ಬೆಂಗಳೂರು: ಪಕ್ಷದ ವಿಪ್ ಉಲ್ಲಂ ಸಿರುವ ಅತೃಪ್ತ ಶಾಸಕರನ್ನು ಅನರ್ಹಗೊಳಿಸುವಂತೆ ಸ್ಪೀಕರ್‌ಗೆ ದೂರು ನೀಡಿರುವ ಕಾಂಗ್ರೆಸ್ ಮತ್ತೂಂದು ಕಡೆ ಅವರ ಮನವೊಲಿಸುವ ಯತ್ನವನ್ನೂ ಮುಂದುವರಿಸಿದೆ ಎಂದು ಹೇಳಲಾಗುತ್ತಿದೆ.
ಸ್ವತಃ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ರಮೇಶ್ ಜಾರಕಿಹೊಳಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ವಾಪಸ್ ಬಂದು ಸದನಕ್ಕೆ ಹಾಜರಾಗು ವಂತೆ ಮನವಿ ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ನಿಮ್ಮ ಬೇಡಿಕೆಗಳನ್ನು ಪಕ್ಷ ಪರಿಗಣಿಸುತ್ತದೆ. ಅಗತ್ಯ ಬಿದ್ದರೆ ಮಂತ್ರಿ ಸ್ಥಾನ ನೀಡುವ ಕುರಿತಂತೆಯೂ ಚರ್ಚಿಸಿ ತೀರ್ಮಾನ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎನ್ನಲಾಗಿದ್ದು, ಎಲ್ಲರೂ ವಾಪಸ್ ಬರುವಂತೆ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಮಧ್ಯೆ ಮುಂಬೈನಲ್ಲಿದ್ದ ನಾಲ್ವರುಅತೃಪ್ತ ಶಾಸಕರು ಸೋಮವಾರ ರಾತ್ರಿಯೇ ಮುಂಬೈ ಬಿಟ್ಟಿದ್ದು ಮಂಗಳವಾರ ಬೆಂಗಳೂರಿಗೆ ಬರಲಿದ್ದಾರೆ. ಬಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾ ಮಯ್ಯರನ್ನು ಭೇಟಿಯಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಬದಲಾದ ರಾಜಕೀಯ ಸನ್ನಿವೇಶ ದಲ್ಲಿ ನಾಲ್ವರು ಕಾಂಗ್ರೆಸ್‌ನಲ್ಲೇ ಇರಲು ತೀರ್ಮಾನಿಸಿದ್ದು, ಮುಂಬೈ ವಿಮಾನ ನಿಲ್ದಾಣದಲ್ಲಿ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕಾಣಿಸಿಕೊಂಡಿದ್ದು ಇದಕ್ಕೆ ಇಂಬು ಕೊಟ್ಟಿತ್ತು. ಆದರೆ, ಈಗಾಗಲೇ ಸ್ಪೀಕರ್‌ಗೆ ನಾಲ್ವರ ಅನರ್ಹತೆಗೆ ಮನವಿ ಸಲ್ಲಿಸಿರುವುದರಿಂದ ಕಾನೂನು ಹೋರಾಟದ ಬಗ್ಗೆ ಸಲಹೆ ಪಡೆಯುತ್ತಿದ್ದಾರೆ ಎಂದು ಹೇಳಲಾಗಿದೆ.
ಜೆಡಿಎಸ್ ಪ್ರತಿಭಟನೆ
ಈ ಮಧ್ಯೆ, ಕೆ.ಆರ್.ಪೇಟೆ ಶಾಸಕ ನಾರಾಯಣಗೌಡ ಅವರನ್ನು ಬಿಜೆಪಿಯವರು ಬಂಧನದಲ್ಲಿ ಟ್ಟು
ಕೊಂಡಿದ್ದಾರೆ ಎಂದು ಆರೋಪಿಸಿ ಜೆಡಿಎಸ್ ಶಾಸಕರು ಮುಂಬೈಗೆ ಹೋಗಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.