ಮಂಗಳೂರು : ಕಂಬಳ ಕ್ಷೇತ್ರದ ಸಾಧಕ ಕೆದುಬರಿ ಗುರುವಪ್ಪ ಪೂಜಾರಿ ಅವರು ಇಂದು ಸಂಜೆ ಗುರುಪುರದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ನಿಧನ ಹೊಂದಿದ್ದಾರೆ.
ಗುರುವಪ್ಪ (75 ವರ್ಷ ) ಅವರು ಸ್ಕೂಟರ್ ನಲ್ಲಿ ಹೋಗುತ್ತಿದ್ದಾಗ ಕಾರು ಢಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ.
ಕಂಬಳ ಕ್ಷೇತ್ರದಲ್ಲಿ ಅಪಾರವಾದ ಸಾಧನೆಯನ್ನು ಮಾಡಿದ ಕೀರ್ತಿ ಕೆದುಬರಿ ಗುರುವಪ್ಪ ಪೂಜಾರಿ ಅವರದ್ದು, ಅದೂ ಅಲ್ಲದೆ ಕಂಬಳದ ಕೋಣಗಳ ಯಜಮಾನರ ಪೈಕಿ ಗುರುವಪ್ಪ ಅವರು ಬಹಳ ಹಿರಿಯ ವ್ಯಕ್ತಿಯಾಗಿದ್ದಾರೆ.
ಕಳೆದ ಹಲವು ವರ್ಷಗಳಿಂದ ಅಡ್ಡ ಹಲಗೆ , ಕಣೆ ಹಲಗೆ, ವಿಭಾಗದಲ್ಲಿ ಕೋಣಗಳನ್ನು ಸ್ಪರ್ಧೆಗೆ ಇಳಿಸುತ್ತಿದ್ದರು. ಕಂಬಳ ಕ್ಷೇತ್ರದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದರು, ಕೋಣಗಳ ಸ್ಪರ್ಧೆಯಲ್ಲಿ ಯಾವತ್ತೂ ತನಗೆ ಬಹುಮಾನ ಬರಬೇಕೆಂದು ಬಯಸಿದವರಲ್ಲ, ಗುರುವಪ್ಪ ಅವರ ನಿಧನ ಸುದ್ದಿ ತಿಳಿದು ಅಪಾರ ಕಂಬಳಾಭಿಮಾನಿಗಳು ಕಂಬನಿ ಮಿಡಿದಿದ್ದಾರೆ.
ಇದನ್ನೂ ಓದಿ :151 ಯೋಜನೆಗಳನ್ನು ಆನ್ಲೈನ್ ಮೂಲಕ ಲಭಿಸುವಂತೆ ಮಾಡಿರುವ ಏಕೈಕ ರಾಜ್ಯ ಗೋವಾ : ಸಾವಂತ್