ ಸುಮಾರು 100-150 ಮಂದಿ ಕಳ್ಳತನ ಮಾಡುವುದನ್ನೇ ಹತ್ತಾರು ವರ್ಷಗಳಿಂದ ಕಸುಬು ಮಾಡಿಕೊಂಡಿದ್ದಾರೆ. ಬೆಂಗಳೂರಿಗೆ ಬರುವ ಮೊದಲು ದೇವರಿಗೆ ಹರಕೆ ಕಟ್ಟಿಕೊಂಡು ಬಂದು ಕೃತ್ಯ ಎಸಗಿ ಪರಾರಿಯಾಗುತ್ತಾರೆ. ಈ ಗ್ಯಾಂಗ್‌ನ ಆರೇಳು ಮಂದಿ ಸದಸ್ಯರು ನಿರ್ದಿಷ್ಟವಾದ ಬಸ್‌, ರೈಲು ನಿಲ್ದಾಣ, ಜನನಿಬಿಡ ಪ್ರದೇಶಗಳಲ್ಲಿ ಠಿಕಾಣಿ ಹಾಕುತ್ತಾರೆ. ಒಬ್ಬರು, ಇಬ್ಬರು ಇರುವ ಸಾರ್ವಜನಿಕರ ಬಳಿ ವಿಳಾಸ ಹಾಗೂ ಇತರೆ ಮಾರ್ಗಗಳ ಮೂಲಕ ಗಮನ ಬೇರೆಡೆ ಸೆಳೆದು ಬ್ಯಾಗ್‌ಗಳನ್ನು ಕಳವು ಮಾಡುತ್ತಾರೆ. ಕ್ಷಣಾರ್ಥ ದಲ್ಲಿ ಆ ಬ್ಯಾಗ್‌ ಅನ್ನು ಮತ್ತೂಬ್ಬನ ಮೂಲಕ ಬೇರೆಡೆ ಕಳುಹಿಸು ತ್ತಾರೆ.ಆತ ನಿರ್ದಿಷ್ಟ ಸ್ಥಳದಲ್ಲಿಬ್ಯಾಗ್‌ಇಟ್ಟುಮತ್ತೆ ಅವರ ಗ್ಯಾಂಗ್‌ ಜತೆ ಸೇರಿಕೊಳ್ಳುತ್ತಾನೆ. ಇಂತಹ ಗ್ಯಾಂಗ್‌ಗಳ ಬಗ್ಗೆ ಪೊಲೀಸರು ಎಷ್ಟೇ ನಿಗಾವಹಿಸಿದರೂ, ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎನ್ನುತ್ತಾರೆ ಪೊಲೀಸ್‌ ಅಧಿಕಾರಿಗಳು.

 ಮೋಹನ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next