Advertisement

Mars; ಮಂಗಳ ಗ್ರಹದಲ್ಲಿ 4 ಮಂದಿ ವಾಸ: ಆದ್ರೆ ಇದು ನಿಜವಲ್ಲ!

10:46 PM Apr 30, 2024 | keerthan |

ವಾಷಿಂಗ್ಟನ್‌: ನಾಲ್ವರು ಸ್ವಯಂ ಸೇವಕರು 45 ದಿನಗಳ ಮಂಗಳನ ಅಂಗಳಕ್ಕೆ  ಮೇ 10ರಂದು ಹೋಗಲಿದ್ದಾರೆ! ಇದನ್ನು ಕೇಳಿ ಆಶ್ಚರ್ಯವಾಗಬಹುದು. ಆದರೆ, ಈ ನಾಲ್ವರು ನಿಜವಾಗಿಯೂ ಮಂಗಳ ಗ್ರಹಕ್ಕೆ ಹೋಗುತ್ತಿಲ್ಲ. ಇದೊಂದು ಸಿಮ್ಯುಲೇಟೆಡ್‌ ಮಿಷನ್‌ (ಕೃತಕ ಯೋಜನೆ) ಆಗಿದೆ.

Advertisement

ಅಮೆರಿಕದ ಹೂಸ್ಟನ್‌ ನಾಸಾದ ಜಾನ್ಸನ್‌ ಸ್ಪೇಸ್‌ ಸೆಂಟರ್‌ನಲ್ಲಿರುವ ಮಂಗಳನ ಕೃತಕ ಆವಾಸಸ್ಥಾನಕ್ಕೆ ಅವರು ತೆರಳಲಿದ್ದಾರೆ. ಹ್ಯುಮನ್‌ ಎಕ್ಸ್‌ಪ್ಲೋರೇಷನ್‌ ರಿಸರ್ಚ್‌ ಅನಲಾಗ್‌(ಹೇರಾ)ನ ಭಾಗವಾಗಿ ಈ ನಾಲ್ವರು ಸಿಮ್ಯುಲೇಟೆಡ್‌ ಮಿಷನ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಈ 45 ದಿನಗಳ ಕಾಲ ಅವರು, ನಿಜವಾಗಿಯೂ ಮಂಗಳನ ಅಂಗಳದಲ್ಲಿ ಎದುರಾಗುವ ಎಲ್ಲ ಸಮಸ್ಯೆಗಳನ್ನು ಅನುಭವಿಸಲಿದ್ದಾರೆ. ಅಲ್ಲದೇ ವೈಜ್ಞಾನಿಕ ಸಂಶೋಧನೆಯನ್ನೂ ಕೈಗೊಳ್ಳಲಿದ್ದಾರೆ. 45 ದಿನಗಳ ಬಳಿಕ ಅವರು ಮಂಗಳನ ಕೃತಕ ಆವಾಸಸ್ಥಾನದಿಂದ ಹೊರ ಬರಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next