Advertisement

ಬ್ರಿಟಿಷ್‌ ಲೇಖಕ ಇಶಿಗುರೋಗೆ ನೋಬೆಲ್‌ ಸಾಹಿತ್ಯ ಪುರಸ್ಕಾರ

06:50 AM Oct 06, 2017 | Team Udayavani |

ಸ್ಟಾಕ್‌ಹೋಮ್‌: “ದಿ ರಿಮೈನ್ಸ್‌ ಆಫ್ ದ ಡೇ’ ಕೃತಿಯಿಂದ ಖ್ಯಾತರಾಗಿರುವ ಬ್ರಿಟಿಷ್‌ ಲೇಖಕ ಕಝುವೊ ಇಶಿಗುರೋಗೆ ಈ ಬಾರಿಯ ನೋಬೆಲ್‌ ಸಾಹಿತ್ಯ ಪುಸ್ಕಾರ ಸಂದಿದೆ. 

Advertisement

ಭಾವನಾತ್ಮಕ ಬರವಣಿಗೆಗೆ ಹೆಸರಾಗಿರುವ 62ರ ಹರೆಯದ ಲೇಖಕ ಇಶಿಗುರೋ, ಜಗತ್ತಿನೊಂದಿಗೆ ಸಂಪರ್ಕ ಹೊಂದುವ ಕುರಿತು ಜನರಲ್ಲಿರುವ ಭ್ರಮೆಗಳ ಆಳ, ಅಗಲವನ್ನು ಕೃತಿಗಳ ಮೂಲಕ ತೆರೆದಿಟ್ಟಿದ್ದಾರೆ. ಕಝುವೊ ಇಶಿಗುರೋ, ಸಿನಿಮಾ, ಟಿವಿ ಕಾರ್ಯಕ್ರಮಗಳಿಗೆ ಸ್ಕ್ರಿಪ್ಟ್ ಬರೆದಿದ್ದಾರೆ. 

ಇವರ “ದಿ ರಿಮೈನ್ಸ್‌ ಆಫ್ ದ ಡೇ’ ಕೃತಿಗೆ 1989ರಲ್ಲಿ ಮ್ಯಾನ್‌ ಬೂಕರ್‌ ಪ್ರಶಸ್ತಿ ಲಭಿಸಿದೆ. ಜಪಾನ್‌ನಲ್ಲಿ ಜನಿಸಿದ ಇಶಿಗುರೋ 5 ವರ್ಷದವರಿದ್ದಾಗ ಕುಟುಂಬ ಸಮೇತ ಬ್ರಿಟನ್‌ಗೆ ಬಂದು ನೆಲೆಸಿತ್ತು. 1982 ರಲ್ಲಿ ಬರೆದ “ಎ ಪೇಲ್‌ ವಿವ್‌ ಆಫ್ ಹಿಲ್ಸ್‌’ ಮತ್ತು 1986ರಲ್ಲಿ ಹೊರಬಂದ “ಆ್ಯನ್‌ ಆರ್ಟಿಸ್ಟ್‌ ಆಫ್ ದ ಫ‌ìಲೋಟಿಂಘ… ವರ್ಲ್ಡ್’ ಎಂಬ ಕೃತಿ ಗಳೆರಡೂ 2ನೇ ವಿಶ್ವಯುದ್ಧದ ನಂತರದ ಪರಿಸ್ಥಿತಿ ವಿವರಿಸಿದ್ದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next