Advertisement

ಬೇಡಿಕೆಯಷ್ಟು ಔಷಧ ಸರಬರಾಜು ಆಗುತ್ತಿಲ್ಲ; ಸಿಬಂದಿ ಕೊರತೆ

06:00 AM Jun 23, 2018 | Team Udayavani |

ತೆಕ್ಕಟ್ಟೆ: ಕುಂದಾಪುರ ತಾಲೂಕಿನ ಗ್ರಾಮೀಣ ಭಾಗದಲ್ಲಿರುವ ಕೆದೂರು ಪ್ರಾಥಮಿಕ ಆರೋಗ್ಯ ಕೇಂದ್ರವು ಸುತ್ತಮುತ್ತಲ ಗ್ರಾಮೀಣ ಜನರ ಆರೋಗ್ಯದ ಬಗ್ಗೆ ಉತ್ತಮ ಸೇವೆ ನೀಡುತ್ತಾ ಬಂದಿದ್ದು  ಬೇಳೂರು, ಕೆದೂರು, ಉಳೂ¤ರು ಗ್ರಾಮೀಣ ಭಾಗಗಳು ಸೇರಿದಂತೆ  ಸುಮಾರು 9,796 ಮಂದಿ ವಾಸವಾಗಿರುವ ಪ್ರದೇಶದಲ್ಲಿ ಕಾರ್ಯ ವ್ಯಾಪ್ತಿಯನ್ನು ಹೊಂದಿದೆ .

Advertisement

ಸೌಲಭ್ಯಗಳು 
ಸುವ್ಯವಸ್ಥಿತವಾದ ಕಟ್ಟಡವನ್ನು ಹೊಂದಿರುವ ಈ ಕೇಂದ್ರದಲ್ಲಿ ಉತ್ತಮ ವೈದ್ಯಾಧಿಕಾರಿಗಳು, 8 ಸಿಬಂದಿಗಳು ಲಭ್ಯವಿದ್ದಾರೆ. 7 ಮಂದಿ ಆಶಾ ಕಾರ್ಯ ಕರ್ತರು ಸೇವೆ ಸಲ್ಲಿಸುತ್ತಿದ್ದಾರೆ. ಹೊರ ರೋಗಿಗಳ ತಪಾಸಣಾ ವಿಭಾಗ
ದಲ್ಲಿ ಆರು ಬೆಡ್‌ಗಳಿರುವ ಸುವ್ಯವಸ್ಥಿತ ವಾದ ಕೊಠಡಿ ಇದೆ.

ಜನ ಜಾಗೃತಿ ಮಳೆಗಾಲದ ಆರಂಭ
ದಲ್ಲಿ ಆಶಾ ಕಾರ್ಯ ಕರ್ತೆಯರು ಗ್ರಾಮದಲ್ಲಿನ ಪ್ರತಿ ಮನೆ ಮನೆಗೆ ಭೇಟಿ ನೀಡಿ ಮನೆಯ ಸುತ್ತಮುತ್ತಲಿನ ಪ್ಲಾಸ್ಟಿಕ್‌ ತೊಟ್ಟೆ, ಬೊಂಡ, ಟಯರ್‌, ನೀರಿನ ಟ್ಯಾಂಕ್‌ ಸೇರಿದಂತೆ ಮಳೆಗಾಲದ ಕೊಳಚೆ ನೀರು ಶೇಖರಣೆಯಾಗಿ ಸೊಳ್ಳೆ, ಕ್ರಿಮಿ ಕೀಟಗಳಿಂದ ಸಾಂಕ್ರಾಮಿಕ ರೋಗ ಹರಡದಂತೆ ನಿಗಾ ವಹಿಸುವಂತೆ ಅರಿವು ಮೂಡಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ.

ಸ್ತಬ್ಧಗೊಂಡ ಸ್ಥಿರ ದೂರವಾಣಿ 
ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಆರೋಗ್ಯ ಕೇಂದ್ರಗಳಲ್ಲಿ ಹೊರ ರೋಗಿಗಳು ವೈದ್ಯಾಧಿಕಾರಿ ಅಥವಾ ಕೇಂದ್ರವನ್ನು ತುರ್ತಾಗಿ ಸಂಪರ್ಕಿಸಬೇಕಿದ್ದರೆ ಸ್ಥಿರ ದೂರವಾಣಿ ಎಕ್ಸ್‌ಚೇಂಜ್‌ನಲ್ಲಿ ಮಾತ್ರ ರಿಂಗಿಸುವ ಶಬ್ದ ಕೇಳಿಸುತ್ತವೆ ವಿನಾ ಆರೋಗ್ಯ ಕೇಂದ್ರದಲ್ಲಿ ಮಾತ್ರ ಸ್ಥಿರ ದೂರವಾಣಿ ಸ್ಥಬ್ಧಗೊಂಡ ಹಲವು ತಿಂಗಳುಗಳೇ ಕಳೆದಿವೆ. ಇಂಟರ್‌ ನೆಟ್‌ ಸಂಪರ್ಕಕ್ಕಾಗಿ ಖಾಸಗಿ ಒಡೆತನದ ಏರ್‌ಟೆಕ್‌ ಸಂಪರ್ಕವನ್ನು ಹೊಂದಿರುವುದು ವಿಪರ್ಯಾಸವೇ ಸರಿ.

ಸಿಬಂದಿ ಕೊರತೆ 
ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಬೇಳೂರು, ಕೆದೂರು, ಉಳೂ¤ರು ಒಟ್ಟು ಮೂರು ಉಪ ಕೇಂದ್ರಗಳಿವೆ. ಕೇಂದ್ರದಲ್ಲಿರುವ 9 ಮಂದಿ ಸಿಬಂದಿಗಳಲ್ಲಿ ಐದು ಮಂದಿ ನೌಕರರು ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದಾರೆ, 1 ಹಿರಿಯ ಪುರುಷ ಆ.ಸಹಾಯಕ ಹುದ್ದೆ , 2 ಕಿರಿಯ ಮಹಿಳಾ ಆ.ಸಹಾಯಕ ಹುದ್ದೆ , 1ಫಾರ್ಮಾಸಿಸ್ಟ್‌  ಹುದ್ದೆ, 1 ಕ್ಲರ್ಕ್‌ ಹುದ್ದೆ ಸೇರಿದಂತೆ 1 ಗ್ರೂಪ್‌ ಡಿ ಹುದ್ದೆ ಖಾಲಿ ಇದೆ.

Advertisement

ಪ್ರಾ.ಆ. ಕೇಂದ್ರ ಕೆದೂರು ಸಂಪರ್ಕ: 08254 287316

ತಡೆಗೋಡೆ ಅಗತ್ಯ ಈ ಗ್ರಾಮೀಣ ಭಾಗದಲ್ಲಿ  
ಹೊರ ರೋಗಿಗಳ ಸಂಖ್ಯೆ ಉತ್ತಮವಾಗಿದ್ದಾರೆ. ನಾವು ಕೇಳಿದಷ್ಟು ಪ್ರಮಾಣದ ಎಲ್ಲಾ ಔಷಧಗಳನ್ನು ಮಂಗಳೂರಿನಿಂದ ಸರಬರಾಜು ಮಾಡುವವರು ನೀಡುವುದಿಲ್ಲ . ಆರೋಗ್ಯ ಕೇಂದ್ರಕ್ಕೆ ಸಂಬಂಧಿಸಿದಂತೆ ಸುಮಾರು 1.10 ಎಕರೆ ವಿಸ್ತೀರ್ಣದ ಜಾಗಗಳಿದ್ದು ಸಮರ್ಪಕವಾದ ತಡೆಗೋಡೆಗಳು ನಿರ್ಮಾಣವಾಗಬೇಕಾಗಿದೆ. 
– ಡಾ| ಅರ್ಪಿತಾ ಬಿ.ಕೆ. 
ಪ್ರಾಥಮಿಕ ಆರೋಗ್ಯ ಕೇಂದ್ರ ಕೆದೂರು.

– ಲೋಕೇಶ್‌ ಆಚಾರ್ಯ ತೆಕ್ಕಟ್ಟೆ 

Advertisement

Udayavani is now on Telegram. Click here to join our channel and stay updated with the latest news.

Next