Advertisement

Udupi; ಮಸ್ಟರಿಂಗ್‌ ಕೇಂದ್ರದಲ್ಲಿ ಸಕಲ ತಯಾರಿ

01:51 AM Apr 25, 2024 | Team Udayavani |

ಉಡುಪಿ: ಮತದಾನಕ್ಕೆ ಜಿಲ್ಲೆಯಾದ್ಯಂತ ಸಕಲ ಸಿದ್ಧತೆಗಳು ನಡೆದಿವೆ. ಮಸ್ಟರಿಂಗ್‌ ಕೇಂದ್ರಗಳಾದ ಉಡುಪಿಯ ಸೈಂಟ್‌ ಸಿಸಿಲಿ, ಕಾಪುವಿನ ದಂಡತೀರ್ಥ, ಕುಂದಾಪುರದ ಭಂಡಾರ್‌ಕಾರ್ ಹಾಗೂ ಕಾರ್ಕಳದ ಎಂಪಿಎಂ ಪ.ಪೂ. ಕಾಲೇಜಿನಲ್ಲಿ ಬುಧವಾರವೇ ಎಲ್ಲ ತಯಾರಿಗಳನ್ನು ಮಾಡಲಾಗಿದ್ದು, ಸಿಬಂದಿ ಹಾಗೂ ಅಧಿಕಾರಿಗಳು ಮತಯಂತ್ರದೊಂದಿಗೆ ಎ. 25ರಂದು ಮತಗಟ್ಟೆಗಳಿಗೆ ತೆರಳಲಿದ್ದಾರೆ.

Advertisement

ಮತಯಂತ್ರ ಗಳನ್ನು ಕಟ್ಟಡದ ಒಳಗೆ ಭದ್ರವಾಗಿ ಇರಿಸಲಾಗಿದ್ದು, ಗುರುವಾರ ಆಯಾ ಮತಗಟ್ಟೆಗಳಿಗೆ ತಲುಪಲಿದೆ. ಈಗಾಗಲೇ ವಾಹನಗಳನ್ನು ಸಿದ್ಧಪಡಿಸಿಕೊಳ್ಳಲಾಗಿದೆ. ಸಾಮಾನ್ಯ ವಾಹನದ ಜತೆಗೆ ಸೆಕ್ಟರ್‌ ಅಧಿಕಾರಿಗಳ ವಾಹನ ಇರಲಿದೆ.

ಬಾಗಿಲಿಗೆ ಹಲಗೆ
ಮತಯಂತ್ರಗಳನ್ನು ಇರಿಸುವ ಶಾಲಾ ಕೊಠಡಿಗಳಿಗೆ ಮರದ ಹಲಗೆ ಹಾಕಿ ಭದ್ರಪಡಿಸಲಾಗಿದೆ. ಒಳಭಾಗದಲ್ಲಿಯೂ ಸೂಕ್ತ ಮಾರ್ಕಿಂಗ್‌ ಮಾಡುವ ಮೂಲಕ ಅಚ್ಚುಕಟ್ಟು ನಿರ್ವಹಣೆಗೆ ಆದ್ಯತೆ ಕಲ್ಪಿಸಲಾಗಿದೆ. ಪೊಲೀಸರು ಹಾಗೂ ಹೋಂ ಗಾರ್ಡ್‌ ಗಳನ್ನು ಸದ್ಯಕ್ಕೆ ಕರ್ತವ್ಯಕ್ಕೆ ಸ್ಥಳದಲ್ಲಿ ನಿಯೋಜನೆ ಮಾಡಲಾಗಿದೆ.

ಸಿಸಿ ಕೆಮರಾ
ಶಾಲಾ ಆವರಣದ ಒಳಭಾಗ ಹಾಗೂ ಹೊರಭಾಗದಲ್ಲಿ ಪೊಲೀಸರಷ್ಟೇ ಅಲ್ಲದೆ ಸಿಸಿ ಕೆಮರಾ ಕಣ್ಗಾವಲು ಕೂಡ ಇರಲಿದೆ. ಒಳಭಾಗದಲ್ಲಿ ಶಾಮಿಯಾನ ಅಳವಡಿಸಲಾಗಿದ್ದು, ಅಧಿಕಾರಿಗಳಿಗೆ ಹಾಗೂ ಸಿಬಂದಿಗೆ ಊಟೋಪಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.

ಭದ್ರತೆಗೆ ಪೊಲೀಸ್‌ ಇಲಾಖೆ ಸನ್ನದ್ಧ
ಉಡುಪಿ: ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಬಿಗಿ ಪೊಲೀಸ್‌ ಭ ದ್ರತೆ ಕಲ್ಪಿಸಲಾಗಿದ್ದು 866 ಬೂತ್‌ಗಳ ಪೈಕಿ 177 ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ.

Advertisement

ಎಲ್ಲ ಸಾಮಾನ್ಯ ಬೂತ್‌ಗಳಲ್ಲಿ ಕನಿಷ್ಠ ಒಬ್ಬ ಪೊಲೀಸ್‌ ಸಿಬಂದಿ ಇರಲಿದ್ದು, ಪ್ರತಿ ಬೂತ್‌ಗಳನ್ನು ಸೇರಿಸಿ 57 ವಲಯಗಳಾಗಿ ವಿಂಗಡಿಸಲಾಗಿದೆ. ಪ್ರತೀ ವಲಯವನ್ನು ಪಿಎಸ್‌ಐ ಅಥವಾ ಎಎಸ್‌ಐಗಳು ಮೇಲ್ವಿಚಾರಣೆ ನಡೆಸುವರು. 57 ಮಂದಿ ಸೆಕ್ಟರ್‌ ಅಧಿಕಾರಿಗಳು ಹಾಗೂ 14 ಮಂದಿ ಇನ್‌ಸ್ಪೆಕ್ಟರ್‌ ಶ್ರೇಣಿಯ ಅಧಿಕಾರಿಗಳು ಮೇಲ್ವಿಚಾರಣೆ ಮಾಡಲಿದ್ದು, ಇವರಲ್ಲದೇ ಪ್ರತೀ ವಿಧಾನಸಭಾ ಕ್ಷೇತ್ರಕ್ಕೆ ಒಬ್ಬರಂತೆ 4 ಮಂದಿ ಡಿವೈಎಸ್‌ಪಿಗಳು ನಿಗಾ ವಹಿಸಲಿದ್ದಾರೆ.

ಒಟ್ಟು 177 ಸೂಕ್ಷ್ಮ ಬೂತ್‌ಗಳ ಪೈಕಿ 36 ಅನ್ನು ಈ ಹಿಂದೆ ನಕ್ಸಲ್‌ ಪೀಡಿತ ಪ್ರದೇಶವಾಗಿದ್ದ ಜಾಗದಲ್ಲಿರಲಿವೆ. 36 ಬೂತ್‌ಗಳಿಗೆ ಸಶಸ್ತ್ರಧಾರಿ ಪೊಲೀಸ್‌ ನಿಯೋಜಿಸಲಾಗುವುದು. ಹೆಚ್ಚುವರಿಯಾಗಿ ಆರು ಬೂತ್‌ಗೆ ಒಂದರಂತೆ 6 ಸಶಸ್ತ್ರ ಪೊಲೀಸ್‌ ಗಸ್ತು ವಾಹನಗಳನ್ನು ಒದಗಿಸಲಾಗುವುದು. ಈ 36 ಬೂತ್‌ಗಳೂ ಡಿವೈಎಸ್‌ಪಿ ಅವರ ಮೇಲ್ವಿಚಾರಣೆಯಲ್ಲಿರಲಿದೆ. ಇಲ್ಲಿ ವೆಬ್‌ಕಾಸ್ಟಿಂಗ್‌ ಹಾಗೂ ಮೈಕ್ರೋ ಅಬ್ಸವರ್‌ìಗಳೂ ಹೆಚ್ಚುವರಿಯಾಗಿ ಇರುವರು. ಕಾನೂನು ಸುವ್ಯವಸ್ಥೆಗೆ ಅಡ್ಡಿ ಉಂಟಾಗದಂತೆ ತಡೆಯಲು ಅಧಿಕಾರಿಗಳು, ಎಲ್ಲ ಇನ್‌ಸ್ಪೆಕ್ಟರ್‌ಗಳನ್ನೊಳಗೊಂಡ ಸ್ಟೈಕಿಂಗ್‌ ಫೋರ್ಸ್‌ ಇರಲಿದೆ.

ಅನಿರೀಕ್ಷಿತ ಸಂದರ್ಭಗಳು ಎದುರಾ ದಲ್ಲಿ 4 ರಿಸರ್ವ್‌ ಪ್ಲಟೂನ್‌ಗಳು, ಎಸ್‌ಪಿ ದರ್ಜೆಯ ಮೂವರು ಅಧಿಕಾರಿಗಳು, 6 ಡಿವೈಎಸ್‌ಪಿಗಳು, 15 ಇನ್‌ಸ್ಪೆಕ್ಟರ್‌ಗಳು, ಇತರ ಶ್ರೇಣಿಯ 1,501 ಪೊಲೀಸರು, ಸುಮಾರು 500 ಮೀಸಲು ಪೊಲೀಸರನ್ನು ನಿಯೋಜಿಸಲಾಗಿದೆ. ಈಗಾಗಲೇ ಪೊಲೀಸರು ಪಥ ಸಂಚಲನ ನಡೆಸಿದ್ದಾರೆ. ಅಲ್ಲದೇ ಠಾಣೆಗಳಲ್ಲಿ ಸಿಬಂದಿ ನಿತ್ಯದ ಕರ್ತವ್ಯ ನಿರ್ವಹಿಸುವರು ಎಂದು ಎಸ್‌ಪಿ ಡಾ| ಕೆ.ಅರುಣ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next