Advertisement

ಜೀವ ಕಾರುಣ್ಯ ನಶಿಸಿದ ಜಗತ್ತಿನಲ್ಲಿ  ಕೇಡು-ಮತ್ಸರ

05:17 PM Apr 18, 2018 | Team Udayavani |

ಬಾಗಲಕೋಟೆ: ಜೀವ ಕಾರುಣ್ಯ, ಜೀವ ಪ್ರೇಮ ನಶಿಸಿ ಹೋಗಿರುವ ಜಗತ್ತಿನಲ್ಲಿ ಮಾನವೀಯತೆ ಅಳಿಸಿ ಹೋಗಿದೆ. ಮತ್ಸರ, ಕೇಡು, ಕುಯುಕ್ತಿಗಳೇ ಪ್ರಮುಖವಾಗಿವೆ ಎಂದು ಚಿಂತಕಿ ವೀಣಾ ಬನ್ನಂಜೆ ಕಳವಳ ವ್ಯಕ್ತಪಡಿಸಿದರು.

Advertisement

ವಿದ್ಯಾ ಪ್ರಸಾರಕ ಮಂಡಳದ ಎಸ್‌.ಆರ್‌. ಎನ್‌. ಕಲಾ, ಎಂ.ಬಿ. ಶಿರೂರ ವಾಣಿಜ್ಯ ಮಹಾವಿದ್ಯಾಲಯದ 34ನೇ ವಾರ್ಷಿಕೋತ್ಸವ, ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ, ನಿವೃತ್ತಿ ಹೊಂದಿದ ಡಾ. ಎಂ.ಜಿ. ದೀಕ್ಷಿತ್‌ ಅವರಿಗೆ ಬೀಳ್ಕೊಡುವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಜಮ್ಮುವಿನಲ್ಲಿ ಪುಟ್ಟ ಬಾಲಕಿ ಅಸಿಫಾಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆಗೈದ ಮತಾಂಧರು ಮಾನವೀಯತೆಯನ್ನು ಮರೆತಿದ್ದಾರೆ ಎಂದು ಕಣ್ಣಿರಿಟ್ಟರು.

ಒಳಿತು ಎಂಬುದು ದೂರ ಇಲ್ಲ, ಅದು ನಮ್ಮೊಳಗಿದೆ. ಅದನ್ನು ಪರಿಪೂರ್ಣವಾಗಿ ಬಳಸಿಕೊಳ್ಳಬೇಕಾದ ಅಗತ್ಯ ಇದೆ ಎಂದು ಹೇಳಿದ ಅವರು, ನಾನು ಏನೂ ಅಲ್ಲ ಎಂಬ ಭಾವನೆ ಬರಬೇಕು. ಕಣ್ಮುಚ್ಚಿ ಪ್ರಾರ್ಥಿಸಿದಾಗ ಒಳಗಿನ ಅದ್ಭುತ ಗೊತ್ತಾಗುತ್ತದೆ ಎಂದು ಹೇಳಿದರು. ಅಂಕ ಆಧಾರಿತ ಶಿಕ್ಷ ಣ ವಿದ್ಯಾರ್ಥಿಗಳಲ್ಲಿ ಆಸಕ್ತಿಯನ್ನು ಹೊಸಕಿ ಹಾಕಿದೆ. ಪಾಲಕರ ಒತ್ತಾಯ, ಅವರ ಪ್ರೇರಣೆಗಾಗಿ ಶಿಕ್ಷಣ ನಡೆದಿದೆ. ಮತ್ತೂಬ್ಬರನ್ನು ಹೋಲಿಕೆ ಮಾಡುವುದರಿಂದ ವ್ಯಕ್ತಿತ್ವ ವಿಕಸನಗೊಳ್ಳುವದಿಲ್ಲ, ಒಳಗಣ್ಣು ತೆರೆದು ನೋಡುವ ಶಿಕ್ಷಣ ನಮಗೆ ಬೇಕಿದೆ ಎಂದರು.

ವಿದ್ಯಾ ಪ್ರಸಾರಕ ಮಂಡಳದ ಉಪ ಕಾರ್ಯಾಧ್ಯಕ್ಷ  ರಾಮ ಮನಗೂಳಿ ಅಧ್ಯಕ್ಷತೆ ವಹಿಸಿದ್ದರು. ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಎಂ.ಜಿ. ದೀಕ್ಷಿತ್‌ ಅವರು ಸೇವಾ ನಿವೃತ್ತಿ ಹೊಂದುತ್ತಿರುವ ನಿಮಿತ್ತ ಸಂಸ್ಥೆಯ ಪರವಾಗಿ ಬೀಳ್ಕೊಡಲಾಯಿತು. ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಯ ಸಾಧಕರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಾಧ್ಯಕ್ಷೆ ಶ್ರೀಲತಾ ಹೆರಂಜಲ, ಸಂದೀಪ ಕುಲಕರ್ಣಿ, ಎಸ್‌.ಬಿ. ಸತ್ಯನಾರಾಯಣ ಇದ್ದರು.

ಪ್ರಾಚಾರ್ಯ ಜಿ.ಬಿ. ಕುಲಕರ್ಣಿ ಸ್ವಾಗತಿಸಿದರು. ಡಿ.ಜಿ. ಕುಲಕರ್ಣಿ ಪರಿಚಯಿಸಿದರು. ಆರ್‌.ಆರ್‌. ದೇಶಮುಖ, ಪ್ರೊ. ಎ.ಎಸ್‌. ಲಿಗಾಡೆ ವರದಿ ವಾಚಿಸಿದರು. ಪಿ.ಎಸ್‌. ಹುಯಿಲಗೋಳ, ಶ್ರೀನಿವಾಸ ನರಗುಂದ, ಪ್ರೊ. ಜಿ.ಜೆ. ಮೊರಬ ನಿರೂಪಿಸಿದರು. ಬೋರಮ್ಮ ಹಂಗರಗಿ ವಂದಿಸಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next